Kshetra Samachara

Local News Subject: 
ಧೂಳಿನ ಮಜ್ಜನ... ನರಕಯಾತನ
City: 
Hubballi-Dharwad
Gadag
Upload Image: 
Category: 
Infrastructure
Body: 

ಹುಬ್ಬಳ್ಳಿ : ಸೆಂಟರ್‌ ರೋಡ್‌ ಫಂಡ್‌ (ಸಿಆರ್‌ಎಫ್‌) ಕಾಂಕ್ರೀಟ್‌ ರಸ್ತೆ ಕಾಮಗಾರಿ... ಪರ್ಯಾಯ ರಸ್ತೆ ಇಲ್ಲದೇ ಮಣ್ಣಿನ ರಸ್ತೆಯಲ್ಲಿಯೇ ವಾಹನಗಳ ಓಡಾಟ...ನಿತ್ಯ ಧೂಳಿನ ಕಿರಿಕಿರಿಗೆ ಬೇಸತ್ತಿರುವ ಅಕ್ಕ-ಪಕ್ಕದ ಮನೆಯ ನಿವಾಸಿಗಳು... ಅದೇ ರಸ್ತೆಯಲ್ಲಿ ಕುಸಿಯುತ್ತಿರುವ ಫುಟ್‌ಪಾತ್‌ ಪೇವರ್ಸ್‌...!

ಇದು ಯಾವುದೋ ಗ್ರಾಮೀಣ ಪ್ರದೇಶದ ಸಮಸ್ಯೆಯಲ್ಲಿ ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೊನಿ ದೇಶಪಾಂಡೆ ನಗರದ ವಾರ್ಡ ನಂ.46ರ ಪ್ರಮುಖ ರಸ್ತೆಯ ದುಸ್ಥಿತಿ.

ಅನೇಕ ವರ್ಷದ ಬೇಡಿಕೆ ನಂತರ ನಗರದ ಅಂಬೇಡ್ಕರ್‌ ವೃತ್ತದಿಂದ ಗುರುದತ್ತ ಭವನದವರೆಗೆ ಸಿಆರ್‌ಎಫ್‌ ಅನುದಾನದಲ್ಲಿ ಸಿಮೆಂಟ್‌ ಕಾಂಕ್ರೀಟ್‌ ರಸ್ತೆ ಕಾಮಗಾರಿ ನಡೆಯುತ್ತಿದೆ. ಆದರೆ, ಅದು ಚುರುಕು ಪಡೆಯದ ಕಾರಣಕ್ಕೆ ಅಲ್ಲಿನ ನಿವಾಸಿಗಳು ಹಾಗೂ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ನಿತ್ಯ ಧೂಳಿನ ಮಜ್ಜನ...

ರಸ್ತೆ ನಿರ್ಮಾಣಕ್ಕೆಂದು ಮೊದಲಿನ ಡಾಂಬರ್‌ ರಸ್ತೆಯನ್ನು ಅಗೆಯಲಾಗಿದ್ದು, ಅದರಿಂದ ಉಂಟಾದ ಧೂಳು ಇಡೀ ಕಾಲೊನಿಯನ್ನು ಆವರಸಿಕೊಂಡಿದೆ. ಕಾಲೊನಿಯ ಬಹುತೇಕ ಮನೆಯಲ್ಲಿ ನಿತ್ಯ ಧೂಳಿನ ಕಿರಿಕಿರಿಗೆ ಜನರು ಬೇಸತ್ತು ಹೋಗಿದ್ದಾರೆ. ಒಂದು ಸಣ್ಣ ವಾಹನ ಹಾಯ್ದು ಹೋದರೇ ಸಾಕು ಪಾದಾಚಾರಿಗಳಿಗೆ ಧೂಳಿನ ಮಜ್ಜನ ಆಗುವುದು ಗ್ಯಾರಂಟಿ. ವಿಪರೀತ ಧೂಳಿನಿಂದ ಈ ಭಾಗದಲ್ಲಿ ಅಕ್ಷರಶಃ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಮೂಗಿಗೆ ಕರವಸ್ತ್ರ ಅಥವಾ ಮಾಸ್ಕ್‌ ಹಾಕಿಕೊಂಡೆ ಓಡಾಡಬೇಕಾದ ಪರಿಸ್ಥಿತಿ ಉಂಟಾಗಿದ್ದು, ಜನರು ನರಕಯಾತನೆ ಅನುಭವಿಸುವಂತಾಗಿದೆ. ಧೂಳಿನಿಂದ ಜನರಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ನಿತ್ಯ ಮೂರು ಬಾರಿ ಟ್ಯಾಂಕರ್‌ ಮೂಲಕ ನೀರು ಸಿಂಪರಣೆ ಮಾಡಬೇಕು ಎಂದು ಅಲ್ಲಿನ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.

