Public News

News Subject: 
ಗಂಡನ ಮನೆ ಪರವಾಗಿರಬೇಕೋ ಅಥವಾ ತವರು ಮನೆ ಪರವಾಗಿರಬೇಕೋ - ಕೊನೆಗೂ ಮೌನ ಮುರಿದ ಸಾನಿಯಾ
Upload Image: 
Category: 
Sports
Others
Body: 

ಪುಲ್ವಾಮ ದಾಳಿ ಕುರಿತು ಆರಂಭದಲ್ಲಿ ಗಂಡನ ಮನೆ ಪರವಾಗಿರಬೇಕೋ ,ತವರು ಮನೆ ಪರವಾಗಿರಬೇಕೋ ಎಂಬ ಕಾರಣಕ್ಕೆ ಮೌನಿಯಾಗಿದ್ದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ಟ್ರೋಲಿಗರು ಬೆವರಿಳಿಸಿದ್ದರು. ಇದಕ್ಕೆ ಉತ್ತರವಾಗಿ ಸುದೀರ್ಘ ಟ್ವೀಟ್ ಮಾಡಿರುವ ಸಾನಿಯಾ ಫೆ.14 ಭಾರತಕ್ಕೆ ಕರಾಳ ದಿನ ಎಂದಿದ್ದಾರೆ. ಆದರೆ ಸಾನಿಯಾ ಸುದೀರ್ಘ ಟ್ವೀಟ್‌ನಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದನೆ ಕುರಿತು ಒಂದು ಮಾತು ಎತ್ತಿಲ್ಲ ಅನ್ನೋದನ್ನ ಟ್ವಿಟರಿಗರು ಸೂಚಿಸಿದ್ದಾರೆ.

ಪುಲ್ವಾಮ ದಾಳಿಯನ್ನ ಕಟುವಾಗಿ ಖಂಡಿಸದ ಸಾನಿಯಾ ಮಿರ್ಜಾ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಸಾನಿಯಾ ಮಿರ್ಜಾ ಸುದೀರ್ಘ ಟ್ವಿಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರೆಟಿಗಳು ಯಾವುದೇ ಘಟನೆಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಖಂಡಿಸದ ತಕ್ಷಣ ನಾವು ದೇಶಭಕ್ತ ಅಲ್ಲ ಅನ್ನೋದನ್ನ ಸಾಮಾಜಿಕ ಜಾಲತಾಣದಲ್ಲಿ ಹರಡುವ ಪ್ರಯತ್ನ ನಡೆಯುತ್ತಿದೆ. ಕೆಲವರು ದ್ವೇಷವ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.

ನಾವೆಲ್ಲ ಭಯೋತ್ವಾದನೆ ವಿರುದ್ಧವಾಗಿದ್ದೇವೆ. ಯಾರಾದರೂ ಭಯೋತ್ವಾದನೆಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಡುವವರ ವಿರುದ್ಧವಾಗಿದ್ದೇವೆ. ನಾನು ನನ್ನ ದೇಶಕ್ಕಾಗಿ ಆಡುತ್ತೇನೆ. ನಾನು ಹುತಾತ್ಮರಾದ CRPF ಯೋಧರ ಪರ ನಿಲ್ಲುತ್ತೇನೆ. ಯೋಧರ ಕುಟುಂಬದ ಜೊತೆಗೆ ನಾನಿದ್ದೇನೆ. ದೇಶವನ್ನ ರಕ್ಷಿಸುವ ಅವರೇ ನಮ್ಮ ಹೀರೋಗಳು. ಫೆ.14 ಭಾರತಕ್ಕೆ ಕರಾಳ ದಿನ. ಇತಂಹ ಮತ್ತೊಂದಿನ ಬಾರದಿರಲಿ. ಯಾವುದೇ ಖಂಡನೆ ಹುತಾತ್ಮ ಯೋಧರಿಗೆ ಸರಿಸಮವಲ್ಲ. ಈ ಘಟನೆಯನ್ನ ನಾನು ಯಾವುತ್ತು ಮರೆಯೋದಿಲ್ಲ. ಶಾಂತಿಗಾಗಿ ಪ್ರಾರ್ಥಿಸುತ್ತೇನೆ. ಇಷ್ಟೇ ಅಲ್ಲ ದ್ವೇಷವನ್ನ ಸಾರಬೇಡಿ. ಟ್ರೋಲ್ ಮಾಡುವುದರಿಂದ ಏನನ್ನೂ ಸಾಧಿಸುವುದಿಲ್ಲ. ವಿಶ್ವದಲ್ಲಿ ಭಯೋತ್ಪಾದನೆಗೆ ಯಾವುದೇ ಜಾಗವಿಲ್ಲ. ಕುಳಿತು ಇಲ್ಲದ ಸಲ್ಲದ ಟ್ವೀಟ್ ಮಾಡುವುದಕ್ಕಿಂತ ದೇಶ ಸೇವೆ ಮಾಡಿ. ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸದೇ ಸೆಲೆಬ್ರೆಟಿಗಳು ಅವರ ದೇಶ ಸೇವೆ ಮಾಡುತ್ತಿದ್ದಾರೆ. ನೀವು ಮಾಡಿ ಎಂದು ಸಾನಿಯಾ ಟ್ವೀಟ್ ಮಾಡಿದ್ದಾರೆ.

ಸಾನಿಯ ಸುದೀರ್ಘ ಟ್ವೀಟ್ ಬಳಿಕವೂ ಟ್ರೋಲ್ ನಿಂತಿಲ್ಲ. ಸಾನಿಯಾ ಮಿರ್ಜಾ ತಮ್ಮ ಟ್ವೀಟ್‌ನಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದನೆ ಕುರಿತು ಯಾವುದೇ ಮಾತು ಆಡಿಲ್ಲ ಎಂದು ಮತ್ತೆ ಟ್ರೋಲ್ ಮಾಡಿದ್ದಾರೆ. ಭಾರತ-ಪಾಕ್ ವಿಚಾರವಾಗಿ ಸಾನಿಯಾ ಟ್ರೋಲ್ ಆಗುತ್ತಿರುವುದು ಇದೇ ಮೊದಲಲ್ಲ. ಸಾನಿಯಾ ಮಿರ್ಜಾ, ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಮದುವೆಯಾದ ಬಳಿಕ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ.

Reach Count: 
10