Public News

News Subject: 
ದೇಶದ ವಿಷಯದಲ್ಲಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿರುವ ಬದ್ಧತೆ ನಮ್ಮಲ್ಲಿ ಏಕಿಲ್ಲ..?
Upload Image: 
Category: 
Politics
Body: 

ಯಾವುದೇ ಪ್ರಮುಖ ಘಟನೆ ನಡೆದಾಗ ಅಥವಾ ಫಲಿತಾಂಶ, ತೀರ್ಪು ಬಂದಾಗ ಈ ಮಾಧ್ಯಮಗಳು, ನಿರ್ವಾಹಕರು ವ್ಯಕ್ತಪಡಿಸುವ ಪ್ರತಿಕ್ರಿಯೆ ಭಯ ಹುಟ್ಟಿಸುತ್ತದೆ. ಸದ್ಯ ಕೇಂದ್ರಬಿಂದುವಾಗಿರುವುದು ಪುಲ್ವಾಮಾ ಉಗ್ರದಾಳಿ.

ಮಣಿಶಂಕರ್ ಅಯ್ಯರ್, ರಮ್ಯಾ, ಮಾಜಿ ಕ್ರಿಕೆಟರ್, ಹಾಲಿ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿದ್ದು ಮುಂತಾದ ‘ನಾಯಕರು’ ಪಾಕಿಸ್ತಾನಕ್ಕೆ ಭೇಟಿ ನೀಡಿ ಅಲ್ಲಿನ ಸರಕಾರವನ್ನು ಹಾಡಿ ಹೊಗಳುತ್ತಾರೆ. ಉಗ್ರಗಾಮಿಗಳು ನಮ್ಮ ಸೈನಿಕರನ್ನು ಬರ್ಬರವಾಗಿ ಹತ್ಯೆ ಮಾಡಿದರೆ ಯಾರೋ ಕೆಲವರು ಮಾಡಿದ ಕೃತ್ಯಕ್ಕೆ ಪಾಕಿಸ್ತಾನವನ್ನು ಹೊಣೆ ಮಾಡಲಾಗದು ಎಂದು ಅಪ್ಪಣೆ ಕೊಡಿಸುತ್ತಾರೆ. ಆ ಯಾರೋ ಕೆಲವರು ಇಂತಹ ಪಾತಕ ಮಾಡಿದ್ದು ನಾನೇ ಎಂದು ವಿಡಿಯೋ ಪ್ರಸಾರ ಮಾಡಿದ್ದು, ಆ ಸಂಘಟನೆಯ ಮೂಲ ಬೇರು ಇದೇ ಶತ್ರು ರಾಷ್ಟ್ರದಲ್ಲಿರುವುದು ಓರ್ವ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿ ಇರುವವರಿಗೆ ಅರ್ಥವಾಗದ್ದೇನಲ್ಲ. ಇನ್ನೂ ಕೆಲವು ಉನ್ನತ ನಾಯಕರು ಚೀನಾ ರಾಯಭಾರಿ ಕಚೇರಿಗೆ ಕದ್ದು ಮುಚ್ಚಿ ಭೇಟಿಯಾಗುತ್ತಾರೆ.

ನಾನು ಇತ್ತೀಚೆಗೆ ಅಮೆರಿಕ ಪ್ರವಾಸದಲ್ಲಿ ಭಾಗವಹಿಸಿದ ಕೆಲವು ಸಮಾರಂಭಗಳಲ್ಲಿ, ಮತ್ತು ಗಮನಿಸಿದ ಕೆಲವು ವಿಶಿಷ್ಟ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದೇನೆ. ಅಮೆರಿಕದಲ್ಲಿ ಕನ್ನಡಿಗರೂ ಸೇರಿದಂತೆ ಭಾರತೀಯ ಸಂಜಾತರು, ಭಾರತದಿಂದ ಬಂದವರು, ಅವರ ಅವಲಂಬಿತರು ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಭಾಷಾವಾರು ಸಾಂಸ್ಕೃತಿಕ ಸಂಘಟನೆಗಳೂ ಸಾಕಷ್ಟಿವೆ. ಇವರೆಲ್ಲರೂ ಆಗಿಂದಾಗ್ಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತಾರೆ. ಇಂತಹ ಸಮಾರಂಭಗಳಲ್ಲಿ ನಾನು ಗಮನಿಸಿದ ಕೆಲವು ಅಂಶಗಳು ಹೀಗಿವೆ.

