Public News

News Subject: 
ಸೆಕ್ಸ್’ನಲ್ಲಿ ನೀನು ವೀಕ್ ಎಂದ ಪತ್ನಿಯ ಪೋಷಕರಿಗೆ ಶಾಕ್ ಕೊಟ್ಟ ಪತಿ..!
Upload Image: 
Body: 

ಲೈಂಗಿಕ ಕ್ರಿಯೆ ನಡೆಸಲು ಅಶಕ್ತ ಎಂದು ಪತ್ನಿಯ ಹೇಳಿಕೆಯಿಂದ ಆಕ್ರೋಶಗೊಂಡ ಪತಿರಾಯನೊಬ್ಬ ಬೇರೊಬ್ಬ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ, ಅದನ್ನು ಚಿತ್ರೀಕರಿಸಿ ಈ ದೃಶ್ಯಾವಳಿಯನ್ನು ಪತ್ನಿ ಹಾಗೂ ಆಕೆಯ ಪೋಷಕರಿಗೆ ಕಳುಹಿಸಿದ ವಿಲಕ್ಷಣ ಘಟನೆಯೊಂದು ಹೈದರಾಬಾದ್‍ನಲ್ಲಿ ನಡೆದಿದೆ.

ಹೈದರಾಬಾದ್‍ನ ವಿಭವಾಸು (32) ಈ ಕೃತ್ಯವೆಸಗಿದಾತ. ವಿಭವಾಸು ಅವರಿಗೆ ಅನುಷಾ(ಹೆಸರು ಬದಲಾಯಿಸಲಾಗಿದೆ) ಎಂಬವರನ್ನು 2 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ದಂಪತಿ ಕೇವಲ 15 ದಿನಗಳ ಕಾಲ ಒಟ್ಟಾಗಿ ಜೀವನ ನಡೆಸಿದ್ದರು. ದಂಪತಿ ನಡುವೆ ಸಾಮರಸ್ಯ ಬಾರದಿದ್ದಾಗ ಪತ್ನಿ ವಿಚ್ಚೇದನಕ್ಕೆ ಕೋರ್ಟ್ ಮೊರೆ ಹೋಗಿದ್ದಾರೆ.

ಈ ಸಂಬಂಧದ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ, ಪತಿ ಲೈಂಗಿಕ ಕ್ರಿಯೆ ನಡೆಸಲು ಅಶಕ್ತ ಎಂದು ಆರೋಪಿಸಿದ್ದಳು. ಇದರಿಂದ ಆಕ್ರೋಶಗೊಂಡ ಆತ ಬೇರೊಬ್ಬಳು ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ಅಶ್ಲೀಲ ಚಿತ್ರವನ್ನು ಪೋಷಕರಿಗೆ ಕಳುಹಿಸಿ, ನಿಮ್ಮ ಮಗಳು ಹೇಳುತ್ತಿರುವುದು ತಪ್ಪು ಎಂದು ಸಾಬೀತುಪಡಿಸಲು ಮುಂದಾಗಿದ್ದಾನೆ. ಈ ಬಗ್ಗೆ ಅನುಷಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಮಧ್ಯೆ ನ್ಯಾಯಾಲಯ ಅವರ ಅರ್ಜಿಯನ್ನು ಮನ್ನಿಸಿ ವಿಚ್ಛೇದನ ನೀಡಿದೆ.

Reach Count: 
1