Kshetra Samachara

Local News Subject: 
ಹುಬ್ಬಳ್ಳಿ: ಅಕ್ರಮ ವಿಗ್ರಹ ಮಾರಾಟ ಮೂವರ ಬಂಧನ, ಎರಡು ಕಾರ್ ಜಪ್ತಿ
City: 
Hubballi-Dharwad
Gadag
Upload Image: 
Category: 
Crime
Body: 

ಹುಬ್ಬಳ್ಳಿ: ಪಂಚಲೋಹದ ಮೂರ್ತಿಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಮೂವರನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂ. ಮೌಲ್ಯದ 2 ವಿಗ್ರಹ ಹಾಗೂ 2 ಕಾರ್ ಮತ್ತು ಮೊಬೈಲ್ ಫೋನ್‍ಗಳನ್ನು ಗೋಕುಲ ಠಾಣೆ ಪೊಲೀಸರು
ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಬೆಂಗಳೂರು ಮೂಲದ ಶ್ರೀವತ್ಸ ನಾರಾಯಣ, ಅಬ್ದುಲ್ ಮತೀನ ಗುಲಾಮ ಅಲಿ ಹಾಗೂ ಶಿವಮೊಗ್ಗದ ಚನ್ನಬಸಪ್ಪ ಎಂಬುವರನ್ನು ಬಂಧಿಸಿ, ಆರೋಪಿತರಿಂದ ಒಂದು ಪಂಚಲೋಹದ ವಿಷ್ಣು ಮೂರ್ತಿ, ಒಂದು ಲೋಹದ ವೀರಭದ್ರ
ದೇವರ ಮೂರ್ತಿ ಹಾಗೂ ಒಂದು ಗ್ರೇ ಕಲರ್ ಹೊಂಡೈಸ್ಯಾಂಟ್ರೋ ಕಾರ್, ಬಿಳಿ ಬಣ್ಣದ ಮಾರುತಿ ಸುಜುಕಿ ಸ್ವಿಪ್ಟ್ ಡಿಸೈರ್ ಕಾರ್ ವಶಪಡಿಸಿಕೊಳ್ಳಲಾಗಿದೆ ಎಂದು ಶುಕ್ರವಾ ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ರವೀಂದ್ರ ಗಡಾದಿ ಮಾಹಿತಿ ನೀಡಿದರು.
ಆರೋಪಿತರೆಲ್ಲರೂ ಸೇರಿಕೊಂಡು ಹೊಸ ಬಸ್ ನಿಲ್ದಾಣದ ಬಳಿ ಸಾರ್ವಜನಿಕರನ್ನು ಪಂಚಲೋಹದ ಮೂರ್ತಿಗಳೆಂದು ನಂಬಿಸಿ 60 ಲಕ್ಷ ರೂ.ಗಳಿಗೆ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯನ್ನಾಧರಿಸಿ ಸಿಸಿಬಿ ಪೊಲೀಸರು
ಹಾಗೂ ಗೋಕುಲ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಆರೋಪಿತರಿಂದ ಜಪ್ತಿ ಮಾಡಿರುವ ಮೂರ್ತಿಗಳ ಅಂದಾಜು ಮೌಲ್ಯ 6 ಲಕ್ಷ ರೂ. ಆಗಿರಬಹುದೆಂದು ಅಂದಾಜಿಸಲಾಗಿದೆ ಎಂದೂ ಅವರು ತಿಳಿಸಿದರು. ಈ ಕುರಿತಂತೆ ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Reach Count: 
1