ER NEWS

News Subject: 
ಬೆಂಗಳೂರಿನ ರಸ್ತೆ ಗುಂಡಿಗೆ ಮಹಿಳೆ ಬಲಿ
Upload Image: 
Body: 

ನಗರದ ಅತ್ಯಂತ ವಾಹನ ದಟ್ಟಣೆ ಹೊಂದಿರುವ ಮೈಸೂರು ರಸ್ತೆಯ ಗುಂಡಿಗೆ ಮಹಿಳೆಯೊಬ್ಬರು ಭಾನುವಾರ ಬಲಿಯಾಗಿದ್ದಾರೆ.ಕಳೆದ ವಾರವಷ್ಟೇ ಮೈಸೂರು ಫ್ಲೈಓವರ್ ಮೇಲಿನ ರಸ್ತೆ ಗುಂಡಿಗೆ ದಂಪತಿ ಬಲಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.ರಸ್ತೆಗುಂಡಿ ತಪ್ಪಿಸಲು ಹೋದಾಗ ಹೋಂಡಾ ಆಕ್ಟಿವಾದ ಹಿಂಬದಿ ಸೀಟಿನಲ್ಲಿದ್ದ ಮಹಿಳೆ ರಸ್ತೆಗೆ ಬಿದ್ದಿದ್ದಾರೆ, ಹಿಂಬದಿಯಿಂದ ಬರುತ್ತಿದ್ದ ಲಾರಿ ಹರಿದು ಮಹಿಳೆ ಸಾವನಪ್ಪಿದ್ದಾರೆ. ವಾಹನ ಚಲಾಯಿಸುತ್ತಿದ್ದ ಯುವಕ ರವಿಕುಮಾರ್ ಎಂಬಾತ ಬಚಾವಾಗಿದ್ದಾನೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿರುವ ಬಿಬಿಎಂಪಿ ಪ್ರತಿ ವಾರದಲ್ಲಿ ಇಂತಿಷ್ಟು ಮುಂಚುವ ಯೋಜನೆ ಹಾಕಿಕೊಂಡಿದ್ದಾರೆ. ವಾರದೊಳಗೆ ಎಲ್ಲಾ ಕಾರ್ಯ ಪೂರ್ಣಗೊಳ್ಳಲಿದೆ ಎಂದು ನೂತನ ಮೇಯರ್ ಸಂಪತ್ ರಾಜ್ ಘೋಷಿಸಿದ್ದಾರೆ.

ಈ ನಡುವೆ ರಸ್ತೆ ಗುಂಡಿ ಮುಚ್ಚುವುದರ ಹಿಂದೆ, ಕಳಪೆ ಕಾಮಗಾರಿಯ ಬಗ್ಗೆ ತನಿಖೆ ನಡೆಸಿದರೆ ಕೋಟ್ಯಂತರ ರೂಪಾಯಿ ಅವ್ಯವಹಾರ ಬಯಲಿಗೆ ಬರಲಿದೆ ಎಂದು ಬಿಜೆಪಿ ನಾಯಕ ಎನ್. ಆರ್ ರಮೇಶ್ ಆರೋಪಿಸಿದ್ದಾರೆ. ರಸ್ತೆ ಗುಂಡಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ.

Reach Count: 
1