Public News

News Subject: 
ಪಾಕ್​ ಮತ್ತು ಭಾರತದ ನಡುವೆ ಉದ್ವಿಘ್ನ ಪರಿಸ್ಥಿತಿ - ಭಾರತದಲ್ಲಿದ್ದ ತನ್ನ ಹೈ ಕಮಿಷನರ್​ರನ್ನು ವಾಪಸ್ಸು ಕರೆಸಿಕೊಂಡ ಪಾಕಿಸ್ತಾನ
Upload Image: 
Category: 
Others
Body: 

ಪುಲ್ವಾಮಾ ಸ್ಫೋಟ ಪ್ರಕರಣ ಹಿನ್ನೆಲೆ ಭಾರತದಲ್ಲಿದ್ದ ತನ್ನ ಹೈಕಮಿಷನರ್​​ರನ್ನು ಪಾಕಿಸ್ತಾನದ ವಾಪಸ್ಸು ಕರೆಸಿಕೊಂಡಿದೆ.

ದಾಳಿಯಿಂದಾಗಿ ಪಾಕ್​ ಮತ್ತು ಭಾರತದ ನಡುವೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನಲೆಯಲ್ಲಿ ಪಾಕಿಸ್ತಾನ ಹೈ ಕಮಿಷನರ್​ ಸೊಹೈಲ್​ ಮೊಹಮದ್​ ಅವರನ್ನು ದೇಶಕ್ಕೆ ಮರಳುವಂತೆ ಸೂಚನೆ ನೀಡಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಅಧಿಕಾರಿಗಳ ವಕ್ತಾರ ಮೊಹಮ್ಮದ್​ ಫೈಸಲ್​ ಟ್ವೀಟ್​ ಮಾಡಿದ್ದಾರೆ.

ಭಾರತದಲ್ಲಿನ ನಮ್ಮ ಹೈ ಕಮಿಷನರ್​ ಅವರನ್ನು ಸಮಾಲೋಚನೆಗಾಗಿ ನಾವು ನಮ್ಮ ದೇಶಕ್ಕೆ ಮರಳುವಂತೆ ಕರೆ ನೀಡಿದ್ದು, ಅವರು ಇಂದು ಬೆಳಗ್ಗೆ ದೆಹಲಿ ತೊರೆದಿದ್ದಾರೆ ಎಂದಿದ್ದಾರೆ.

ಪುಲ್ವಾಮ ದಾಳಿಯ ಬಳಿಕ ವಿದೇಶಾಂಗ ಕಾರ್ಯದರ್ಶಿ ವಿಜಯ್​ ಗೋಘಲೆ, ಸೊಹೈಲ್​ ಮೊಹಮದ್​ ಅವರಿಗೆ ದೆಹಲಿಯಲ್ಲಿ ಬಿಗಿ ಭದ್ರತೆ ಒದಗಿಸಿದ್ದರು.

ಪಾಕ್​ನಲ್ಲಿರುವ ಭಾರತದ ಹೈ ಕಮಿಷನರ್​ ಅಜತ್​ ಬಿಸರಿಯಾ ಅವರನ್ನು ಕೂಡ ದೇಶಕ್ಕೆ ಮರಳುವಂತೆ ಭಾರತದ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ಬಳಿಕ ಶುಕ್ರವಾರ ಪಾಕಿಸ್ತಾನದಲ್ಲಿರುವ ಅಮೆರಿಕದ ರಾಯಭಾರಿ ಪೌಲ್​ ಜೋನ್ಸ್​ ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ತೆಹ್ಮಿನ್​ ಜನ್ಜುಹ ಅವರೊಂದಿಗೆ ಸಭೆ ನಡೆಸಿದ್ದಾರೆ ಎಂದು ಡಾನ್​ ಪತ್ರಿಕೆ ವರದಿ ಮಾಡಿದೆ. ಯುಎನ್​ಎಸ್​ಸಿ ಗೊತ್ತುಪಡಿಸಿದ ಭಯೋತ್ಪಾದಕ ಜಾಲಗಳು ಅವರ ಮುಖಂಡರ ನಿಧಿಗಳು ಮತ್ತು ಇತರ ಹಣಕಾಸಿನ ಆಸ್ತಿಗಳನ್ನು ತಕ್ಷಣಕ್ಕೆ ತಡೆಹಿಡಿಯುವಂತೆ ಅಮೆರಿಕ ತಿಳಿಸಿದೆ.

ಅಲ್ಲದೇ ಜೈಷ್​-ಎ-ಮೊಹಮ್ಮದ್​ ನಿಷೇಧಿಸಲು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದೆ. ಉಗ್ರ ಸಂಘಟನೆ ಜೈಷ್​ ಎ ಮೊಹಮ್ಮದ್​ ಅನ್ನು 2002ರಲ್ಲಿಯೇ ನಿಷೇಧಿಸಿದ್ದೇವೆ. ಆದಾಗ್ಯೂ ಕೂಡ ಈ ಸಂಘಟನೆ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಪಾಕಿಸ್ತಾನದ ರಾಜ್ಯ ಗೃಹ ಅಧಿಕಾರಿ ವಕ್ತಾರರು ತಿಳಿಸಿದ್ದಾರೆ.

2001 ಡಿಸೆಂಬರ್​ನಲ್ಲಿಯೇ ಜೆಷ್​ ಸಂಘಟನೆಯನ್ನು ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಲಾಗಿದೆ. ಅವರ ಮುಂದಿನ ದಾಳಿ ತಡೆಯಲು ಬೇಕಾದ ಎಲ್ಲಾ ಬೆಂಬಲವನ್ನು ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

Reach Count: 
15