Kshetra Samachara

Local News Subject: 
ಸೋಮವಾರದವರೆಗೂ ಧಾರವಾಡ ಜಿಲ್ಲೆಯಲ್ಲಿ ಲಾಕ್‌ಡೌನ್ ಯಥಾಸ್ಥಿತಿಯಲ್ಲಿರುತ್ತೆ: ಡಿ.ಸಿ
City: 
Hubballi-Dharwad
Upload Image: 
PublicNext--511250--node-nid
Category: 
Health & Fitness
Law and Order
COVID
Body: 

ಧಾರವಾಡ: ಬರುವ ಸೋಮವಾರ ಬೆಳಗಿನ 6 ಗಂಟೆಯವರೆಗೂ ಧಾರವಾಡ ಜಿಲ್ಲೆಯಲ್ಲಿ ಲಾಕ್‌ಡೌನ್ ಯಥಾಸ್ಥಿತಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಪಬ್ಲಿಕ್ ನೆಕ್ಸ್ಟ್‌ಗೆ ದೂರವಾಣಿ ಮೂಲಕ ಮಾಹಿತಿ ನೀಡಿರುವ ಅವರು, ಅನ್‌ಲಾಕ್‌ ಜಿಲ್ಲೆಗಳಲ್ಲಿ ಯಾವ್ಯಾವುದಕ್ಕೆ ರಿಯಾಯ್ತಿ ಕೊಡಬೇಕು ಹಾಗೂ ವ್ಯಾಪಾರ, ವಹಿವಾಟು ಎಷ್ಟು ಗಂಟೆಯವರೆಗೆ ಇರಬೇಕು ಎಂಬುದರ ಕುರಿತು ಸರ್ಕಾರದಿಂದ ಸ್ಪಷ್ಟ ಮಾಹಿತಿ ಬರಲಿದೆ. ಅದು ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ, ನಮ್ಮ ಜಿಲ್ಲೆಯಲ್ಲಿ ಯಾವ್ಯಾವುದಕ್ಕೆ ರಿಯಾಯ್ತಿ ಕೊಡಬೇಕು? ಕೊರೊನಾ ಹತೋಟಿಗೆ ತರಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕಾ? ಎಂಬೆಲ್ಲ ವಿಷಯಗಳ ಕುರಿತು ಚರ್ಚೆ ನಡೆಸಿ, ಅಧಿಕೃತವಾಗಿ ಆದೇಶ ಹೊರಡಿಸಲಾಗುವುದು. ಅಲ್ಲಿಯವರೆಗೂ ಅಂದರೆ ಸೋಮವಾರದವರೆಗೂ ಈ ಲಾಕ್‌ಡೌನ್‌ ಯಥಾಸ್ಥಿತಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Reach Count: 
78440