Kshetra Samachara

Local News Subject: 
ಅಳ್ನಾವರ : ಕಾಳಿ ನದಿಯಿಂದ ನೀರು ತರುವ ಯೋಜನೆಗೆ ಶಂಕು ಸ್ಥಾಪನೆ
City: 
Hubballi-Dharwad
Category: 
Politics
Infrastructure
Body: 

ಅಳ್ನಾವರ : 21 ನೇ ಶತಮಾನದಲ್ಲಿ ನೀರು ನಮ್ಮ ಜಲ್ವಂತ ಸಮಸ್ಯೆ ಆಗಲಿದೆ. ಮಾನವ ಸಂಪನ್ಮೂಲ ಉಳಿಸಲು ಮುಂದಿನ ಪೀಳಿಗೆಗೆ ನೀರು ಕಾಪಾಡಿಕೊಂಡು ಹೋಗಬೇಕು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಾಪಾಂಡೆ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯ್ತಿ ಆವರಣದಲ್ಲಿ ಬಾನುವಾರ ಮಧ್ಯಾಹ್ನ ರೂ. 71.90 ಕೋಟಿ ವೆಚ್ಚದ ಕಾಳಿ ನದಿಯಿಂದ ನೀರು ತರುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು,

ಈ ಯೋಜನೆ ನಿಗದಿತ ಎರಡು ವರ್ಷದ ಸಮಯದಲ್ಲಿ ಪೂರ್ಣಗೊಳ್ಳಲಿ. ಎರಡು ವರ್ಷದ ಬದಲಿಗೆ ಪಂಚ ವಾರ್ಷಿಕ ಯೋಜನೆ ಇದಾಗಬಾರದು. ಜನರಿಗೆ ತೊಂದರೆ ಆಗದ ಹಾಗೆ ಚುರುಕಾಗಿ ಕಾರ್ಯ ನಿರ್ವಹಿಸಿ, ನಿರ್ದಿಷ್ಟ ಸಮಯದಲ್ಲಿ ಕೆಲಸ ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ಎಚ್ಚರಿಸಿದರು.
21 ನೇ ಶತಮಾನದಲ್ಲಿ ನೀರು ಮಹತ್ವ ಪಡೆಯಲಿದೆ. ಕೆರೆ ಹೊಳೆತ್ತುವದು, ನೀರನ್ನು ಇಂಗಿಸುವದು, ಬಣ ಬೇಸಾಯ ಪದ್ದತಿ ಅನುಷ್ಟಾನ ಮಾಡುವ ಮೂಲಕ ನೀರಿನ ಸದ್ಬಳಿಕೆ ಒತ್ತು ನೀಡುವ ದಿಕ್ಕಿನಲ್ಲಿ ನಮ್ಮ ಸರ್ಕಾರ ಹೆಜ್ಜೆ ಹಾಕಿದೆ . ಕಾಳಿ ನದಿ ನೀರು ಯೋಜನೆಗೆ ಈ ಭಾಗದ ಜನರು ಸಾಕಷ್ಟು ಹೋರಾಟ ಮಾಡಿದ ಫಲ ಇಂದು ದೊರೆತಿದೆ ಎಂದರು.

ಅಳ್ನಾವರ ಪಟ್ಟಣ ಸೇರಿ 14 ಹಳ್ಳಿಗಳಿಗೆ ನೀರು ಕೊಡುವ ಯೋಜನೆ ಇದಾಗಿದೆ. ಅಳ್ನಾವರ ಪಕ್ಕದ ಹಳಿಯಾಳ ಪಟ್ಟಣಕ್ಕೆ ಮೂರು ವರ್ಷದ ಹಿಂದೆ ಕಾಳಿ ನದಿಯಿಂದ ನಿರಂತರ ನೀರು ನೀಡುವ ಕಾರ್ಯ ಆರಂಭವಾಗಿದೆ. ಪಕ್ಕದ ಅಳ್ನಾವರಕ್ಕೂ ನೀರು ನೀಡುವದು ನಮ್ಮೆಲ್ಲರ ಗುರುತರ ಜವಾಬ್ದಾರಿಯಾಗಿತ್ತು. ಹಳಿಯಾಳ ಕ್ಷೇತ್ರದ ತೇರಗಾಂವ ಗ್ರಾಮ ಸೇರಿದಂತೆ 91 ಹಳ್ಳಿಗಳಿಗೆ ಶಾಸ್ವತ ಹಾಗೂ ನಿರಂತರ ನೀರು ನೀಡುವ ಯೋಜನೆ ರುಪಿಸಲಾಗಿದೆ ಎಂದರು.

