Public News

News Subject: 
ಪತ್ರಕರ್ತೆ ಬರ್ಖಾದತ್‍ಗೆ ವಾಟ್ಸ್ಆ್ಯಪ್‍ನಲ್ಲಿ ಅಶ್ಲೀಲ ಸಂದೇಶ - ಟ್ವಿಟ್ಟರ್ ನಲ್ಲಿ ಗುಪ್ತಾಂಗದ ಫೋಟೊ ಶೇರ್ ಮಾಡಿದ ಬರ್ಖಾ
Upload Image: 
Category: 
Crime
Body: 

ಪುಲ್ವಾಮ ಆತ್ಮಾಹುತಿ ದಾಳಿ ನಂತರ ಸಂಕಷ್ಟಕ್ಕೀಡಾಗಿರುವ ಕಾಶ್ಮೀರಿಗಳಿಗೆ ಸುರಕ್ಷಿತ ಸ್ಥಳ ಒದಗಿಸುವುದಾಗಿ ಟ್ವೀಟಿಸಿದ್ದ ಪತ್ರಕರ್ತೆ ಬರ್ಖಾ ದತ್ ಅವರಿಗೆ ಅಶ್ಲೀಲ ಸಂದೇಶ, ಬೆದರಿಕೆಗಳು ಬರುತ್ತಿವೆ.

ಕಾಶ್ಮೀರಿಗಳಿಗೆ ಸಹಾಯ ಹಸ್ತ ನೀಡುವುದಾಗಿ ಹೇಳಿದ ಟ್ವೀಟ್‍ನಲ್ಲಿ ಬರ್ಖಾ ತಮ್ಮ ವಾಟ್ಸ್ಆ್ಯಪ್ ಸಂಖ್ಯೆ ನೀಡಿದ್ದರು. ಈ ವಾಟ್ಸ್ಆ್ಯಪ್ ಸಂಖ್ಯೆಗೆ ದುಷ್ಕರ್ಮಿಗಳು ಅಶ್ಲೀಲ ಸಂದೇಶ ಕಳುಹಿಸಿ, ಕರೆ ಮಾಡಿ ತೊಂದರೆ ನೀಡುತ್ತಿದ್ದಾರೆ ಎಂದು ಬರ್ಖಾ ಹೇಳಿದ್ದಾರೆ.

ತನ್ನ ವಾಟ್ಸ್ಆ್ಯಪ್ ಸಂಖ್ಯೆಗೆ ಗುಪ್ತಾಂಗದ ಫೋಟೊ ಕಳಿಸಿ, ಫೋನ್ ಕರೆ ಮಾಡಿ ತೊಂದರೆ ನೀಡುತ್ತಿರುವ ಕಿಡಿಗೇಡಿಗಳ ಫೋನ್ ಸಂಖ್ಯೆ ಮತ್ತು ಲಭಿಸಿದ ಸಂದೇಶದ ಸ್ಕ್ರೀನ್‍ಶಾಟ್‍ನ್ನು ಬರ್ಖಾ ಟ್ವೀಟ್ ಮಾಡಿ ದೆಹಲಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಕಿಡಿಗೇಡಿ ಕಳಿಸಿದ ಗುಪ್ತಾಂಗದ ಫೋಟೊ ವನ್ನು ತಮ್ಮ ಟ್ವಿಟ್ಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಕೆಲವರು ಟ್ವೀಟ್ ಕಾಮೆಂಟ್ ಮಾಡಿ ಗುಪ್ತಾಂಗ ಕಿಡಿಗೇಡಿಯದ್ದೆ ಎಂದು ಹೇಗೆ ಸಾಬೀತುಪಡಿಸುವಿರಿ ಎಂದು ಪ್ರಶ್ನಿಸಿದ್ದಾರೆ.

Reach Count: 
8