Public News

News Subject: 
ಎಲ್ಲ ಪಕ್ಷದವರಿಗೂ ಇದು ಆತ್ಮವಿಮರ್ಶೆಯ ಕಾಲ!
Upload Image: 
Body: 

ಕೃಪೆ: ಜಯವೀರ ವಿಕ್ರಂ ಸಂಪತ್ ಗೌಡ

ಯೋಚಿಸಿ ಮಾತನಾಡಬೇಕು, ಯೋಚಿಸಿದ್ದನ್ನೆಲ್ಲ ಮಾತಾಡಬಾರದು. ಈ ಮಾತು ಎಲ್ಲರಿಗೂ ಅನ್ವಯ. ಅದರಲ್ಲೂ ರಾಜಕೀಯ ನಾಯಕರಾದವರು ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅಪಾರ್ಥವಾಗುತ್ತದೆ, ಅನರ್ಥವಾಗುತ್ತದೆ, ಅನಾಹುತವಾಗುತ್ತದೆ, ಆಗಬಾರದ್ದು ಆಗುತ್ತದೆ. ಮಾತಾಡಲೇಬೇಕು ಎಂಬ ಒತ್ತಡವಿದ್ದಾಗ ನೆಹರು ಮೌನಕ್ಕೆ ಶರಣಾುತ್ತಿದ್ದರಂತೆ. ಗಾಂಧಿಯವರೂ ಬೇಕಾಬಿಟ್ಟಿ ಮಾತಾಡಿದವರಲ್ಲ. ವಾಜಪೇಯಿ ಅವರಿಗೆ ವಿಪರೀತ ಕೋಪ ಬಂದಾಗ ರೂಮು ಸೇರಿಕೊಂಡು ಅರ್ಧ ದಿನ ಅಲ್ಲಿಯೇ ಉಳಿದುಬಿಡುತ್ತಿದ್ದರಂತೆ. ಕೋಪ ಶಮನವಾದಾಗ ಹೊರಬರುತ್ತಿದ್ದರು. ಆಡ್ವಾಣಿ ಅವರು ಸಹ ಸಾರ್ವಜನಿಕವಾಗಿ ಬೇಕಾಬಿಟ್ಟಿ ಮಾತಾಡಿದವರಲ್ಲ. ಸದಾ ಸಂಯಮ ಇಟ್ಟುಕೊಂಡೇ ಮಾತಾಡಿದವರು. ಆದರೆ ಜಿನ್ನಾ ಅವರ ಕುರಿತು ಅವರು ಹೇಳಿದ ಒಂದು ಮಾತು ಅವರ ರಾಜಕೀಯ ಜೀವನಕ್ಕೇ ಇತಿಶ್ರೀ ಹಾಡಿತು.

ನಾಯಕರಾದವರಿಗೆ ನಾಲಗೆ ಮೇಲೆ ಹಿಡಿತ ಇರಬೇಕು. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಅವರನ್ನು ನೋಡಿ ಕಲಿಯಬೇಕು. ಅವರು ತಮಗೆ ಅನಿಸಿದ್ದನ್ನು ಹೇಳುತ್ತಾರೆ. ನಿಮಗೆ ಬೇಕಾಗಿದ್ದನು ಹೇಳುವುದಿಲ್ಲ. ನೀವು ಉತ್ತರ ಬಯಸಿದ್ದೀರಿ ಎಂದು ಮಾತಾಡುವುದಿಲ್ಲ. ಅಂದರೆ ನಿಮಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಅಂದರೆ ಅವರಿಂದ ನೀವು ಉತ್ತರ ಬಯಸಬಾರದು. ಗೌರಿ ಲಂಕೇಶ ಹತ್ಯೆಯಾದಾಗ ಇಡೀ ದೇಶ ಪ್ರಧಾನಿಯವರು ಉತ್ತರಿಸಬೇಕು ಎಂದು ಬೊಬ್ಬೆ ಹೊಡೆಯಿತು. ಮೋದಿ ಆ ವಿಷಯದ ಬಗ್ಗೆ ಮಾತೇ ಆಡಲಿಲ್ಲ. ಅಂದಿನಿಂದ ಇಂದಿನ ತನಕ ಅವರು ಮಾತಾಡಿಲ್ಲ. ಅವರು ಮಾತನಾಡದಿರುವುದೇ ಉತ್ತರ.

