Public News

News Subject: 
ಸಂಬಂಧ: ಹೆಂಡತಿ ಹೇಗಿದ್ದರೆ ಅವನಿಗಿಷ್ಟ?
Upload Image: 
Category: 
Lifestyle
Body: 

ದಾಂಪತ್ಯವೆನ್ನುವುದು ಸತಿ ಪತಿಗಳಿಬ್ಬರ ಬಂಧ. ಇದನ್ನು ಪರಸ್ಪರ ಗಟ್ಟಿಯಾಗಿಸುವುದೇ ಹೊಂದಾಣಿಕೆ. ಆದರೆ ಇತ್ತೀಚೆಗೆ ದಾಂಪತ್ಯದಲ್ಲಿ ಇದರ ಕೊರತೆ ಕಂಡು ಬರುತ್ತಿದ್ದು, ಇದರ ಪರಿಣಾಮ ವಿಚ್ಛೇದನ, ವಿವಾಹೇತರ ಸಂಬಂಧದಂತಹ ಸಮಸ್ಯೆಗಳು ವ್ಯಾಪಕವಾಗಿ ಕಂಡು ಬರುತ್ತಿವೆ. ದಾಂಪತ್ಯ ಸಾರ್ಥಕವಾಗಬೇಕಾದರೆ ಸತಿ-ಪತಿಗಳಿಬ್ಬರ ನಡುವೆ ಹೊಂದಾಣಿಕೆಯಿರಬೇಕು. ಆದರೆ ಅದು ಅನಿವಾರ‍್ಯವಾಗಬಾರದು. ಅಗತ್ಯವಾಗಿರಬೇಕಷ್ಟೆ. ಆರೋಗ್ಯಕರ ಸಂಬಂಧವನ್ನು ನಿರ್ವಹಿಸಲು ತಮ್ಮ ಪತ್ನಿಯಲ್ಲಿ ಯಾವ ಗುಣಗಳು ಇರಬೇಕು ಎಂಬುದನ್ನು ಪುರುಷರು ಬಯಸುತ್ತಾರೆ ಗೊತ್ತಾ?

1 ತಪ್ಪು ಮನ್ನಿಸುವ ಗುಣ
ದಂಪತಿ ನಡುವೆ ಚಿಕ್ಕಪುಟ್ಟ ತಪ್ಪುಗಳು ಸಹಜ. ಆ ತಪ್ಪುಗಳನ್ನು ಮನ್ನಿಸುವುದರಲ್ಲಿ ದೊಡ್ಡತನವಿರುವುದು. ಎಲ್ಲಿ ಕ್ಷ ಮೆಯಿರುತ್ತದೆಯೋ ಅಲ್ಲಿ ಅನ್ಯೋನ್ಯತೆಯಿರುತ್ತದೆ. ಪತಿಯ ತಪ್ಪುಗಳನ್ನೇ ಹಿಡಿದು ಯಾವುದೋ ಸಣ್ಣ ದೌರ್ಬಲ್ಯವನ್ನು, ಚಿಕ್ಕ ಸೋಮಾರಿತನವನ್ನೇ ದೊಡ್ಡದಾಗಿಸಿಕೊಂಡು, ಕಡ್ಡಿಯನ್ನು ಗುಡ್ಡ ಮಾಡುವುದು ಎನ್ನತ್ತಾರಲ್ಲ ಹಾಗೆ ಮಾಡಿಕೊಂಡು ಸುರು ಬುರು ಎನ್ನುತ್ತಾ, ಮುಖ ಸಿಂಡರಿಸಿಕೊಂಡು, ಬೇಕೋ ಬೇಡವೋ ಎನ್ನುವಂತೆ ವರ್ತಿಸಿದರೆ ಸಂಸಾರದಲ್ಲಿ ಸಂತಸ ಇರುವುದಿಲ್ಲ. ಒಂದು ವೇಳೆ ಗಂಡ-ಹೆಂಡತಿ ನಡುವೆ ಜಗಳಗಳಾದರೂ ಅವು ಉಂಡು ಮಲಗುವವರೆಗೆ ಮಾತ್ರ ಇರಬೇಕು. ಉಂಡು ಮಲಗಿ, ಬೆಳಗ್ಗೆ ಎದ್ದ ಮೇಲೆ ಎಲ್ಲವೂ ತಿಳಿಯಾಗಬೇಕು. ಆದ್ದರಿಂದ ಸಣ್ಣಪುಟ್ಟ ತಪ್ಪುಗಳನ್ನು ಮನ್ನಿಸಿ ಪುನಃ ಪ್ರೀತಿಯಿಂದ ಒಪ್ಪಿಕೊಳ್ಳುವ ಪತ್ನಿ ಅವನಿಗಿಷ್ಟ.

