ER NEWS

News Subject: 
ಹುಟ್ಟೂರಿನಲ್ಲಿ ಮೋದಿ; ಶಾಲೆಗೆ ಶಿರಬಾಗಿ ನಮನ, ಮಣ್ಣಿನ ತಿಲಕ
Upload Image: 
Body: 

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹುಟ್ಟೂರು ವಡ್ನ‌ಗರ್‌ನ ಪ್ರವಾಸದಲ್ಲಿದ್ದು,ತಾನು ಕಲಿತ ಶಾಲೆಗೆ ಭೇಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಎಡೆಬಿಡದೆ ಭಾಗಿಯಾಗುತ್ತಿದ್ದಾರೆ. ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿ ಹುಟ್ಟೂರಿಗೆ ಆಗಮಿಸಿದ ಮೋದಿ ಅವರಿಗೆ ಜನರು ಭರ್ಜರಿ ಸ್ವಾಗತ ನೀಡಿದರು. ರೋಡ್‌ ಶೋ ಮೂಲಕ ಜನರರೊಂದಿಗೆ ಬೆರೆತರು.

ತಾನು ಕಲಿತ ಶಾಲೆಗೆ ಭೇಟಿ ನೀಡಿದ ಮೋದಿ ಶಿರಬಾಗಿ ನಮಿಸಿ ಶಾಲೆಯ ಒಳ ಪ್ರವೇಶಿಸಿ ತನ್ನ ಬಾಲ್ಯದ ದಿನಗಳನ್ನು ನೆನಪಿಸಿದರು.ತಾನು ಆಡಿ ಬೆಳೆದ್ದಿದ್ದ ಮಣ್ಣಿನ ತಿಲಕವನ್ನು ಹಚ್ಚಿಕೊಂಡರು. ಸಮೀಪದ ಹಟ್‌ಕೇಶ್ವರ್‌ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನಡೆಸಿದರು.

500 ಕೋಟಿಯ ಆಸ್ಪತ್ರೆ ಉದ್ಘಾಟನೆ

ಹುಟ್ಟೂರಿನಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ GMERS ಮೆಡಿಕಲ್‌ ಕಾಲೇಜನ್ನು ಮೋದಿ ಉದ್ಘಾಟಿಸಿದರು. ಈ ವೇಳೆ ಗುಜರಾತ್‌ ಸಿಎಂ ವಿಜಯ್‌ ರೂಪಾನಿ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು. ಮೆಡಿಕಲ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Reach Count: 
1