Public News

News Subject: 
ಅರ್ಜುನ್ ಸರ್ಜಾ Vs ಶೃತಿ ಹರಿಹರನ್.. ಯಾರ ಪರವಾಗಿ ಯಾವ್ಯಾವ ನಟ-ನಟಿಯರು..?
Upload Image: 
Category: 
Cinema
Body: 

#Metoo ಸದ್ಯ ಕನ್ನಡ ಚಿತ್ರರಂಗವನ್ನ ತಲ್ಲಣಗೊಳಿಸಿದ ಅಭಿಯಾನ.. ನಿಮಗೆಲ್ಲ ಗೊತ್ತಿರುವ ಹಾಗೆ ಹಿರಿಯ ನಟ ಅರ್ಜುನ್ ಸರ್ಜಾ ಹಾಗೆ ನಟಿ ಶೃತಿ ಹರಿಹರನ್ ನಡುವೆ ಮೀಟೂ ಬಿರುಗಾಳಿ ಎದ್ದಿದೆ.. ತನ್ನ ಜೊತೆ ವಿಸ್ಮಯ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಅಂತ ಶೃತಿ ಹರಿಹರನ್ ಆರೋಪ ಮಾಡಿದ್ದಾರೆ…

ಇಬ್ಬರು ಕೋರ್ಟ್ ಮೆಟ್ಟಿಲೇರಿ ಸಮಸ್ಯೆಯನ್ನ ಬಗೆ ಹರಿಸಿಕೊಳ್ಳುವ ವರೆಗೆ ಈ ಪ್ರಕರಣ ಬಂದು ನಿಂತಿದೆ.. ಇನ್ನೂ ಈ ಆರೋಪಕ್ಕೆ ಸಂಬಂಧ ಪಟ್ಟಂತೆ ಅರ್ಜುನ್ ಸರ್ಜಾ ಹಾಗೆ ಶೃತಿ ಹರಿಹರನ್ ಬೆನ್ನಿಗೆ ಸ್ಯಾಂಡಲ್ವುಡ್ ನಟನಟಿಯರು ನಿಂತಿದ್ದಾರೆ…

ಶೃತಿ ಹರಿಹರನ್ ಆರೋಪಕ್ಕೆ ಬೆಂಬಲ ಸೂಚಿಸಿ ನಟ ಚೇತನ್, ಪ್ರಕಾಶ್ ರೈ, ಶ್ರದ್ಧಾ ಶ್ರೀನಾಥ್, ರಾಗಿಣಿ, ಸಂಗೀತ ಭಟ್,ನೀತು ಶೆಟ್ಟಿ, ಸಂಯುಕ್ತ ಹೆಗಡೆ, ನಿಧಿ ಸುಬ್ಬಯ್ಯ, ಮೇಘನ ಗಾಂವ್ಕರ್, ಸೇರಿದಂತೆ ಹಲವು ಕಿರಿಯ ತಾರೆಯರಿದ್ದಾರೆ. ಶೃತಿ ಹರಿಹರನ್ ಗೆ ನ್ಯಾಯ ಸಿಗಬೇಕು ಅಂತ ಬೆಂಬಲವನ್ನ ಸೂಚಿಸಿದ್ದಾರೆ…

ಇನ್ನೂ ಅರ್ಜುನ್ ಸರ್ಜಾ ಅವರ ಬೆಂಬಲಕ್ಕೆ ಹಿರಿಯತಾರೆಯರು ಸೇರಿದಂತೆ ಕಿರಿಯ ಸೆಲೆಬ್ರಿಟಿಗಳು ನಿಂತಿದ್ದಾರೆ.. ಅರ್ಜುನ್ ಸರ್ಜಾ ಅವರ ಮಾವ ರಾಜೇಶ್, ಧ್ರುವಾ ಸರ್ಜಾ, ಫಿಲ್ಮ್ ಚೇಂಬರ್ ನ ಅಧ್ಯಕ್ಷರಾದ ಎಸ್.ಎ.ಚೆನ್ನೇಗೌಡ, ಜಗ್ಗೇಶ್, ಬಿ ಸರೋಜದೇವಿ, ಸುಧಾರಾಣಿ, ಖುಷ್ಬು, ತಾರಾ, ನಿರ್ಮಾಪಕರಾದ ಮುನಿರತ್ನ, ಬಾ.ಮ.ಹರೀಶ್ ಅರ್ಜುನ್ ಸರ್ಜಾ ಅವರ ಬೆನ್ನಿಗೆ ನಿಂತಿದ್ದಾರೆ…

Reach Count: 
1