ಅಮೆರಿಕದಲ್ಲಿ ಪ್ರತಿ ವರ್ಷ ಆಚರಿಸಲ್ಪಡುವ, ಭಾರತ ಮೇಳ ಅಥವಾ ಐ್ಞಜಿ ್ಛಛಿಠಿ, ಭಾರತದ ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಇವೆಲ್ಲದರಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶವೆಂದರೆ ಅಮೆರಿಕ ಮತ್ತು ಭಾರತದ ತ್ರಿವರ್ಣ ಧ್ವಜಗಳನ್ನು ಸಮಾನಾಂತರವಾಗಿ ಹಾರಿಸುತ್ತಾರೆ. ಸಮಾರಂಭದ ಮುಕ್ತಾಯ ಮೊದಲಿಗೆ ಅಮೆರಿಕದ ರಾಷ್ಟ್ರಗೀತೆ ಬಳಿಕ ಭಾರತದ ರಾಷ್ಟ್ರಗೀತೆ ನುಡಿಸಲಾಗುತ್ತದೆ. ಎರಡೂ ರಾಷ್ಟ್ರಗೀತೆಗಳನ್ನು ನುಡಿಸುವಾಗ ವಿದೇಶೀಯರೂ ಸೇರಿದಂತೆ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸುತ್ತಾರೆ!

ಬಹುತೇಕ ಕಟ್ಟಡಗಳಲ್ಲಿ ಅದು ಸರಕಾರಿ ಕಟ್ಟಡವಿರಲಿ, ಖಾಸಗಿ ಮಳಿಗೆಯಿರಲಿ ಅಥವಾ ವಾಸ್ತವ್ಯದ ಕಟ್ಟಡವಿರಲಿ ರಾಷ್ಟ್ರಧ್ವಜ ಹಾರಾಡುತ್ತಿರುತ್ತದೆ.ಚುನಾವಣಾ ಪ್ರಚಾರಗಳಲ್ಲಿ ವ್ಯಕ್ತಿಗತ ಕೆಸರೆರಚಾಟಕ್ಕಿಂತ ಸಾಧನೆ ಮತ್ತು ಯೋಜನೆಗಳಿಗೆ ಆದ್ಯತೆ.

ಅಮೆರಿಕದಂತಹ ದೇಶದಲ್ಲಿ ಅಂತರ್ಜಾಲ ಎಷ್ಟು ಬಲಿಷ್ಠವಾಗಿದೆಯೆಂದರೆ, ಯಾರಾದರೂ, ಅವರು ಯಾವುದೇ ದೇಶದ ಪ್ರಜೆಯಾಗಿರಲಿ, ಗಣ್ಯ ವ್ಯಕ್ತಿಯಿರಲಿ, ಹೊರದೇಶಕ್ಕೆ ದೂರವಾಣಿ ಕರೆ ಮಾಡುತ್ತಿದ್ದರೆ ಅಂತಹ ಕರೆಗಳ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ನಿಷೇಧಿತ ಜಾಲತಾಣಗಳಲ್ಲಿ ಬಿತ್ತರವಾಗುತ್ತಿದ್ದುದನ್ನು ಯಾರಾದರೂ ವೀಕ್ಷಿಸುತ್ತಿದ್ದರೆ ಅವರಿಗೆ ಎಚ್ಚರಿಕೆ ಕೊಡುತ್ತಾರೆ. ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಆದರೆ ನಮ್ಮ ದೇಶದಲ್ಲಿ ಪ್ರಧಾನಿಯಂತಹ ಅತ್ಯುನ್ನತ, ಜವಾಬ್ದಾರಿ ಸ್ಥಾನದಲ್ಲಿ ಇರುವವರ ಹತ್ಯೆಗೆ ಪಿತೂರಿ ನಡೆದಿರುವ ಬಗ್ಗೆ ಬಲವಾದ ಸಾಕ್ಷಿಯೊಂದಿಗೆ ಬಂಧಿಸಿದರೆ ಅದರಲ್ಲೂ ರಾಜಕೀಯ ಹುಡುಕುತ್ತಾರೆ!

ಇಂದು ಇಸ್ರೇಲಿನಂತಹ ಕೇವಲ 89 ಲಕ್ಷ ಮೀರದ ಜನಸಂಖ್ಯೆ ಇರುವ ಪುಟ್ಟ ರಾಷ್ಟ್ರಕ್ಕೆ ಜಗತ್ತಿನ ರಾಷ್ಟ್ರಗಳು ಗೌರವ ಕೊಡುತ್ತಿರುವುದಕ್ಕೆ ಕಾರಣ ಅವರಲ್ಲಿರುವ ದೇಶಭಕ್ತಿ-ಒಗ್ಗಟ್ಟು; ಇದು ನಮ್ಮವರಿಗೆ ಅರಿವಾದರೆ ಸಾಕು.

ಕೃಪೆ: ಕಾಪು ಮೋಹನದಾಸ ಕಿಣಿ

Reach Count: 
1