Public News

News Subject: 
ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್: 157 ಸಾವು
Upload Image: 
PublicNext--511367--node-nid
Category: 
Health & Fitness
COVID
Body: 

ಬೆಂಗಳೂರು: ಹೆಮ್ಮಾರಿ ಸೋಂಕಿನ ಮಧ್ಯೆ ರಾಜ್ಯಕ್ಕೆ ಕಾಲಿಟ್ಟು ಮಾರಕ ಸೋಂಕು ಬ್ಲ್ಯಾಕ್ ಫಂಗಸ್ ನಿಂದ ಇದುವರೆಗೆ ರಾಜ್ಯದಲ್ಲಿ 157 ಮಂದಿ ಸಾವನ್ನಪ್ಪಿದ್ದಾರೆ ಎಂದು ಸರಕಾರವು ಹೈಕೋರ್ಟ್ಗೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಈವರೆಗೆ 2,282 ಬ್ಲ್ಯಾಕ್ ಫಂಗಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 1,947 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. 157 ಮಂದಿ ಮೃತಪಟ್ಟಿದ್ದಾರೆ ಎಂದು ವಿಚಾರಣೆ ವೇಳೆ ರಾಜ್ಯ ಸರಕಾರ ವಕೀಲರು ಲಿಖೀತವಾಗಿ ತಿಳಿಸಿದರು.

ಕೇಂದ್ರದಿಂದ ಈವರೆಗೆ 22,050 ಚುಚ್ಚುಮದ್ದು ಹಂಚಿಕೆಯಾಗಿದ್ದು, ಅದರಲ್ಲಿ 19,950 ಡೋಸ್ ಗಳನ್ನು ಸ್ವೀಕರಿಸಲಾಗಿದೆ. ಪ್ರತೀ ಸೋಂಕುಪೀಡಿತರಿಗೆ 6 ರಿಂದ 8 ವಾರಗಳಲ್ಲಿ 30 ವಯಲ್ ನೀಡಬೇಕಾಗುತ್ತದೆ. ಪ್ರಕರಣಗಳ ನಿರ್ವಹಣೆ ಮತ್ತು ಚಿಕಿತ್ಸೆ ಸಂಬಂಧಿಸಿ ಐಸಿಎಂಆರ್ ಜೂ. 9ರಂದು ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ ಎಂದು ತಿಳಿಸಿದರು.

Reach Count: 
49878