Kshetra Samachara

Local News Subject: 
ಅಧುನಿಕ ಜೀವನ ಪದ್ದತಿ, ಒತ್ತಡದ ಬದುಕು ಬೇಡ.
City: 
Hubballi-Dharwad
Gadag
Upload Image: 
Category: 
Lifestyle
Body: 

ಅಳ್ನಾವರ : ಅಧುನಿಕ ಜೀವನ ಪದ್ದತಿ ಹಾಗೂ ಒತ್ತಡದ ಬದುಕು ಸಕ್ಕರೆ ಕಾಯಿಲೆಗೆ ಅಹ್ವಾನ ನೀಡುತ್ತದೆ ಎಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈಧ್ಯ ಡಾ. ನಿತೇಶ ಜೈನ ಹೇಳಿದರು.
ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ಶಿವಾ ರಕ್ತ ತಪಾಸಣಾ ಕೇಂದ್ರದವರು ಅಂಬೇಡ್ಕರ ಭವನದಲ್ಲಿ ಶನಿವಾರ ಹಮ್ಮಿಕೊಂಡ ಉಚಿತ ಮಧುಮೇಹ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಪ್ರತಿ ಹತ್ತು ಜನರಲ್ಲಿ ಆರು ಜನರಿಗೆ ಮಧುಮೇಹ ಇದೆ. ಪ್ರಪಂಚದಲ್ಲಿ ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿದ ೩ ನೇ ದೊಡ್ಡ ರಾಷ್ಟ್ರ ನಮ್ಮದು . ಉತೃಷ್ಟ ಜೀವನ ಪದ್ದತಿ ಬೆಳೆಸಿಕೊಂಡು ಬರುವ ದಿನಗಳಲ್ಲಿ ಸಕ್ಕರೆ ಕಾಯಿಲೆಯಿಂದ ದೂರವಾದ ಸಮಾಜ ಕಟ್ಟೋಣ ಎಂದರು.

ಸ್ಥಳಿಯ ವೈದ್ಯರ ಸಂಘದ ಅಧ್ಯಕ್ಷ ಡಾ. ಬಸವರಾಜ ಮೂಡಬಾಗಿಲ್ ಮಾತನಾಡಿ, ಇಂತಹ ಶಿಬಿರದ ಲಾಭ ಪಡೆದುಕೊಳ್ಳಿ, ನಿತ್ಯ ಯೋಗ, ಧ್ಯಾನ ಮಾಡಬೇಕು. ವಾಕಿಂಗ್ ಮಾಡುವಾಗ ಯಾವುದೆ ಆಲೋಚನೆಗಳು ಇರಬಾರದು. ಮನಸ್ಸು ನಿರ್ಮಲವಾಗಿರಬೇಕು ಎಂದರು.

102 ಕ್ಕೂ ಹೆಚ್ಚು ರೋಗಿಗಳನ್ನು ತಪಾಸಣೆ ಮಾಡಲಾಯಿತು. ಅಳ್ನಾವರ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿ ಜನರು ಭಾಗವಹಿಸಿದ್ದರು. ಗಣ್ಯರ ಸತ್ಕಾರ ನಡೆಯಿತು.
ಡಾ. ಅಶೋಕ ಕುಂಟನ್ನವರ, ಡಾ. ಜಿ.ಎಸ್. ಹಿರೇಮಠ, ಡಿ.ಬಿ. ಪಾಟೀಲ, ಎಸ್.ಬಿ. ಪಾಟೀಲ, ಬಿ.ಎ. ಪಾಟೀಲ, ಪ್ರೇಮನಾಥ ಜಿತೂರಿ, ಕೆ.ಪಿ. ತಿಪ್ಪೇಶಿ, ಆರ್.ಜಿ. ಹಿರೇಮಠ, ಮಂಜುನಾಥ ಬಾಳೆಕುಂದ್ರಿ, ಡಾ. ಆರ್.ಎಸ್. ಬಿಜಾಪೂರ, ಐ.ಸಿ .ಹಸಬಿಮಠ, ಯುಹಾನ ಸಿಂಗನಮು, ಆಯ್.ಸಿ. ಹಸಬಿಮಠ ಇದ್ದರು.

Reach Count: 
1470