Public News

News Subject: 
ಅನೈತಿಕ ಸಂಬಂಧ ಇಟ್ಟುಕೊಂಡರೆ ಇನ್ನು ಮುಂದೆ ಪತ್ನಿಗೂ ಕಠಿಣ ಶಿಕ್ಷೆ
Upload Image: 
Body: 

ವಿವಾಹೇತರ ಲೈಂಗಿಕ ಸಂಬಂಧ ಕುರಿತು ಶಿಕ್ಷೆಗೆ ಗುರಿಪಡಿಸುವ ಐಪಿಸಿ ಸೆಕ್ಷನ್ ವಿವಾಹಿತ ಪುರುಷ ಮತ್ತು ಮಹಿಳೆಯರನ್ನು ಪ್ರತ್ಯೇಕವಾಗಿ ನೋಡುವುದರಿಂದ ಅದು ಸಂವಿಧಾನದ ಸಮಾನತೆಯ ಹಕ್ಕನ್ನು ಉಲಂಘಿಸಿದಂತೆ ಎಂದು ಸುಪ್ರೀಂಕೋರ್ಟ್​ ಗುರುವಾರ ಅಭಿಪ್ರಾಯಪಟ್ಟಿದೆ.

ಮೂಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಸೇರಿ ಐವರು ನ್ಯಾಯಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ, ಐಪಿಸಿ ಸೆಕ್ಷನ್​ 497ರ ಸಿಂಧುತ್ವ ಪ್ರಶ್ನಿಸಿ ಜೋಸೆಫ್​ ಶೈನ್​ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ ಈ ರೀತಿ ಹೇಳಿದೆ.

ಒಂದು ವೇಳೆ ಅನೈತಿಕ ಸಂಬಂಧಗಳಿಗೆ ಕೇವಲ ಗಂಡಸರನ್ನೇ ಹೊಣೆ ಮಾಡಿದರೆ ಸಂವಿಧಾನದ 14ನೇ ವಿಧಿಯಲ್ಲಿ(ಕಾನೂನಿನ ಮುಂದೆ ಎಲ್ಲರೂ ಸಮಾನರು) ನೀಡುವ ಲಿಂಗ ಸಮಾನತೆಗೆ ಅಡ್ಡಿಯಾಗುವಂತೆ ತೋರುತ್ತದೆ ಎಂದು ನ್ಯಾಯಾಧೀಶರ ಪೀಠ ವಿಚಾರಣೆ ವೇಳೆ ತಿಳಿಸಿದೆ.

ಈ ಕುರಿತು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಕಾಲೀಸ್ವರಮ್‌ ರಾಜ್‌, “ಸಂವಿಧಾನದ 15ನೇ ವಿಧಿಯು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿಶೇಷ ಕಾನೂನುಗಳನ್ನು ತರಲು ಅವಕಾಶ ನೀಡಿದ್ದ ಕಾರಣ ಭಾರತೀಯ ದಂಡ ಸಂಹಿತೆಯ 497ನೇ ವಿಧಿಯನ್ನು ಸಮರ್ಥನೆ ಮಾಡಬಹುದಾಗಿತ್ತು. ಆದರೆ, ಬದಲಾದ ಕಾಲಮಾನಕ್ಕೆ ತಕ್ಕಂತೆ ಯಾವುದೇ ವಿವಾಹಿತ ಮಹಿಳೆಯೊಂದಿಗೆ, ಆಕೆಯ ಪತಿಯ ಅನುಮತಿ ಇಲ್ಲದೇ ಯಾವುದೇ ಪುರುಷನು ಸಂಬಂಧ ಇಟ್ಟುಕೊಂಡಲ್ಲಿ, ಪುರುಷನಿಗೆ ಮಾತ್ರ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸುವುದನ್ನು ಒಪ್ಪಲಾಗದು. ಈ ಅಪರಾಧದಲ್ಲಿ ಮಹಿಳೆಯ ಪಾತ್ರವೂ ಅಷ್ಟೇ ಇರುತ್ತದೆ. ಆದ್ದರಿಂದ ಆಕೆಯನ್ನು ಹಾಗೇ ಬಿಡಲು ಆಗದು” ಎಂದು ಹೇಳಿದ್ದಾರೆ.

ಸಂವಿಧಾನದ 14ನೇ ವಿಧಿಯ ನೆಲೆಯಲ್ಲಿ ಐಪಿಸಿಯ ಸೆಕ್ಷನ್ 497 ಕ್ರಿಮಿನಲ್‌ ಅಪರಾಧವಾಗಿ ಉಳಿಯಲು ಸಾಧ್ಯವೇ ಎಂಬುದನ್ನು ಮತ್ತಷ್ಟು ಪರಿಶೀಲಿಸುವುದಾಗಿ ಪೀಠ ಹೇಳಿದೆ.

Reach Count: 
1