Public News

News Subject: 
ತೈಲ ದರ ಏರಿಕೆ ವಿರುದ್ಧ ಇಂದಿನಿಂದ ಕಾಂಗ್ರೆಸ್ ಪ್ರತಿಭಟನೆ
Upload Image: 
PublicNext--511341--node-nid
Category: 
Business
Body: 

ಬೆಂಗಳೂರು: ಕೊರೊನಾದಿಂದ ಕಂಗೇಟ್ಟ ಜನರಿಗೆ ತೈಲ ಬೆಲೆ ಏರಿಕೆ ಮತ್ತೊಂದು ಶಾಕ್ ನೀಡಿದೆ. ಇನ್ನು ಈ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಇಂದಿನಿಂದ ಐದು ದಿನ ರಾಜ್ಯಾದ್ಯಂತ ಐದು ಸಾವಿರ ಪೆಟ್ರೋಲ್ ಬಂಕ್ ಗಳ ಮುಂದೆ ಸರಣಿ ಪ್ರತಿಭಟನೆ ಆರಂಭಿಸಿದೆ.

ಈ ಪ್ರತಿಭಟನೆ ಯಶಸ್ವಿಗೊಳಿಸಲು ಕೆಪಿಸಿಸಿಯಿಂದ ಜಿಲ್ಲಾವಾರು ಉಸ್ತುವಾರಿಗಳನ್ನು ನೇಮಿಸಲಾಗಿದೆ.ಶಾಸಕರು, ಮಾಜಿ ಸಚಿವರು ಮತ್ತು ಸಂಸದರು, ಮಾಜಿ ಸಂಸದರಿಗೆ ಜಿಲ್ಲಾವಾರು ಉಸ್ತುವಾರಿ ನೀಡಿದ್ದು, ಪ್ರತಿಯೊಬ್ಬರೂ ಪ್ರತಿಭಟನೆಯ ಮೇಲೆ ಜೂಮ್ ಮೂಲಕ ನಿಗಾ ಇರಿಸಿ ಕೆಪಿಸಿಸಿಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

Reach Count: 
39287