Public News

News Subject: 
ಕೈಯಲ್ಲೊಂದು ಸುಂದರ ಗೋಲ್ಡನ್ ಬ್ರಿಡ್ಜ್ –ವಿಡಿಯೋ ನೋಡಿ
Upload Image: 
Body: 

ವಿಯೆಟ್ನಾಮ್ ನ ಅರಣ್ಯ ಬೆಟ್ಟಗಳಲ್ಲಿ ಅನಾವರಣಗೊಂಡಿರುವ ದೈತ್ಯ ಕೈಗಳ ಮೇಲಿರುವ ಗೋಲ್ಡನ್ ಬ್ರಿಡ್ಜ್ ಪ್ರವಾಸಿಗರನ್ನು ಈಗ ತನ್ನ ಸೆಳೆಯುತ್ತಿದೆ.

ಈ ಗೋಲ್ಡನ್ ಸೇತುವೆ ಡ್ಯಾನಾಂಗ್ ಬಳಿಯ ಬಾ ನಾ ಬೆಟ್ಟದಲ್ಲಿ ನಿರ್ಮಿಸಲಾಗಿದ್ದು, ಕಳೆದ ಜೂನ್ ತಿಂಗಳಲ್ಲಿ ಈ ಸೇತುವೆಯನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ. ಸದ್ಯಕ್ಕೆ ಗೋಲ್ಡನ್ ಸೇತುವೆ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜೊತೆಗೆ ಅತ್ಯಂತ ಸುಂದರವಾಗಿ ಕಾಣುವ ಈ ಸೇತುವೆ ಫೋಟೋಗಳನ್ನು ಅನೇಕ ಮಂದಿ ಶೇರ್ ಮಾಡಿದ್ದಾರೆ.

ಗೋಲ್ಡನ್ ಸೇತುವೆ 150 ಮೀಟರ್ (490 ಅಡಿ) ಎತ್ತರದಲ್ಲಿದ್ದು, ಪರ್ವತಗಳ ಎತ್ತರದ ಅರಣ್ಯದ ಮೂಲಕ ಹಾವು ಹಾದು ಹೋಗುವ ರೀತಿ ಈ ಸೇತುವೆ ಕಾಣುತ್ತದೆ. ಈಗ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕೇಬಲ್ ಕಾರಿನ ಜೊತೆ ಮಧ್ಯಕಾಲಿನ ಫ್ರಾನ್ಸ್ ಗ್ರಾಮದ ಕಲ್ಪನೆಯಲ್ಲಿ ಪ್ರದೇಶನವನ್ನು ಅಭಿವೃದ್ಧಿ ಪಡಿಸಲಾಗಿದೆ.

ಇಷ್ಟೇ ಅಲ್ಲದೇ ಮೇಣದ ವಸ್ತು ಸಂಗ್ರಹಾಲಯವಿದ್ದು, ಇದರಲ್ಲಿ ಪಾಪ್ ಗಾಯಕಿ ಲೇಡಿ ಗಾಗಾ ಮತ್ತು ಅಮೆರಿಕದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ಮೈಕೆಲ್ ಜೋರ್ಡಾನ್ ಪ್ರತಿಮೆಯನ್ನು ನಿರ್ಮಿಸಲಾಗಿದೆ.

ಎಲ್ಲೂ ನಿರ್ಮಾಣವಾಗದ ವಾಸ್ತುಶಿಲ್ಪದ ಶೈಲಿಯಲ್ಲಿ ಈ ಸೇತುವೆಯು ಸುಂದರವಾಗಿ ಕಾಣುತ್ತಿದೆ. ಇಲ್ಲಿಂದ ನಾವು ಡ್ಯಾನಂಗ್ ನಗರವನ್ನು ನೋಡಬಹುದು. ಇಲ್ಲಿಂದ ನಗರವನ್ನು ನೋಡಲು ತುಂಬಾ ಸಂತೋಷವಾಗುತ್ತದೆ ಎಂದು ಪ್ರವಾಸಿಗರೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಒಟ್ಟು 1.3 ಕೋಟಿ ಪ್ರವಾಸಿಗರು ವಿಯೆಟ್ನಾಂಗೆ ಆಗಮಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಚೀನಾ ಪ್ರಜೆಗಳು ಇಲ್ಲಿಗೆ ಆಗಮಿಸಿದ್ದಾರೆ. ಆದರೆ ಥೈಲ್ಯಾಂಡ್‍ಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆಯಿದ್ದು 2017ರಲ್ಲಿ ಥೈಲ್ಯಾಂಡ್‍ಗೆ 3.5 ಕೋಟಿ ವಿದೇಶಿಗರು ಭೇಟಿ ನೀಡಿದ್ದಾರೆ.

Reach Count: 
1