Kshetra Samachara

Local News Subject: 
ಗುರುವಿನ ಸೇವೆ ಉತ್ಕೃಷ್ಟವಾದ್ದು, ಫಾದರ್ ಅಂಥೋನಿ ಅಭಿಮತ
City: 
Hubballi-Dharwad
Gadag
Category: 
Cinema
Others
Body: 

ಅಳ್ನಾವರ : ಸಮಾಜದ ಸಮಗ್ರ ಅಭ್ಯುದಯಕ್ಕೆ ಶಿಕ್ಷಣ ಪೂರಕ. ಗುರುವಿನ ಸೇವೆ ಶ್ರೇಷ್ಟ ಮೌಲ್ಯದಿಂದ ಕೂಡಿದೆ. 25 ವರ್ಷ ಅಕ್ಷರ ಧಾರೆ ಎರೆದ ಲೀನಾ ಡಿಸೋಜಾ ಅವರ ಸೇವೆ ಅನುಪಮ ಎಂದು ಧರ್ಮಗುರು ಅಂಥೋನಿ ಡಿಸೋಜಾ ಹೇಳಿದರು.

ಇಲ್ಲಿನ ಸೇಂಟ್ ತೆರೇಸಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಲೀನಾ ಡಿಸೋಜಾ ಅವರಿಗೆ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಸಮಾಜದ ಕಳಿಕಳಿ ಹೊಂದಿದ ಲೀನಾ ಅವರು ಮಕ್ಕಳಲ್ಲಿ ಪ್ರೀತಿ, ತ್ಯಾಗ ಭಾವನೆ ಹುಟ್ಟು ಹಾಕುವಲ್ಲಿ ಶ್ರಮಿಸುತ್ತಿದ್ದಾರೆ ಎಂದರು.

ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕಿ ಲೀನಾ ಅವರಿಗೆ ನೆನಪಿನ ಕಾಣಿಕೆ ಅರ್ಪಿಸಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿದ ಶಿಕ್ಷಕಿ ಲೀನಾ ಡಿಸೋಜಾ ಮಾತನಾಡಿ, ಶಾಲೆ ಒಂದು ಪವಿತ್ರ ಮಂದಿರ ಇದ್ದಂತೆ. ಕುಟುಂಬದ ಕಷ್ಟ ನೋವುಗಳು ಮಕ್ಕಳ ಮಂದಹಾಸದಲ್ಲಿ ಮಾಯವಾಗುತ್ತವೆ ಎಂದರು.
ಮುಖ್ಯ ಶಿಕ್ಷಕಿ ಯುವ್ಜೀನ್ ಸೈಮನ್, ಪಟ್ಟಣ ಪಂಚಾಯ್ತಿ ಸದಸ್ಯ ಜೈಲಾಣಿ ಸುದರ್ಜಿ, ಎಂ.ಆಯ್. ದಿವಟಗಿ, ಶಿಕ್ಷಣ ಸಂಯೋಜಕ ಅಂಗಡಿ, ಶಾಲೆಟ ಬರಬೋಜಾ, ಪಿಲೋಮಿನಾ ಬೆರೆಟ್ಟೊ, ವಿಲ್ಸನ್ ಲೋಬೋ, ಪುಂಡಲಿಕ ಪಾರದಿ, ಪ್ರಸಾದ ಕಂಬಿಮಠ, ಲಕ್ಷ್ಮಿ ಕಂಬಿಮಠ, ರುದ್ರೇಶ ಹಡಪದ, ಉಮೇಶ ದೊಡ್ಡಮನಿ, ಲೂಸಿ ಕೊರಿಯಾ, ಜುಲಿಯಾನಾ ಲೋಬೊ, ಸೆರಾಫಿನ್ ಡಿಸೋಜಾ, ಮುಕ್ತಾ ಕಾತರಕಿ, ಇದ್ದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು

Reach Count: 
409