Kshetra Samachara

Local News Subject: 
ಜೂನ್ 14ರ ಬಳಿಕ ಉಡುಪಿ ಜಿಲ್ಲೆಯ ಲಾಕ್ ಡೌನ್ ಸಡಿಲಿಕೆ ವಿಕೇಂಡ್ ಟೈಟ್
City: 
Udupi
Mangalore
Upload Image: 
PublicNext--511338--node-nid
Category: 
Health & Fitness
Government
COVID
Body: 

ಉಡುಪಿ : ರಾಜ್ಯದಲ್ಲಿ ಜಾರಿಯ್ಲಲಿರುವ ಲಾಕ್ ಡೌನ್ ಸಂಬಂಧ ನಿನ್ನೆ ಸಿಎಂ ಯಡಿಯೂರಪ್ಪ ಮಹತ್ವದ ಮಾಹಿತಿ ಕೊಟ್ಟಿದ್ದಾರೆ.
ಆ ಪೈಕಿ ಕೃಷ್ಣನಗರಿ ವಿಕೇಂಡ್ ಸ್ಥಬ್ದವಾಗಲಿದೆ. ಹೌದು ಜೂನ್ 14ರ ಬಳಿಕ ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆಗೊಳಿಸಿ
ಸಂಜೆ 7ರಿಂದ ಬೆಳಗ್ಗೆ 5ರ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಶನಿವಾರ, ರವಿವಾರಗಳಂದು ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರದೆ. ಶುಕ್ರವಾರ ಸಂಜೆ 7 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಗೆ ಬರಲಿದ್ದು, ಸೋಮವಾರ ಬೆಳಿಗ್ಗೆ 5 ಗಂಟೆಯ ತನಕ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಉಳಿದಂತೆ ಎಲ್ಲಾ ನಿರ್ಮಾಣ ಕಾರ್ಯಗಳಿಗೆ ಅನುಮತಿ ನೀಡಲಾಗಿದ್ದು,ಕಾರ್ಖಾನೆಗಳಲ್ಲಿ ಶೇ. 50ರಷ್ಟು ಗಾರ್ಮೆಂಟ್ಸ್ ಗಳಲ್ಲಿ ಶೇ. 30ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯಾರಂಭಿಸಲು ಅವಕಾಶ ನೀಡಲಾಗಿದೆ.

ಇನ್ನು ಖಾಸಗಿ ಹಾಗೂ ಸರಕಾರಿ ಬಸ್ ಸಂಚಾರಕ್ಕೆ ಬ್ರೇಕ್ ಇದ್ದು ಆಟೋ ಟ್ಯಾಕ್ಸಿಗಳಲ್ಲಿ ಇಬ್ಬರು ಸಂಚರಿಸಲು ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಕೊರೊನಾ ಹೆಚ್ಚಾಗಿರುವ 11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಈ ನಿಯಮ ಫಿಕ್ಸ್.

Reach Count: 
9835