Public News

News Subject: 
ಉಕ ಹೇಳಿಕೆ: ಸಂಪುಟದಲ್ಲಿ ಸಿಎಂಗೆ ತರಾಟೆ
Upload Image: 
Body: 

ಸಮ್ಮಿಶ್ರ ಸರಕಾರದ ವರ್ಚಸ್ಸಿಗೆ ಭಂಗ ತಂದ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗಳು ಹಾಗೂ ಅಧಿಕಾರಿಗಳ ವರ್ಗಾವಣೆಯಲ್ಲಿನ ಅವ್ಯವಸ್ಥೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಸಿಎಂ ಉಪಸ್ಥಿತಿಯಲ್ಲೇ ಕಾಂಗ್ರೆಸ್‌ನ ಕೆಲವು ಸಚಿವರು ಈ ವಿಚಾರಗಳನ್ನು ಪ್ರಸ್ತಾಪಿಸಿ, ಅತೃಪ್ತಿ ಹೊರಹಾಕಿದ್ದಾರೆ. ವಿಶೇಷವಾಗಿ ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟಕ್ಕೆ ಪ್ರೇರಣೆಯಾದ ಸಿಎಂ ಮಾತು ಹಾಗೂ ಒಂದು ತಪ್ಪಿನ ಬೆನ್ನಿಗೇ, ಬೆಳಗಾವಿಯನ್ನು 2ನೇ ರಾಜಧಾನಿಯಾಗಿ ಮಾಡುವ ಮತ್ತೊಂದು ತಪ್ಪು ನಿಮ್ಮಿಂದಲೇ ನಡೆದಿದೆ. ಕೆಲವೊಂದು ವಿಚಾರಗಳಲ್ಲಿ ನಿಮ್ಮ ಮಾತಿನಿಂದಲೇ ಅನಗತ್ಯ ವಿವಾದಗಳು ಸೃಷ್ಟಿಯಾಗುತ್ತಿವೆ ಎಂದು ಕೆಲವರು ನೇರವಾಗಿ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ.

''ನಾವು ಸೂಚಿಸಿದ ಅಧಿಕಾರಿಗಳ ವರ್ಗಾವಣೆ ಆದೇಶಗಳು ಇನ್ನೂ ಹೊರಬಿದ್ದಿಲ್ಲ. ಇದೀಗ, ಪೌರಸಂಸ್ಥೆಗಳ ಚುನಾವಣೆ ಘೋಷಣೆಯಾಗಿದೆ. ಏಕೆ ವಿಳಂಬ ಮಾಡಿದಿರಿ,'' ಎಂದು ಸಚಿವರೊಬ್ಬರು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ. ''ಬಿಡಿಬಿಡಿಯಾಗಿ ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಬೇಡ. ಒಟ್ಟಾಗಿ ಮಾಡೋಣ ಎಂದು ಕಾಯಲಾಗಿತ್ತು. ಅಗತ್ಯವಾದರೆ, ಚುನಾವಣಾ ಆಯೋಗದ ಅನುಮತಿ ಪಡೆದು ಈ ವರ್ಗಾವಣೆ ಪ್ರಕ್ರಿಯೆ ಮುಗಿಸುವುದಾಗಿ'' ಸಹೋದ್ಯೋಗಿಗಳಿಗೆ ಸಿಎಂ ಭರವಸೆ ನೀಡಿದರು ಎನ್ನಲಾಗಿದೆ.

Reach Count: 
1