ER NEWS

News Subject: 
ಬೆಳ್ಳಂಬೆಳಿಗ್ಗೆ ಧಾರಾಕಾರ ಮಳೆಗೆ ಬೆಂಗಳೂರು ತತ್ತರ
Upload Image: 
Body: 

ರಾಜಧಾನಿಯಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದ್ದು, ನಿರಂತರ ಮಳೆಯ ಅವಾಂತರಕ್ಕೆ ಜನ ಹೈರಾಣಾಗಿದ್ದಾರೆ. ಭಾನುವಾರ ಬೆಳಗಿನ ಜಾವ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಅವಾಂತರ ಸೃಷ್ಠಿಸಿದೆ. ಕಿನೋ ಥಿಯೇಟರ್ ಬಳಿ ರೈಲ್ವೇ ಸೇತುವೆಯ ಛಾವಣಿ ಕುಸಿದಿದೆ. ಕೆಂಪೇಗೌಡ ರಸ್ತೆಯ ತ್ರಿವೇಣಿ ಥಿಯೇಟರ್ ಆವರಣ ಜಲಾವೃತಗೊಂಡಿದೆ.

ಮೆಜೆಸ್ಟಿಕ್ ಕೆರೆಯಂತಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಯಶವಂತಪುರ, ಹೆಬ್ಬಾಳ, ಕಾರ್ಪೊರೇಷನ್ ರೋಡ್, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ.ರಸ್ತೆಗಳಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ನಿನ್ನೆ ಕೋರಮಂಗಲದಲ್ಲಿ ವಿದ್ಯುತ್ ಲೈನ್ ಮೇಲೆ ಮರಬಿದ್ದು, ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Reach Count: 
1