Public News

News Subject: 
ಧವನ್ ನಾಯಕತ್ವದಲ್ಲಿ ಲಂಕಾ ಪ್ರವಾಸಕ್ಕೆ ತಂಡ ರೆಡಿ
Upload Image: 
PublicNext--511365--node-nid
Category: 
Sports
Body: 

ಮುಂಬೈ: ಧವನ್ ನಾಯಕತ್ವದಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳ ಸರಣಿಗಾಗಿ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಟೆಸ್ಟ್ ಸರಣಿಗಾಗಿ ಭಾರತ ಹಿರಿಯರ ತಂಡ ಇಂಗ್ಲೆಂಡ್ ನಲ್ಲಿರುವ ಕಾರಣ ಜುಲೈನಲ್ಲಿ ಲಂಕಾದಲ್ಲಿ ನಡೆಯುವ ಪಂದ್ಯಕ್ಕೆ ಬಹುತೇಕ ಹೊಸಬರ ತಂಡವನ್ನು ಕಟ್ಟಲಾಗಿದೆ.

ಗುರುವಾರ ರಾತ್ರಿ ಬಿಸಿಸಿಐ ತಂಡ ಪ್ರಕಟಿಸಿದೆ. ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದು, ಭುವನೇಶ್ವರ್ ಕುಮಾರ್ ಉಪ ನಾಯಕನಾಗಿದ್ದಾರೆ. ನಾಯಕ ಧವನ್ ಸೇರಿ ನಾಲ್ವರು ಆರಂಭಿಕ ಆಟಗಾರರು, ಇಬ್ಬರು ವಿಕೆಟ್ ಕೀಪರ್, ಮೂರು ಸ್ಪಿನ್ನರ್, ನಾಲ್ವರು ವೇಗಿಗಳು, ಮೂವರು ಆಲ್ ರೌಂಡರ್ ಒಳಗೊಂಡಂತೆ ಒಟ್ಟು 19 ಜನರ ತಂಡ ಆಯ್ಕೆ ಮಾಡಲಾಗಿದೆ.

ಮೂವರು ಕನ್ನಡಿಗರು: ತಂಡದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ ನೀಡಲಾಗಿದೆ. ಮನೀಷ್ ಪಾಂಡೆ, ಕೃಷ್ಣಪ್ಪ ಗೌತಮ್ ಜೊತೆ ದೇವದತ್ತ ಪಡಿಕ್ಕಲ್ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ. ಜುಲೈ 13, 16 ಮತ್ತು 18ರಂದು ಮೂರು ಏಕದಿನ ಪಂದ್ಯಗಳು ನಡೆಯಲಿದೆ. ಜುಲೈ 21, 23 ಮತ್ತು 25ರಂದು ಮೂರು ಟಿ20 ಪಂದ್ಯಗಳು ನಡೆಯಲಿದೆ. ಎಲ್ಲಾ ಆರು ಪಂದ್ಯಗಳು ಕೊಲೊಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

ತಂಡ: ಶಿಖರ್ ಧವನ್ (ನಾ), ಭುವನೇಶ್ವರ್ ಕುಮಾರ್ (ಉ.ನಾ), ಪೃಥ್ವಿ ಶಾ, ದೇವದತ್ತ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಯುಜುವೇಂದ್ರ ಚಹಲ್, ರಾಹುಲ್ ಚಹರ್ , ಕೃಷ್ಣಪ್ಪ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ನವದೀಪ್ ಸೈನಿ, ಚೇತನ್ ಸಕರಿಯಾ.

Reach Count: 
37931