Public News

News Subject: 
ಹಸಿವಾದ ಆನೆ ಹೆಲ್ಮೆಟ್ ನುಂಗಿದೆ! ವಿಡಿಯೋ ವೈರಲ್
Video Thumbnail: 
PublicNext--511488--node-nid
Category: 
Viral
Body: 

ಅಸ್ಸಾಂ: ಅರೆರೇ ಆನೆ ಹೆಲ್ಮೆಟ್ ನುಂಗಿದಿಯಂತೆ ಇದು ಸುಳ್ಳಲ್ಲ ಕಣ್ರೀ ಸಾಕ್ಷಿಗೆ ವಿಡಿಯೋ ಕೂಡಾ ಇದೆ ನೋಡಿ..

ರಸ್ತೆಗೆ ಬರುವ ಆನೆಗಳು ನಿಂತ ವಾಹನಗಳನ್ನು ಧ್ವಂಸ ಮಾಡುವುದನ್ನು ಕಂಡಿದ್ದೇನೆ ಆದ್ರೆ ಇಲ್ಲೊಂದು ಆನೆ ಬೈಕ್ ಮೇಲಿದ್ದ ಹೆಲ್ಮೆಟ್ ನುಂಗಿ ಪರಾರಿಯಾಗಿದೆ. ಆದ್ರೆ ಇದು ಅಚ್ಚರಿಯಾದ್ರು ಸತ್ಯ.

ಈ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಸ್ಸಾಂನ ಗುವಾಹಟಿಯ ಸತ್ ಗಾಂವ್ ಸೇನಾ ಶಿಬಿರದ ಬಳಿ ಈ ಘಟನೆ ಸಂಭವಿಸಿದೆ. ಸೊಂಡಿಲಿಂದ ಹೆಲ್ಮೆಟ್ ತೆಗೆದುಕೊಂಡು ನುಂಗಿದ ಸಲಗ ಆ ಮೇಲೆ ತನಗೇನೂ ಗೊತ್ತಿಲ್ಲ ಎಂಬಂತೆ ಮುಂದೆ ಸಾಗಿದೆ.

ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, 'ಪಾಪ ಆನೆಗೆ ಹಸಿವಾಗಿತ್ತೇನೋ..' ಎಂದು ನೆಟ್ಟಿಗರು ಕಮೆಂಟ್ ಕೊಡುತ್ತಿದ್ದಾರೆ.

Reach Count: 
29799