Public News

News Subject: 
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್‌
Upload Image: 
Body: 

ರಾಷ್ಟ್ರೀಯ ನಾಗರಿಕ ನೋಂದಣಿ ಪಟ್ಟಿ ವಿರುದ್ಧ ಸಿವಿಲ್‌ ವಾರ್‌ ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದಿಬ್ರುಗರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ‘ಮಮತಾ ಅವರು ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಉಲ್ಲೇಖಿಸಲಾಗಿದ್ದು, ಘಟನೆಯ ಪುರಾವೆಯಾಗಿ ದೂರುದಾರ ಮಮತಾ ಬ್ಯಾನರ್ಜಿಯವರ ವಿಡಿಯೋವನ್ನು ನೀಡಿದ್ದಾರೆ.

ನಿನ್ನೆಯಷ್ಟೇ ಅಸ್ಸಾಂ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್​ಆರ್​ಸಿ) ಕರಡು ಪಟ್ಟಿಯು ಜನರನ್ನು ಒಡೆಯುವ ತಂತ್ರವಾಗಿದೆ. ಅಲ್ಲದೆ, ದೇಶದಲ್ಲಿ ರಕ್ತಪಾತ ಮತ್ತು ನಾಗರಿಕ ಯುದ್ಧಕ್ಕೆ ನೇರ ಕಾರಣವಾಗಲಿದೆ ಎಂದು ಮಮತಾ ಬ್ಯಾನರ್ಜಿ ದೂರಿದ್ದರು.

ಇದಲ್ಲದೆ, ಮೋದಿ ಸರ್ಕಾರವನ್ನು ದೂರಿದ್ದ ಅವರು ರಾಜಕೀಯ ಲಾಭಕ್ಕಾಗಿ ಅಸ್ಸಾಂನಲ್ಲಿ ಲಕ್ಷಾಂತರ ಜನರನ್ನು ಅತಂತ್ರ ಸ್ಥಿತಿಗೆ ತಳ್ಳಲಾಗಿದೆ ಎಂದು ಆರೋಪಿಸಿದ್ದರು.

ಆಡ್ವಾಣಿ ಪಾದವನ್ನು ಸ್ಪರ್ಶಿಸಿದ ಮಮತಾ

ಸಿವಿಲ್‌ ವಾರ್‌ ಹೇಳಿಕೆ ಭಾರಿ ಚರ್ಚೆಗೆ ಕಾರಣವಾದ ನಂತರ, ಬುಧವಾರ ಮಮತಾ ಬ್ಯಾನರ್ಜಿ ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿ ಅವರನ್ನು ಸಂಸತ್ತಿನ ಆವರಣದಲ್ಲಿಯೇ ಭೇಟಿ ಮಾಡಿದರು. ನಂತರ ಅವರ ಪಾದವನ್ನು ಮುಟ್ಟಿ ಆಶೀರ್ವಾದ ಪಡೆದರು. 15 ನಿಮಿಷಗಳ ಕಾಲ ನಡೆದ ಸಭೆ ಬಳಿಕೆ ಇದೊಂದು ಸೌಜನ್ಯದ ಭೇಟಿಯಾಗಿತ್ತು. ನಾನು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದಾಗಲೆಲ್ಲ ಆಡ್ವಾನಿ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದರು.

Reach Count: 
1