ಕುಸಿಯುತ್ತಿದೆ ಪೇವರ್ಸ್‌...

ಮಧ್ಯದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೆ ಅದರ ಅಕ್ಕ-ಪಕ್ಕದಲ್ಲಿರುವ ಫುಟ್‌ಪಾತ್‌ ಪೇವರ್ಸ್‌ ಅಲ್ಲಲ್ಲಿ ಕುಸಿದು ಬೀಳುತ್ತಿದೆ. ಚರಂಡಿಯ ಮೇಲೆ ಬಹಳ ನಾಜೂಕಾಗಿ ಫುಟ್‌ಪಾತ್‌ ನಿರ್ಮಿಸಿದ್ದರಿಂದ ಅದು ತೂಕವನ್ನು ತಡೆಯುತ್ತಿಲ್ಲ. ಫುಟ್‌ಪಾತ್‌ನಲ್ಲಿ ನಡೆಯುವ ಪಾದಾಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. ಕೆಲವು ಕಡೆ ಇಕ್ಕಟ್ಟಿನ ಸ್ಥಳದಲ್ಲಿ ಫುಟ್‌ಪಾತ್‌ ಮೇಲೆಯೇ ವಾಹನಗಳು ಸಂಚರಿಸುತ್ತಿವೆ. ಅದರಿಂದಾಗಿ ಫುಟ್‌ಪಾತ್‌ನ ಪೇವರ್ಸ್‌ಗಳು ಕುಸಿದು ತೆಗ್ಗು ನಿರ್ಮಾಣವಾಗುತ್ತಿದೆ. ದೇಶಪಾಂಡೆ ನಗರದಲ್ಲಿ ಫುಟ್‌ಪಾತ್‌ ಕುಸಿತದಿಂದ ಉಂಟಾದ ತಗ್ಗಿನಲ್ಲಿ ಅನೇಕರು ಬಿದ್ದು ಗಾಯ ಮಾಡಿಕೊಂಡಿದ್ದಾರೆ ಎಂದು ಅಲ್ಲಿನ ನಿವಾಸಿಗಳ ಆರೋಪವಾಗಿದೆ.

ನೀರು ಸಿಂಪರಣೆಗೆ ಆಗ್ರಹ..

ದೇಶಪಾಂಡೆ ನಗರದಲ್ಲಿ ರಸ್ತೆ ಕಾಮಗಾರಿಯಿಂದ ಉಂಟಾದ ಧೂಳಿಗೆ ಅಲ್ಲಿನ ನಿವಾಸಿಗಳು ಬೇಸತ್ತು ಹೋಗಿದ್ದು, ಮನೆಯಿಂದ ಹೊರಗೆ ಬರದಂತ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಾಮಗಾರಿ ಮುಗಿಯುವವರೆಗೂ ನಿತ್ಯ ಮೂರು ಬಾರಿ ಟ್ಯಾಂಕರ್‌ನಿಂದ ನೀರು ಸಿಂಪರಣೆ ಮಾಡಬೇಕು. ಅದರಿಂದ ಧೂಳಿನ ಕಿರಿಕಿರಿ ತಪ್ಪುತ್ತದೆ ಎಂಬುದು ಅಲ್ಲಿನ ವ್ಯಾಪಾರಿಗಳ ಹಾಗೂ ನಿವಾಸಿಗಳ ಆಗ್ರಹವಾಗಿದೆ.

ಕೃಪೆ: vk

Reach Count: 
1