ಆಡಳಿತ ಜೊತೆಗೆ ಜನರ ಸಂಪರ್ಕ ಪಾರದರ್ಶಕವಾಗಿದ್ದಾಗ ಜನರ ಕೆಲಸ ತ್ವರಿತ ಗತಿಯಲ್ಲಿ ಆಗಲು ಸಾಧ್ಯ. ಪಾರರ್ದಶಕ ಆಡಳಿ ನೀಡುವ ಘನ ಉದ್ದೇಶ ಹೊತ್ತ ನಮ್ಮ ಸರ್ಕಾರ ಭೂ ಪರಿವರ್ತನೆ ಸೇರಿದಂತೆ ಹಲವು ಜನಪರ ಕಾರ್ಯ ಮಾಡುವದರ ಜೊತೆಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಜನರು ಅಧಿಕಾರಿಗಳ ಹಿಂದೆ ಅಲೆದಾಡುವ ಸ್ಥಿತಿ ಇರಕೂಡದು ಎಂದರು.

ಅಭಿವೃದ್ದಿ ವಿಚಾರದಲ್ಲಿ ಪಕ್ಷಪಾತ ಭಾವನೆ ಇರಬಾರದು ಎನ್ನವುದಕ್ಕೆ ಅಳ್ನಾವರ ಪಟ್ಟಣಕ್ಕೆ ದೊರೆತ ಕಾಳಿ ನದಿ ನೀರು ಯೋಜನೆ ಸಾಕ್ಷಿಯಾಗಿದೆ. ಪಕ್ಷಪಾತ ದೋರಣೆ ಅಭಿವೃದ್ದಿಯಲ್ಲಿ ದೂರವಾದಾಗ ಅಭಿವೃದ್ದಿಗೂ ಗೌರವ ಬರುತ್ತದೆ. ಜನಪತ್ರಿನಿಧಿಗಳು ಜನರ ಜೊತೆ ಸ್ಪಂದನೆ ಹೆಚ್ಚಿಸಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುಧಾನ ತರಲು ಶ್ರಮಿಸಬೇಕು ಎಂದರು.

ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಅಧ್ಯಕ್ಷತೆ ವಹಿಸಿದ್ದರು . ಸಂಸದ್ ಪ್ರಹ್ಲಾದ್ ಜೋಶಿ, ಶಾಸಕರಾದ ಸಿ.ಎಂ. ನಿಂಬಣ್ಣವರ, ಶ್ರೀನಿವಾಸ ಮಾನೆ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಭಾಗ್ಯವತಿ ಕುರಬರ, ಉತ್ತರ ಕನ್ನಡ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ರೇಣುಕೆ, ಹಳಿಯಾಳ ಪುರಸಭೆ ಸದಸ್ಯೆ ಶಂಕರ ಬೆಳಗಾಂವಕರ,ಪಟ್ಟಣ ಪಂಚಾಯ್ತಿ ಸದಸ್ಯರು ಇದ್ದರು.

ಗಣ್ಯರ ಸತ್ಕಾರ ನಡೆಯಿತು. ಸಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ನಾಡ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವೀರ ಯೋಧರ ನಿಧನಕ್ಕೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಜಿಲ್ಲಾ ಯೋಜನಾಧಿಕಾರಿ ವಿನಾಯಕ ಪಾಲನಕರ ಸ್ವಾಗತಿಸಿದರು. ಜಲ ಮಂಡಳಿ ಕಾರ್ಯ ನಿರ್ವಾಹಕ ಇಂಜಿನಿಯರ ವೆಂಕಟರಾವ ಯೋಜನೆ ಸಮಗ್ರ ಮಾಹಿತಿ ಒದಗಿಸಿದರು. ಪಟ್ಟನ ಪಂಚಾಯ್ತಿ ಸದಸ್ಯ ಪರಶುರಾಮ ಬೇಕನೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ ಅಮರೇಶ ಪಮ್ಮಾರ ವಂದಿಸಿದರು.

Reach Count: 
2