Public News

News Subject: 
ನೂರಾರು ವಿಮಾನ, ಹಡಗು ನುಂಗಿದ ಬರ್ಮುಡಾ ಟ್ರಯಾಂಗಲ್ ರಹಸ್ಯ ಬಯಲು
Upload Image: 
Body: 

ಅಟ್ಲಾಂಟಿಕ್ ಸಮುದ್ರದಲ್ಲಿರುವ ‘ಭಯಾನಕ’ ಬರ್ಮುಡಾ ಟ್ರಯಾಂಗಲ್‌ನ ಪ್ರದೇಶದಲ್ಲಿ ನಡೆಯುತ್ತಿರುವ ದುರಂತಗಳ ರಹಸ್ಯ ಈಗ ಬಯಲಾದಂತೆ ಕಾಣುತ್ತಿದೆ. ಬರ್ಮುಡಾ ಟ್ರಯಾಂಗಲ್ ಭಾಗದಲ್ಲಿ ಹಡಗುಗಳು ಸಾಗುವಾಗ ಅಥವಾ ಅದರ ಮೇಲ್ಭಾಗದಲ್ಲಿ ವಿಮಾನಗಳು ಸಾಗುವಾಗ ಅವಘಡಗಳು ಸಂಭವಿಸಿ 100 ವರ್ಷದಲ್ಲಿ 1000 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

ಹಾಗಿದ್ದರೆ ಈ ಭಾಗದಲ್ಲಿ ಸಾಗುವಾಗ ಸಂಭವಿಸುವ ದುರಂತಗಳಿಗೆ ಕಾರಣವೇನು ಎಂಬುದನ್ನು ಭೇದಿಸಿದ್ದಾಗಿ ‘ಚಾನೆಲ್ 5’ನ ಕ್ಷ್ಯಚಿತ್ರವೊಂದು ಈಗ ಹೇಳಿಕೊಂಡಿದೆ. ‘ಚಾನೆಲ್ 5’ ಟೀವಿ ವಾಹಿನಿಯು ‘ಬರ್ಮುಡಾ ಟ್ರಯಾಂಗಲ್ ಎನಿಗ್ಮಾ’ ಎಂಬ ಸಾಕ್ಷ್ಯಚಿತ್ರದ ಅನ್ವಯ ‘ಸುಮಾರು 100 ಅಡಿ ಎತ್ತರದ ರಕ್ಕಸ ಅಲೆಗಳು ಬರ್ಮುಡಾ ಟ್ರಯಾಂಗಲ್ ಭಾಗದಲ್ಲಿ ಏಳುತ್ತಿದ್ದು, ಅವು ಹಡಗುಗಳನ್ನು ಆಪೋಶನ ತೆಗೆದುಕೊಂಡು ಇನ್ನಿಲ್ಲದಂತೆ ನಾಪತ್ತೆ ಮಾಡುತ್ತವೆ.

ಇದೇ ವೇಳೆ ಇದ್ದಕ್ಕಿದ್ದಂತೆ ಈ ಭಾಗದಲ್ಲಿ ಏಳುವ ಚಂಡಮಾರುತ ಹಾಗೂ ಅನಿಲ ಪ್ರಭಾವವು ಇಷ್ಟೊಂದು ರಕ್ಕಸ ಅಲೆಗಳ ಸೃಷ್ಟಿಗೆ ಕಾರಣವಾಗುತ್ತಿದೆ. ಇದೇ ಚಂಡಮಾರುತ ಹಾಗೂ ಅಲೆಗಳ ಸೆಳೆತಗಳು ವಿಮಾನಗಳ ಪತನಕ್ಕೂ ನಾಂದಿ ಹಾಡಿರಬಹುದು’ ಎಂದು ಸಾಕ್ಷ್ಯಚಿತ್ರದಲ್ಲಿ ಸೌತ್ ಹ್ಯಾಂಪ್ಟನ್ ಮೂಲದ ತಜ್ಞರು ವಿಶ್ಲೇಷಿಸಿದ್ದಾರೆ. ಸಾಮಾನ್ಯ ಅಲೆಗಳಿಗಿಳಿಗಿಂತ ಈ ರಕ್ಕಸ ಅಲೆಗಳು 2 ಪಟ್ಟು ಹೆಚ್ಚು ಎತ್ತರವಿರುತ್ತವೆ. ಇವನ್ನು ಅಂದಾಜಿಸಲು ಸಾಧ್ಯವೇ ಇಲ್ಲ. ವಿವಿಧ ದಿಕ್ಕುಗಳಿಂದ ಅನಿರೀಕ್ಷಿತವಾಗಿ ಈ ಅಲೆಗಳು ಏಳುತ್ತವೆ ಎಂದು ತಜ್ಞರ ವರದಿ ಹೇಳುತ್ತದೆ.

ಅಧ್ಯಯನ ಹೇಗೆ?: ತಜ್ಞರು ‘ಒಳಾಂಗಣ ಸಿಮ್ಯುಲೇಟರ್’ಗಳನ್ನು ಬಳಸಿಕೊಂಡು ನೀರಿನಲ್ಲಿ ರಕ್ಕಸಾಕಾರದ ಅಲೆಗಳನ್ನು ಎಬ್ಬಿಸಿ ಬರ್ಮುಡಾ ಟ್ರಯಾಂಗಲ್‌ನಲ್ಲಿನ ವಾತಾವರಣ ಅಧ್ಯಯನ ಮಾಡಿದ್ದಾರೆ. 1918 ರಲ್ಲಿ 300 ಜನರನ್ನು ಬಲಿಪಡೆದ ‘ಯುಎಸ್‌ಎಸ್ ಚೈಕ್ಲಾಪ್ಸ್’ ಎಂಬ ಹಡಗನ್ನು ಮುಳುಗಿಸಿ ವಿಶ್ಲೇಷಿಸಿದ್ದಾರೆ. ಅದರ ಫಲಿತಾಂಶದ ಅನ್ವಯ ಈ ತೀರ್ಮಾನಕ್ಕೆ ಬರಲಾಗಿದೆ.

Reach Count: 
1