Public News

News Subject: 
ಆಡಿಯೋದಲ್ಲಿರುವುದು ಬಿಎಸ್‌ವೈ ಧ್ವನಿ ಎಂದು ಹೇಳಿಲ್ಲ: ಸಿಎಂ ಕುಮಾರಸ್ವಾಮಿ 'U' ಟರ್ನ್
Upload Image: 
Category: 
Politics
Body: 

ಮಂಗಳೂರು: ಆಪರೇಷನ್ ಕಮಲ ಸಂಬಂಧ ಬಿಡುಗಡೆ ಮಾಡಿರುವ ಆಡಿಯೋದಲ್ಲಿರುವ ಧ್ವನಿ ಬಿ.ಎಸ್.ಯಡಿಯೂರಪ್ಪ ಅವರದ್ದೆ ಎಂದು ಹೇಳಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯೂ ಟರ್ನ್ ಹೊಡೆದಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಡುಗಡೆಯಾಗಿರುವ ಆಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಮಾತು. ಈ ಕುರಿತು ಸಮಗ್ರ ತನಿಖೆಗೆ ಆದೇಶ ಮಾಡುತ್ತೇನೆಂದು ಅವರು ಹೇಳಿದರು.

ಆಡಿಯೋ ಸಂಬಂಧ ಪ್ರಧಾನಿಯವರು ತನಿಖೆಗೆ ತೀರ್ಮಾನಿಸಿ ಸಹಕಾರ ಕೊಡಬೇಕು. ಅವರು ಸಹಕಾರ ಕೊಟ್ಟರೆ, ಅವರ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡುತ್ತೇನೆ ಎಂದು ಹೇಳಿದರು.
L
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಆಡಿಯೋವನ್ನು ಮಿಮಿಕ್ರಿ ಎಂದು ಹೇಳಿದ್ದಾರೆ. ಆದರೆ, ಈ ಕುರಿತು ಸತ್ಯಾಸತ್ಯತೆ ಹೊರ ಬರಬೇಕಾಗಿದೆ. ಹೀಗಾಗಿ ತನಿಖೆ ಮಾಡಬೇಕು ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾದ ಅವಶ್ಯಕತೆ ಇದೆ ಎಂದು ಸಿಎಂ ಹೇಳಿದರು.

ರಾಜ್ಯ ಬಜೆಟ್‌ 2019ರ ಮಂಡನೆಗೂ ಮೊದಲು ಗೃಹ ಕಚೇರಿ ಕೃಷ್ಣಯಲ್ಲಿ ಸಿಎಂ ಕುಮಾರಸ್ವಾಮಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ 'ಆಪರೇಷನ್‌ ಕಮಲ'ದ ಆಡಿಯೋ ಬಿಡುಗಡೆ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದರು.

ಗುರುಮಠಕಲ್‌ ಕ್ಷೇತ್ರದ ಜೆಡಿಎಸ್‌ ಶಾಸಕ ನಾಗನಗೌಡ ಪುತ್ರ ಶರಣಗೌಡ ಅವರಿಗೆ ಬಿಎಸ್‌ ಯಡಿಯೂರಪ್ಪ ಆಮಿಷ ಒಡ್ಡಿದ್ದಾರೆ ಎನ್ನಲಾದ ಆಡಿಯೋವನ್ನು ಬಿಡುಗಡೆ ಮಾಡಿ, ಈ ಆಡಿಯೋ ರೆಕಾರ್ಡ್‌ ಮಾಡಿಸಿದ್ದು ನಾನೇ ಎಂದಿದ್ದರು. ಅಪರೇಷನ್‌ ಕಮಲ ಜೀವಂತವಾಗಿದೆ. ಸಮ್ಮಿಶ್ರ ಸರಕಾರ ಕೆಡವಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬುದನ್ನು ಆಡಿಯೋ ಮೂಲಕ ಮನವರಿಕೆ ಮಾಡಲು ಪ್ರಯತ್ನಿಸಿದ್ದರು.

Reach Count: 
1