Kshetra Samachara

Local News Subject: 
ಅಳ್ನಾವರ: ಸ್ಥಳಿಯ ಸಂಸ್ಥೆಗಳ ಬಲವರ್ಧನೆಗೆ ಶಕ್ತಿ ತುಂಬಲು ಸರ್ಕಾರ ಬದ್ದ
City: 
Hubballi-Dharwad
Gadag
Hubballi-Dharwad
Upload Image: 
Category: 
Politics
Body: 

ಅಳ್ನಾವರ: ರಾಜ್ಯದ ಪಟ್ಟಣ ಪಂಚಾಯ್ತಿ ಹಾಗೂ ಪುರಸಭೆಗಳ ಬಲವರ್ಧನೆಗೆ ಸರ್ಕಾರ ಬದ್ದವಾಗಿದೆ. ಆರೋಗ್ಯಯುತ ಆಡಳಿತ ವ್ಯಸವ್ಥೆ ಕಲ್ಪಿಸುವದು ಹಾಗೂ ಸಿಬ್ಬಂದಿ ಕೊರತೆ ನಿಗಿಸಲು ಚಿಂತೆನ ನಡೆದಿದೆ ಎಂದು ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಹೇಳಿದರು
ಕಾಳಿ ನದಿ ನೀರು ಯೋಜನೆಯ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಬಾಗಿಯಾಗಲು ಬಾನುವಾರ ಪಟ್ಟಣಕ್ಕೆ ಆಗಮಿಸಿದ ಅವರು 'ಪಬ್ಲಿಕ್ ನೆಕ್ಸ್ಟ್ ’ ಯೊಂದಿಗೆ ಮಾತಾನಾಡಿ, ಹೊಸದಾಗಿ ತಾವು ಈ ಖಾತೆ ಪಡೆದಿದ್ದು, ಎಲ್ಲ ಸಮಗ್ರ ಮಾಹಿತಿ ಪಡೆದು ಮುಂದಿನ ಯೋಜನೆಗಳನ್ನು ಜಾರಿ ಮಾಡುವೆ ಎಂದರು.

ಹಲವು ಪಟ್ಟಣ ಪಂಚಾಯ್ತಿಗಳಿಗೆ ಶೀಘ್ರವೆ ಚುನಾವಣೆ ನಡೆಯಲಿವೆ. ಹಲವು ಪಟ್ಟಣ ಪಂಚಾಯ್ತಿಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದಿದೆ. ಆದಷ್ಟು ಬೇಗ ನ್ಯಾಯಾಲದ ನಿರ್ದೇಶನದಂತೆ ಮುಖ್ಯ ಮಂತ್ರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವದು. ಪಟ್ಟಣ ಪಂಚಾಯ್ತಿ ಅಧ್ಯಕ್ಷರ ಮೀಸಲಾತಿ ಗೊಂದಲ ಶೀಘ್ರವೆ ನಿವಾರಿಸಲು ಪ್ರಯತ್ನ ಮಾಡಲಾಗುವದು ಎಂದರು.

ಸರ್ಕಾರ ಸ್ಥಳಿಯ ಸಂಸ್ಥೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದೆ ಆದರೆ ಅದನ್ನು ಶೀಘ್ರ ಅನುಷ್ಟಾನ ಮಾಡಲು ವಿಳಂಭವಾಗುತ್ತಿದೆ ಎನ್ನವುದು ಸತ್ಯ. ಸಿಬ್ಬಂದಿ ಕೊರತೆ ಎಲ್ಲಡೆ ತಾಂಡವಾಡುತ್ತಿದೆ. ವಿಶೇಷವಾಗಿ ಇಂಜಿನಿಯರಗಳ ಕೊರತೆ ಇದೆ. ಗ್ರಾಮ ಪಂಚಾಯ್ತಿಗಳಲ್ಲಿ ಎನ್ ಆರ್ ಇ ಜಿ ಯೋಜನೆಗಾಗಿ ಗುತ್ತಿಗೆ ಆದಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಮಾದರಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸಿಬ್ಬಂದಿ ನೇಮಮ ಮಾಡಲು ಚಿಂತನೆ ಇದೆ.

ಸ್ವಚ್ಚ ಭಾರತ ಯೋಜನೆ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಈ ಕುರಿತು ಹಲವಾರು ಸಭೆಗಳನ್ನು ನಡೆಸಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಸ್ವಚ್ಚತೆ ಇದ್ದಲ್ಲಿ ಆರೋಗ್ಯಯುತ ಬದುಕು ಕಟ್ಟಲು ಸಾಧ್ಯ. ರಸ್ತೆಗಳಲ್ಲಿನ ಕಸ ರವಾನೆಗೆ ಆಧ್ಯತೆ ನೀಡಲಾಗುವದು ಎಂದರು.

ಬರಗಾಲದ ಕರಾಳ ಛಾಯೆಯಲ್ಲಿ ಜನ ಬಸವಳಿದಿದ್ದಾರೆ ಅಂತಹ ಪ್ರದೇಶಗಳ ಜನರಿಗೆ ಕುಡಿಯುವ ನೀರು ಒಗಿಸಲು ಅಮೃತ ಯೋಜನೆ ಶಿಪಾರಸ್ಸು ಮಾಡಲಾಗಿದೆ. ಉಗ್ಯೋಗ ಖಾತ್ರಿ ಯೋಜನೆಯನ್ನು ಪಟ್ಟಣಕ್ಕೂ ವಿಸ್ತರಿಸುವ ಬಗ್ಗೆ ಚರ್ಚೆ ನಡೆದಿದೆ. ನಗರ ಪ್ರದೇಶ ಜನರು ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆ ಸಹಕಾರಿಯಾಗಲಿದೆ ಈ ಕರಿತು ಮುಖ್ಯ ಮಂತ್ರಿಗಳ ಜೊತೆ ಚರ್ಚೆ ಮಾಡುವೆ ಎಂದರು.
ಶಾಸಕ ಶ್ರೀನಿವಾಸ ಮಾನೆ, ಮಾಜಿ ಸೈನಿಕರ ಸಮನ್ವಯ ಸಮಿತಿ ರಾಜ್ಯ ಅಧ್ಯಕ್ಷ ಅಜ್ಜಪ್ಪ ಕುರುಬರ, ಛಗನಲಾಲ ಪಟೇಲ, ತಮೀಮ ತೇರಗಾಂವ ಇದ್ದರು

Reach Count: 
1