Kshetra Samachara

Local News Subject: 
ಧಾರವಾಡ: ಸೇವಾಲಾಲರ ಸೇವೆಯಿಂದಲೇ ಬಂಜಾರ ಸಮಾಜ ಬೆಳಕಿಗೆ ಬಂದಿದೆ
City: 
Hubballi-Dharwad
Gadag
Upload Image: 
Category: 
Cultural Activity
Body: 

ಧಾರವಾಡ: ಸಂತ ಸೇವಾಲಾಲರ ದೇಶ ಸಂಚಾರದ ಮೂಲಕ ಧರ್ಮ ಪ್ರಚಾರ ಮತ್ತು ಅವರ ನಿಸ್ವಾರ್ಥ ಸೇವೆಯಿಂದ ಬಂಜಾರ ಸಮುದಾಯ ಬೆಳಕಿಗೆ ಬಂದಿದ್ದು, ಸೇವಾಲಾಲರೇ ಸಮಾಜದ ಬೆಳಕು ಎಂದು ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಹೇಳಿದರು.
ಇಲ್ಲಿನ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂತ ಸೇವಾಲಾಲ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣವರ ಕಾಯಕವೇ ಕೈಲಾಸ ಎಂಬ ತತ್ವದಡಿಯಲ್ಲಿಯೇ ದುಡಿದು ಬದುಕುವ ಬಂಜಾರ ಸಮಾಜ ಇನ್ನೊಂದು ಜನಾಂಗಕ್ಕೆ ಮಾದರಿಯಾಗಿದೆ. ಈ ಸಮಾಜ ರಾಜಕೀಯದಲ್ಲಿಹಾಗೂ ಶೈಕ್ಷಣಿಕ ಕೇತ್ರಗಳಲ್ಲಿ ಮುಂದೆ ಬರಬೇಕು. ಬಂಜಾರ ಸಮಾಜಕ್ಕೆ ಜಿಲ್ಲೆಯಲ್ಲಿ 1 ಕೋಟಿ ರೂ. ಅನುದಾನದಲ್ಲಿ ಬಂಜಾರ ಭವನ ಹಾಗೂ ಜಿಲ್ಲೆಯಲ್ಲಿ ಸ್ಥಳಾವಕಾಶವಿದ್ದರೆ ಹಾಸ್ಟೆಲ್ ನಿರ್ಮಾಣ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಬಂಜಾರ ಗುರುಪೀಠದ ತಿಪ್ಪೇಶ್ವರ ಮಾಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಪ್ರಾಸ್ತಾವಿಕವಾಗಿ ಸಮಾಜದ ಮುಂಖಡ ಪಾಂಡುರಂಗ ಪಮ್ಮಾರ ಮಾತನಾಡಿದರು.
ಅನೀಲ ಮೇತ್ರಿ ತಂಡದಿಂದ ನಾಡಗೀತೆ ಹಾಗೂ ವಚನಗಾಯನ ನಡೆಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ.ರಂಗಣ್ಣವರ, ಡಾ.ಎಲ್.ಪಿ.ಲಮಾಣಿ, ಕೆ.ರಾಮಚಂದ್ರ ನಾಯಕ್, ಅಮರೇಶ ಪವಾರ ಇದ್ದರು.

Reach Count: 
1