Kshetra Samachara

Local News Subject: 
ಕಲಘಟಗಿಯಲ್ಲಿ ಮಹಿಳೆಯರಿಂದ ಮೌನಾಚರಣೆ.
City: 
Hubballi-Dharwad
Gadag
Hubballi-Dharwad
Category: 
Law and Order
Body: 

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಕಪ್ಪು ಉಡುಗೆಯಲ್ಲಿ ಮಹಿಳೆಯರು ಸಮತೆಯಡೆಗೆ ನಮ್ಮನಡಿಗೆ (women in black) ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಬೇಕು ಎಂದು ಆಗ್ರಹಿಸಿ ದೀಪಗಳನ್ನು ಹಿಡಿದ ಮಹಿಳೆಯರು ಒಂದು ಗಂಟೆ ಮೌನಾಚರಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವಾಣಿ ಪೆರಿಯೋಡಿ, ಹಾಗೂ ಸದಸ್ಯರಾದ ಶಾರದಾ ಗೋಪಾಲ,ರಾಜೇಶ್ವರಿ ಜೋಶಿ,ನಿರ್ಮಲಾ ಶೆಟ್ಟರ, ಕೂಲಿಕಾರ್ಮಿಕ ಸಂಘದ ನಿಂಗಮ್ಮ ಸವಣೂರ ಹಾಗೂ ಸದಸ್ಯರು, ಕಸಾಪ ಅಧ್ಯಕ್ಷರಾದ ಅನಿತಾ ಹತ್ತಿ ಹಾಗೂ ಸದಸ್ಯರಾದ ವನಿತಾ ಆರ್,ಪೂರ್ಣಿಮಾ ಭಟ್,ಸಂತೋಷ ಬಿಜಾಪೂರ,ಎಚ್ ಡಿ ಲಾಡಸಾಬನವರ,ಶಿಲ್ಪಾ ಚರಂತಿಮಠ ಹಾಗೂ ಮಹಿಳೆಯರು ಭಾಗವಹಿಸಿದ್ದರು.

Reach Count: 
1