Kshetra Samachara

Local News Subject: 
ಉಪ್ಪಿನ ಬೆಟಗೇರಿಯಲ್ಲಿ ಸಂಭ್ರಮದ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ
City: 
Hubballi-Dharwad
Gadag
Category: 
Cultural Activity
Articles
Body: 

ಧಾರವಾಡ: ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಮಂಗಳವಾರ ರೇಣುಕಾ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು.

ಗುಡಿ ಹುಣ್ಣಿಮೆ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ನಡೆದ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.

ಗ್ರಾಮದಲ್ಲಿ ರೇಣುಕಾ ದೇವಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಗ್ರಾಮಸ್ಥರು ಪಲ್ಲಕ್ಕಿಗೆ ನೀರು ಹಾಕಿ ಪುಣೀತರಾದರು. ಇದಕ್ಕೂ ಮೊದಲು ಗ್ರಾಮಸ್ಥರು ದೇವಸ್ಥಾನಕ್ಕೆ ತೆರಳಿ ವಿಶೇಷ ನೈವೇದ್ಯ ಸಲ್ಲಿಸಿದರು.

ಪಲ್ಲಕ್ಕಿ ಮೆರವಣಿಗೆಯಲ್ಲಿ ಕೋಲಾಟವನ್ನೂ ಹಮ್ಮಿಕೊಳ್ಲಾಗಿತ್ತು. ಪಲ್ಲಕ್ಕಿ ಮೆರವಣಿಗೆಯುದ್ದಕ್ಕೂ ಕೋಲಾಟವನ್ನು ಪ್ರದರ್ಶನ ಮಾಡಲಾಯಿತು.

Reach Count: 
2