Public News

News Subject: 
ರಾಹುಲ್ ಗಾಂಧಿ ಸಾರ್ವಜನಿಕವಾಗಿ ಯುವತಿಯ ಅಶ್ಲೀಲ ಚಿತ್ರ ವೀಕ್ಷಿಸಿದ್ದು ನಿಜವೇ?
Upload Image: 
Body: 

'ಛಾಯಾಚಿತ್ರ ಎಂದಿಗೂ ಸುಳ್ಳು ಹೇಳುವುದಿಲ್ಲ'.. ನೋಡಿ ರಾಹುಲ್ ಗಾಂಧಿಯವರು ಏನು ಮಾಡುತ್ತಿದ್ದಾರೆ ಎಂಬ ಸಂದೇಶದೊಂದಿಗೆ, ಮೊಬೈಲ್ ನಲ್ಲಿ ಬಿಕಿನಿ ಧರಿಸಿದ ಯುವತಿಯ ಫೋಟೋವನ್ನು ನೋಡುತ್ತಿರುವ ರಾಹುಲ್ ಗಾಂಧಿಯವರ ಫೋಟೋವೊಂದು ನಾಲ್ಕು ಲಕ್ಷ ಮಂದಿ ಇರುವ 'ಯೋಗಿ ಸರ್ಕಾರ್' ಫೇಸ್ ಬುಕ್ ಪೇಜ್ ನಲ್ಲಿ ಜುಲೈ 30ರಂದು ಪೋಸ್ಟ್ ಮಾಡಲಾಗಿದ್ದು, 'ಮೋದಿ ಮಿಷನ್ 2019' ಫೇಸ್ ಬುಕ್ ಪೇಜ್ ಸೇರಿದಂತೆ, ಏಳುಸಾವಿರ ಮಂದಿ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ , ಟ್ವಿಟರ್ ನಲ್ಲೂ ಈ ಫೋಟೋ ವೈರಲ್ ಆಗುತ್ತಿದೆ.

ತಿರುಚಿದ ಛಾಯಾಚಿತ್ರ

ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗುತ್ತಿರುವ, ರಾಹುಲ್ ಗಾಂಧಿಯವರ ಈ ಫೋಟೋದ ಹಿಂದಿನ ಸತ್ಯವನ್ನು ಗೂಗಲ್ ಸಹಾಯದಿಂದ ಪತ್ತೆಹಚ್ಚಿರುವ ಆಲ್ಟ್ ನ್ಯೂಸ್ ತಂಡ, ಇದೊಂದು ತಿರುಚಿದ ಹಾಗೂ ರಾಹುಲ್ ಗಾಂಧಿಯವರ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಲು ಮಾಡಿದ ಪ್ರಯತ್ನ ಎಂಬುದನ್ನು ಸಾಕ್ಷ್ಯ ಸಮೇತ ಬಹಿರಂಗಪಡಿಸಿದೆ.

2016ರ ನವೆಂಬರ್ 8ರಂದು ಕೇಂದ್ರ ಸರ್ಕಾರ, 500 ಹಾಗೂ ಸಾವಿರ ರೂಪಾಯಿ ನೋಟುಗಳನ್ನು ನಿಷೇಧಿಸಿದ ಸಂದರ್ಭದಲ್ಲಿ, ತಮ್ಮಲ್ಲಿರುವ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು, ರಾಹುಲ್ ಗಾಂಧಿ ದೆಹಲಿಯ ಬ್ಯಾಂಕ್ ಗೆ ಆಗಮಿಸಿ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ನೋಟು ವಿನಿಮಯ ಮಾಡಿಕೊಂಡಿದ್ದರು. ಕೈಯಲ್ಲಿ ಹಣ ಹಿಡಿದುಕೊಂಡು, ಪರಿಶೀಲಿಸುತ್ತಿದ್ದ ರಾಹುಲ್ ಗಾಂಧಿಯವರ ಈ ಫೋಟೋವನ್ನು ಸುದ್ದಿ ಮಾಧ್ಯಮಗಳು ಕೂಡ ಪ್ರಕಟಿಸಿದ್ದವು. ಗೂಗಲ್ ನಲ್ಲೂ ಈ ಫೋಟೋ ಲಭ್ಯವಿದೆ. ಆದರೆ ಕಿಡಿಗೇಡಿಗಳು, ಈ ಛಾಯಚಿತ್ರವನ್ನು ಫೋಟೋಶಾಪ್ ಮೂಲಕ ಬದಲಾಯಿಸಿ ಸುಳ್ಳುಸುದ್ದಿಯನ್ನು ಹರಡುವ ಪ್ರಯತ್ನ ಮಾಡಿದ್ದಾರೆ.

Reach Count: 
1