2 ಊಟದ ಆಟ
ಗಡಿಬಿಡಿಯ ಬದುಕಿನಲ್ಲಿ ದಂಪತಿ ಪರಸ್ಪರ ಸಮಯ ಕಳೆಯುವುದೇ ಡೈನಿಂಗ್‌ ಟೇಬಲ್‌ ಬಳಿ. ಆದ್ದರಿಂದ ಈ ಸಮಯದಲ್ಲಿ ಪರಸ್ಪರ ಜಗಳವಾಡದೆ ಪ್ರೀತಿಯ ಮಾತುಕತೆ ನಡೆಸಬೇಕು. ಹೆಂಡತಿಯಾದವಳೂ ಗಂಡನ ಮನದಿಂಗಿತವನ್ನು ಅರಿತು, ಅವನಿಷ್ಟದ ಅಡುಗೆಯನ್ನು ರುಚಿಕಟ್ಟಾಗಿ ಮಾಡಿ, ನಗುಮುಖದಿಂದ ಬಡಿಸಿದರೆ, ಹೆಂಡತಿಯ ಬಗ್ಗೆ ಮೆಚ್ಚುಗೆ ಹುಟ್ಟುತ್ತದೆ.

3 ಕಷ್ಟದಲ್ಲಿ ಹೆಗಲು ಕೊಡಬೇಕು
ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಪರಸ್ಪರ ಹೆಗಲಿಗೆ ಹೆಗಲು ಕೊಟ್ಟು, ಒಂದೇ ಮಾರ್ಗದಲ್ಲಿ ಮುನ್ನಡೆದರೆ ಸಂಸಾರದ ತೇರು ಅಡೆತಡೆಯಿಲ್ಲದೆ ಸಾಂಗವಾಗಿ ಸಾಗುತ್ತದೆ. ತೀರ ಸೋತು ಹೋದಾಗ, ಆತ್ಮ ವಿಶ್ವಾಸ ಕಳೆದುಕೊಂಡಾಗ ಧೈರ‍್ಯ ನೀಡುವ, ಎದುರಾಗುವ ಕಷ್ಟಗಳಿಗೆ ಹೆಗಲು ಕೊಡುವ ಪತ್ನಿ ಬೇಕು.

4 ಪರಸ್ಪರ ಸಮಾಲೋಚನೆ
ಯಾವುದೇ ಸಂಗತಿ ಇರಲಿ ದಂಪತಿ ನಡುವೆ ಪರಸ್ಪರ ಸಮಾಲೋಚನೆ ನಡೆಯಬೇಕು. ಇಲ್ಲವಾದರೆ ತಪ್ಪು ಕಲ್ಪನೆಗಳು ಹುಟ್ಟುವ ಸಾಧ್ಯತೆ ಇರುತ್ತದೆ. ಆಲೋಚನೆಗಳೂ ಬೇರೆ ಬೇರೆಯಾಗಿರಬಹುದು. ಇಬ್ಬರ ಆಲೋಚನೆಗಳೂ ಅವೇನೇ ಆಗಿರಲಿ, ಪರಸ್ಪರ ಸಮಾಲೊಚಿಸಿಕೊಂಡು, ತಮ್ಮ ತಮ್ಮ ಆಲೋಚನೆಗಳನ್ನು, ಇಷ್ಟಾನಿಷ್ಟಗಳನ್ನು ಸ್ವಲ್ಪವಾದರೂ ಬದಲಾಯಿಸಿಕೊಳ್ಳಬೇಕು.

Reach Count: 
11