Kshetra Samachara

Local News Subject: 
ಪುಟ್ಟ ಉಳವಿ ಕ್ಷೇತ್ರ ಜಿನ್ನೂರ
City: 
Hubballi-Dharwad
Gadag
Hubballi-Dharwad
Upload Image: 
Category: 
Cultural Activity
Articles
Body: 

ಪಬ್ಲಿಕ್ ನೆಕ್ಸ್ಟ್ ವಿಶೇಷ

ಮಲ್ಲಿಕಾರ್ಜುನ ಪುರದನಗೌಡರ,ಕಲಘಟಗಿ

ನಮ್ಮ ನಾಡು ಪುಣ್ಯ ಪುರುಷರು,ಸಂತರು,ಜ್ಞಾನಿಗಳು ಜನಿಸಿದ ಬೀಡಾಗಿದ್ದು ಅಂತಹ ನಾಡಿನ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಪುಟ್ಟ ಗ್ರಾಮವಾದ ಜಿನ್ನೂರಿನಲ್ಲಿ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರು ಮಾನವ ಧರ್ಮದ ಜ್ಞಾನದ ತಿರುಳನ್ನು ಇಲ್ಲಿನ ಜನರಿಗೆ ಉಣಬಡಿಸಿದ ಪ್ರತೀತಿ ಇದೆ.

೧೨ ಶತಮಾನದಲ್ಲಿ ಷಟಸ್ಥಲ ಚಕ್ರವರ್ತಿ ಚನ್ನಬಸಣ್ಣನವರು ಜಿನ್ನೂರು ಕ್ಷೇತ್ರಕ್ಕೆ ಬಂದು ನೆಲೆಸಿ ಭಕ್ತರನ್ನು ಉದ್ದರಿಸಿದರು.

೧೨ ನೇ ಶತಮಾದಲ್ಲಿ ಬಿಜ್ಜಳನ ರಾಜಧಾನಿಯಲ್ಲಿ ಕಲ್ಯಾಣದಲ್ಲಿ ಉಂಟಾದ ಕ್ರಾಂತಿಯಿಂದಾಗಿ ಅಲ್ಲಿಂದ ಮಹಾ ಮಾನವತಾವಾದಿ ಶ್ರೀ ಚನ್ನಬಸವಣ್ಣನವರು ಜಿನ್ನೂರು ಗ್ರಾಮಕ್ಕೆ ಬಂದೂ ಭಕ್ತರಿಗೆ ಜ್ಞಾನದ ಬುತ್ತಿಯನ್ನು ಉಣಬಡಿಸಿದರು.

ಅಂದು ಈ ಗ್ರಾಮದ ಪ್ರಷ್ಠಿತವಾದ ಮನೆತನ ರಾಚಪ್ಪಅಜ್ಜ ಕಾಡಶೆಟ್ರ ಅವರ ಮನೆಯಲ್ಲಿ ಇಷ್ಟಲಿಂಗ ಪೂಜೆ ಮಾಡುತ್ತಾ ಭಕ್ತರಿಗೆ ಜ್ಞಾನ ಮಾರ್ಗವನ್ನು ಭೋದಿಸಿ ಭಕ್ತರಿಗೆ ಅಭಯಹಸ್ತ ತೋರಿ ಭಕ್ತರ ಉದ್ಧರ ಮಾಡಿದ್ದಾರೆ.

ಈಗಲೂ  ಪವಾಡಗಳು ಜಿನ್ನೂರು ಪುಣ್ಯ ಕ್ಷೇತ್ರದಲ್ಲಿ ನಡೆಯುತ್ತಿವೆ.

ವರ ನೀಡುವ ಚನ್ನಬಸವಣ್ಣ:

ಇಲ್ಲಿನ ಚನ್ನಬಸವಣ್ಣನಿಗೆ ಭಕ್ತರು ಬೇಡಿಕೊಂಡರೆ ಇಷ್ಠಾರ್ಥ ಸಿದ್ಧಿಸಿದ ಅನುಭವಗಳು ನಂಬಿದ ಭಕ್ತರಿಗೆ ಆಗೂವ ಮೂಲಕ ಜಿನ್ನೂರು ಗ್ರಾಮ ಪುಣ್ಯ ಕ್ಷೇತ್ರವೆಂಬ ಪುಟ್ಟ ಉಳವಿ ಎಂದೆ ಖ್ಯಾತಿಪಡೆಯುತ್ತಾಸಾಗಿದೆ.

