Kshetra Samachara

Local News Subject: 
ಕಲಘಟಗಿ:ಭಕ್ತರ ಹರ್ಷೂದ್ಘಾರಗಳೊಂದಿಗೆ ಶ್ರಿ ಚನ್ನಬಸವೇಶ್ವರ ಮಹಾರಥೋತ್ಸವ
City: 
Hubballi-Dharwad
Gadag
Hubballi-Dharwad
Category: 
Cultural Activity
Body: 

ಕಲಘಟಗಿ:ತಾಲೂಕಿನ ಜಿನ್ನೂರು ಗ್ರಾಮದಲ್ಲಿ  ಮಘಾ ನಕ್ಷತ್ರದಲ್ಲಿ ಶ್ರೀಚನ್ನಬಸವಣ್ಣನವರ ಮಹಾರಥೋತ್ಸವ ಭಕ್ತರ ಹರ್ಷೂದ್ಘಾರ ಹಾಗೂ ಮಂಗಲ ವಾಧ್ಯಗಳೊಂದಿಗೆ ಬಹು ವಿಜೃಂಭಣೆಯಿಂದ ಮಂಗಳವಾರ ಜರುಗಿತು.

ಬೆಳಿಗ್ಗೆ ಶ್ರೀಚನ್ನಬಸವಣ್ಣನ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಅಭಿಷೇಕಗಳನ್ನು ನೆರವೇರಿಸಲಾಯಿತು. ಸಂಜೆ ನಂದಿ ಧ್ವಜ,ಡೊಳ್ಳು ಮುಂತಾದ ಮಂಗಲವಾದ್ಯಗಳೊಂದಿಗೆ ರಥದಲ್ಲಿ ಶ್ರೀಚನ್ನಬಸವಣ್ಣನ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ, ಭಕ್ತಿಯ ಹರ್ಷೋದ್ಗಾರದೊಂದಿಗೆ ಗ್ರಾಮದ ರಥ ಬೀದಿಯಲ್ಲಿ ರಥೋತ್ಸವವನ್ನು ನೆರವೇರಿಸಲಾಯಿತು.

ಭಕ್ತರು ರಥಕ್ಕೆ ಬಾಳೆ ಹಣ್ಣು ತೂರಿ ಇಷ್ಠಾvರ್ಥ ಸಿದ್ಧಿಸಲಿ ಎಂದು ಬೇಡಿಕೊಂಡರು.ನಂತರ ಭಕ್ತರು ಕಾಯಿತೂಕ,ಹಣ್ಣುತೂಕ ಮುಂತಾದ ಹರಕೆಯನ್ನು ಶ್ರಿ ಚನ್ನಬಸವೇಶ್ವರನಿಗೆ ನೆರವೇರಿಸಿದರು.ಸುತ್ತಲಿನ ಹತ್ತಾರು ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಇಷ್ಟಾರ್ಥಸಿದ್ದಿಸಲಿ ಎಂದು  ಭಕ್ತಿಯನ್ನು ಸಮರ್ಪಿಸಿದರು.

ಉಳವಿ ಹಾಗೂ ಜಿನ್ನೂರಿನ ಶ್ರೀಚನ್ನಬಸವೇಶ್ವರ ಮಹಾರಥೋತ್ಸವ ಮಘಾ ನಕ್ಷತ್ರದಲ್ಲಿ ಒಂದೆ ದಿನ ಎಕಕಾಲದಲ್ಲಿ ನಡೆಯುವದು ವಿಶೇಷವಾಗಿದೆ. ೧೨ ಶತಮಾನದಲ್ಲಿ ಚನ್ನಬಸಣ್ಣನವರು ಮಲೆನಾಡಿನ ಹಚ್ಚ ಹಸುರಿನ ಸೆರಗಿನಲ್ಲಿ ಇರುವ ಜಿನ್ನೂರು ಕ್ಷೇತ್ರಕ್ಕೆ ಬಂದು ನೆಲೆಸಿ
ಭಕ್ತರನ್ನು ಉದ್ದರಿಸಿದರು ಎಂಬ ಐತಿಹ್ಯವಿದೆ. ಬಂಧ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

೨೦ ರಂದು  ಬುಧವಾರ ಸಕ್ಕೆರ ತೂಕ ಸೇವೆ ಹಾಗೂ ೨೧ ರಂದು ಗುರುವಾರ ಕಡುಬಿನ ಕಾಳಗ ನಡೆಯುವುದು.

Reach Count: 
2