ER NEWS

News Subject: 
ಕರ್ನಾಟಕ ಹೈ ಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಎಚ್ ಜಿ ರಮೇಶ್ ನೇಮಕ
Upload Image: 
Body: 

ಕರ್ನಾಟಕ ಹೈ ಕೋರ್ಟ್ ನ ಹಿರಿಯ ನ್ಯಾಯಾಧೀಶರಾಗಿರುವ ಎಚ್. ಜಿ. ರಮೇಶ್ ನೂತನ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಸುಬ್ರೋ ಕಮಲ್ ಮುಖರ್ಜಿ ಅವರು ಅ.9 ರಂದು ನಿವೃಅತ್ತರಾಗಲಿರುವ ಹಿನ್ನೆಲೆಯಲ್ಲಿ ಅ.10ರಂದು ನ್ಯಾಯಾಧೀಶ ರಮೇಶ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಹುದ್ದೆಗೆ ಏರಲಿದ್ದಾರೆ.

ನಿನ್ನೆ, ಭಾರತದ ಕಾನೂನು ಮತ್ತು ನ್ಯಾಯ ಮಂತ್ರಾಲಯವು ಅ.10 ರಿಂದ ಮುಖ್ಯ ನ್ಯಾಯಮೂರ್ತಿ ಕಛೇರಿ ಕರ್ತವ್ಯಗಳನ್ನು ನಿರ್ವಹಿಸಲು ನ್ಯಾಯಮೂರ್ತಿ ಹಂಚದಕಟ್ಟೆ ಗೋಪಾಲಯ್ಯ ರಮೇಶ್ ಅವರನ್ನು ನೇಮಕ ಮಾಡಿತು. ಜ. 16, 1957 ರಂದು ಜನಿಸಿದ ನ್ಯಾಯಮೂರ್ತಿ ರಮೇಶ್ ಜುಲೈ 16, 1982 ರಂದು ವಕೀಲ ವೃತ್ತಿ ಪ್ರಾರಂಭಿಸಿದರು. ಕರ್ನಾಟಕ ಹೈ ಕೋರ್ಟ್ ನಲ್ಲಿ 1982 ರಿಂದ 2003 ರವರೆಗೆ ಕೆಲಸ ಮಾಡಿದ್ದ ರಮೇಶ್ ಮೇ 12, 2003 ರಂದು ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ಸೆ.24, 2004 ರಂದು ಶಾಶ್ವತ ನ್ಯಾಯಾಧೀಶರಾಗಿ ನೇಮಕಗೊಂಡರು.

Reach Count: 
1