Public News

News Subject: 
ರಮ್ಯಾ ವಿರುದ್ಧ ಮತ್ತೆ ಆಕ್ರೋಶಗೊಂಡ ಮಂಡ್ಯ ಜನತೆ
Upload Image: 
Category: 
Cinema
Body: 

ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಮಡಿದ ಮಂಡ್ಯದ ಯೋಧ 'ಗುರು' ಅವರ ಮನೆಗೆ ಹೋಗಿ ಬಹಳಷ್ಟು ಸಿನಿ ತಾರೆಯರು ಸಾಂತ್ವನ ಹೇಳಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಆದರೆ, ಮಂಡ್ಯದ ಮಾಜಿ ಸಂಸದೆ, ನಟಿ ರಮ್ಯಾ ಮಾತ್ರ ಇನ್ನೂ ಅತ್ತ ತಲೆ ಹಾಕಿಲ್ಲ. ಈ ವಿಷಯಕ್ಕೆ ಮಂಡ್ಯದ 'ಗುರು' ಅವರ ಕೆಲವು ಸ್ನೇಹಿತರು ರಮ್ಯಾ ಬಗ್ಗೆ ಬೇಸರಗೊಂಡಿದ್ದಾರೆ ಎಂದು ಸುದ್ದಿಯಾಗಿದೆ.

ರಮ್ಯಾ ವಿರುದ್ಧ ಮತ್ತೆ ಆಕ್ರೋಶಗೊಂಡ ಮಂಡ್ಯ ಜನತೆ
ಯಾಕೋ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರ ಟೈಮ್ ಸರಿಯಿಲ್ಲ ಎನಿಸುತ್ತಿದೆ. ಇತ್ತೀಚಿಗೆ ಮಂಡ್ಯದ ಜನತೆ ರಮ್ಯಾ ಅವರ ಬಗ್ಗೆ ಭಾರೀ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮೊನ್ನೆ 'ಪುಲ್ವಾಮಾ ಭಯೋತ್ಪಾದಕರ ದಾಳಿ'ಯಲ್ಲಿ ಮಡಿದ ಮಂಡ್ಯದ ವೀರ ಯೋಧ 'ಗುರು' ಅವರ ಮನೆಗೆ ಬಹಳಷ್ಟು ಜನರು ಬಂದು ಗುರು ಕುಟುಂಬದವರನ್ನು ಮಾತನಾಡಿಸಿ ಸಾಂತ್ವನ ಹೇಳಿ ಹೋಗಿದ್ದಾರೆ. ಎಷ್ಟೋ ಸಿನಿ ತಾರೆಯರೂ ಕೂಡ ಸಾಂತ್ವನ ಹೇಳಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಆದರೆ, ಮಂಡ್ಯದ ಮಾಜಿ ಸಂಸದೆ, ನಟಿ ರಮ್ಯಾ ಮಾತ್ರ ಇನ್ನೂ ಅತ್ತ ತಲೆ ಹಾಕಿಲ್ಲ. ಈ ವಿಷಯಕ್ಕೆ ಮಂಡ್ಯ ಗುರು ಅವರ ಕೆಲವು ಸ್ನೇಹಿತರು ರಮ್ಯಾ ಬಗ್ಗೆ ಬೇಸರಗೊಂಡಿದ್ದಾರೆ ಎಂದು ಸುದ್ದಿಯಾಗಿದೆ.

ರೆಬಲ್ ಸ್ಟಾರ್ ಅಂಬರೀಷ್ ಅವರು ನಿಧನವಾದಾಗ ರಮ್ಯಾ ಮಂಡ್ಯಕ್ಕೆ ಬಂದು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿಲ್ಲ. ಆಗಲೇ ರಮ್ಯಾ ವಿರುದ್ಧ ಸಾಕಷ್ಟು ಅಪಸ್ವರ ಎದ್ದಿತ್ತು. "ನನಗೆ ಹುಶಾರಿಲ್ಲ, ಕಾಲಿಗೆ ಏಟಾಗಿದೆ" ಎಂದು ರಮ್ಯಾ ತಾವು ಬಾರದಿರುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದರೂ ಮಂಡ್ಯದ ಜನತೆ ಅವರನ್ನು ಕ್ಷಮಿಸಿದಂತೆ ಕಾಣುತ್ತಿಲ್ಲ. ಈಗ, ಮಂಡ್ಯದ ಹುತಾತ್ಮ ಯೋಧನ ಅಂತ್ಯಕ್ರಿಯೆಯಲ್ಲೂ ರಮ್ಯಾ ಪಾಲ್ಗೊಂಡಿಲ್ಲ ಎಂಬ ವಿಷಯ ಈಗ ಮಂಡ್ಯದ ತುಂಬ ನಿಧಾನವಾಗಿ ಆಕ್ರೋಶದ ಸ್ವರೂಪ ಪಡೆಯುತ್ತಿದೆ ಎನ್ನಲಾಗಿದೆ.

"ರಮ್ಯಾಗೆ ರಾಜಕೀಯ ಮಾಡಲು ಮಂಡ್ಯ ಬೇಕು. ರಾಜಕೀಯವಾಗಿ ಸ್ಥಾನ-ಮಾನ ನೀಡಿದ ಮಂಡ್ಯದ ಜನತೆಯ ಕಷ್ಟಗಳಲ್ಲಿ ರಮ್ಯಾ ಭಾಗಿಯಾಗುತ್ತಿಲ್ಲ. ತಮ್ಮನ್ನು ಒಮ್ಮೆ ಓಟು ಹಾಕಿ ಗೆಲ್ಲಿಸಿದ ಮಂಡ್ಯದ ಜನತೆಯನ್ನು ರಮ್ಯಾ ಇಷ್ಟು ಬೇಗ ಮರೆತರೆ ಹೇಗೆ? ಮಂಡ್ಯದ ಗಂಡು, ಜನಪ್ರಿಯ ನಾಯಕ ಅಂಬರೀಷ್ ಅಂತ್ಯಕ್ರಿಯೆಗೆ ಯಾಕೆ ಬರಲಿಲ್ಲ? ಈಗ ದೇಶಕ್ಕಾಗಿ ಮಡಿದ ವೀರ ಯೋಧ ಗುರು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದಿರುವಷ್ಟು ಮಂಡ್ಯದ ಮೇಲೆ ರಮ್ಯಾಗೆ ಆಕ್ರೋಶ ಯಾಕೆ? ಕೊನೇಪಕ್ಷ, ಗುರು ಮನೆಗೆ ಬಂದು ಕುಟುಂಬದವರನ್ನು ಮಾತನಾಡಿಸಿಕೊಂಡು ಹೋಗಬಾರದೇ? ಎಂದು ಮಂಡ್ಯದ ಗುರು ಸ್ನೇಹಿತರ ಬಳಗ ಪ್ರಶ್ನೆ ಮಾಡುತ್ತಿದೆ ಎಂದು ಸುದ್ದಿಯಾಗಿದೆ.

ರಮ್ಯಾ ಈ ಬಗ್ಗೆ ಏನು ಹೇಳುತ್ತಾರೆ ಎಂಬುದಷ್ಟೇ ಈಗ ಕಾದು ನೋಡಬೇಕಾಗಿರುವ ಸಂಗತಿ.

Reach Count: 
4