ಸುತ್ತಲಿನ ಗ್ರಾಮಗಳಲ್ಲಿ ಮಳೆಯಾಗದಿದ್ದರೆ ಶ್ರೀಚನ್ನಬಸಣ್ಣನಿಗೆ ಮೊರೆ ಹೋದರೆ ಈ ಭಾಗದಲ್ಲಿ ಮಳೆಯಾಗುತ್ತದೆ ಎಂಬ ವಾಡಿಕೆ ಇದೆ.

ಜಾನುವಾರುಗಳ ರೋಗಗಳ ನಿವಾರಣೆ:

ಸುತ್ತಲಿನ ಗ್ರಾಮಗಳಲ್ಲಿ ರೈತರ ಜಾನೂವಾರುಗಳಿಗೆ ರೋಗ ರುಜಿನಗಳು ಬಂದಲ್ಲಿ ಪ್ರತಿ ಸೋಮವಾರ ಹಾಗೂ ಗುರುವಾರ ದನಕರಗಳನ್ನು ತಂದು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿಸಿದರೆ ಜಾನುವಾರುಗಳ ರೋಗಗಳು ಮಾಯವಾಗುತ್ತವೆ.

ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಸಿದರೆ ಕಾಯಿ

ತೂಕ,ಹಣ್ಣು ತೂಕ,ಸಕ್ಕರೆ ತೂಕ,ಬೆಂಡು ಬೆತ್ತಾಸೂಗಳ ತೂಕ,ನಾಣ್ಯಗಳ ತೂಕಗಳನ್ನು ಸಮರ್ಪಿಸಿ ಧನ್ಯತೆಹೊಂದುತ್ತಾರೆ.

ಶರಣರ ಹಸ್ತ ಪ್ರತಿ:

ಜಿನ್ನೂರು ಗ್ರಾಮದ ಕಾಡಶೆಟ್ರ ಇವರ  ಮನೆಯಲ್ಲಿ ಶ್ರೀಚನ್ನಬಸವಣ್ಣನವರು ತಂದರು ಎನ್ನಲಾದ ಹಸ್ತಪ್ರತಿ ಇಲ್ಲಿ ನಿತ್ಯ ಪೂಜೆಗೆ ಒಳಪಡುತ್ತಿದೆ.

ಉಳವಿ ಹಾಗೂ ಜಿನ್ನೂರು ಗ್ರಾಮಗಳ ರಥೋತ್ಸವ ಏಕಕಾಲದಲ್ಲಿ:

ಭಾರತ ಹುಣ್ಣಿಮೆಯ ಮಘಾ ನಕ್ಷತ್ರದಲ್ಲಿಯೇ ಉಳವಿ ಹಾಗೂ ಜಿನ್ನೂರು ಗ್ರಾಮದಲ್ಲಿಯೂ ರಥೋತ್ಸವ ಏಕಕಾಲದಲ್ಲಿ ಜರಗುವುದು ತಲೆ ತಲಾಂತರದಿಂದ ನಡೆದು ಬಂದಿದೆ ಎನ್ನಬಹುದು.

ಜಿನ್ನೂರು ಶ್ರೀಕ್ಷೇತ್ರದಲ್ಲಿ ಫೆ ೧೯ ರಂದು

ಮಂಗಳವಾರ ರಂದು ಚನ್ನಬಸವಣ್ಣನವರ ಮಹಾರಥೋತ್ಸವ ಜರಗೂವದು.

ದಿ: ೨೦ ರಂದು ಬುಧವಾರ ಭಕ್ತರಿಂದ ದೀಡ ನಮಸ್ಕಾರ,ಜವುಳ ತೆಗೆಸುವ ಕಾರ್ಯಕ್ರಮ,ಸಕ್ಕರೆ ತೂಕ,ಹಣ್ಣ ತೂಕ,ಬೆಂಡು ತೂಕ,ಬೆತ್ತಾಸ ತೂಕ ಸಮರ್ಪಣೆ ನಡೆಯುವದು.

ದಿ:೨೧ ರಂದು ಸಂಜೆ ಕಡುಬಿನ ಕಾಳಗ ಜರಗುವದು.

Reach Count: 
1