ಎಲ್ಲಾ ವಿಷಯಗಳ ಬಗ್ಗೆ ಮಾತಾಡುತ್ತಾ ಹೋಗಬಾರದು. ವಿಷಯ, ವಿಚಾರ, ಯೋಚನೆಗಳ ಬಗ್ಗೆ ಮಾತಾಡಬೇಕು. ಆದರೆ ವಿವಾದಗಳ ಬಗ್ಗೆ ಮಾತಾಡಬಾರದು. ಕಾರಣ ಏನೇ ಮಾತಾಡಿದರೂ ಮತ್ತಷ್ಟು ವಿವಾದವಾಗುತ್ತದೆ. ತನ್ನ ಮಾತಿಗೆ ಸ್ಪಷ್ಟೀಕರಣ ನೀಡುವುದು ಒಳ್ಳೆಯ ಮಾತುಗಾರನ ಅಥವಾ ನಾಯಕನ ಲಕ್ಷಣವಲ್ಲ. ಮೋದಿ ಎಂದಾದರೂ ತಾನು ಹಾಗೆ ಹೇಳಿಲ್ಲ, ನನ್ನ ಮಾತನ್ನು ನೀವು ತಪ್ಪಾಗಿ ಭಾವಿಸಿದ್ದೀರಿ, ನಾನು ಹೇಳಿದ್ದು ಹೀಗೆ ಎಂದು ಹೇಳಿದ್ದನ್ನು ಕೇಳಿದ್ದೀರಾ? ಇಲ್ಲ. ಅವರು ಎಂದೂ ತಮ್ಮ ಮಾತಿಗೆ ಕಚ್ಚಿಲ್ಲ.

ದೇಶಾದ್ಯಂತ ಅಸಹನೆ ಬಗ್ಗೆ ಹುಯಿಲೆಬ್ಬಿಸಿದಾಗಲೂ ಅವರು ಮಾತಾಡಲಿಲ್ಲ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣವಿದೆ ಎಂದು ಪ್ರಗತಿಪರರು ಬೊಬ್ಬೆ ಹೊಡೆದಾಗಲೂ ಅವರು ತೋರಿದ್ದು ದಿವ್ಯ ನಿರ್ಲಕ್ಷ್ಯ. ಪ್ರಕಾಶ ರೈ ಅಥವಾ ರಾಜ್ ಅವರಂಥ ಅರೆ ಬೆಂದ ಬುದ್ಧಿಜೀವಿ ಸೋಗಿನವರು ಪ್ರಧಾನಿ ಮಾತಾಡಬೇಕು ಎಂದು ಕಿರುಚಾಡಿದರೂ ಮೋದಿ ತೋರಿದ್ದು ದಿವ್ಯ ತಿರಸ್ಕಾರ.

ಪ್ರಧಾನಿಯಾದವರು ಹಾಗೆಲ್ಲ ಮಾತಾಡುತ್ತಾ ಹೋಗಬಾರದು. ಸಾಧ್ಯವಾದಷ್ಟು ಅಧಿಕಾರದಲ್ಲಿರುವವರು ಒನ್ – ವೇ ಸಂಹವನವನ್ನು ಇಟ್ಟುಕೊಳ್ಳಬೇಕು. ನಮಗೆ ಅನಿಸಿದಾಗ ಮಾತ್ರ ಮಾತಾಡಬೇಕು. ಎಲ್ಲರೂ ನಮ್ಮಿಂದ ಉತ್ತರ ಬಯಸುವ ಮಾರ್ಗವನ್ನು ಇಟ್ಟುಕೊಳ್ಳಲೇಬಾರದು. ಆಗ ಪ್ರಕಾಶ ರೈ ನಂಥವರೂ ಉತ್ತರ ಬಯಸುತ್ತಾರೆ. ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಹೇಳುತ್ತಾರೆ. ನನಗೆ ನಿಮ್ಮನ್ನು ಪ್ರಶ್ನಿಸುವ ಹಕ್ಕಿದೆ, ಮೌನ ಮುರಿಯಲೇಬೇಕು ಎಂದು ಆಗ್ರಹಿಸುತ್ತಾರೆ. ಹೀಗೆ ಎಲ್ಲರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಇರಲು ಸಾಧ್ಯವೇ ? ಮೌನದಂಥ ಉತ್ತರ ಮತ್ತೊಂದಿಲ್ಲ.

ನರಸಿಂಹರಾಯರು ಸಹ ಯಾರಿಗೂ ಉತ್ತರ ಕೊಡುತ್ತಿರಲಿಲ್ಲ. ಎಲ್ಲದಕ್ಕೂ ಅವರದು ಮೌನವೇ ಉತ್ತರವಾಗಿತ್ತು. ಮೌನದ ಮಹತ್ವ ಗೊತ್ತಾಗಿತ್ತು. ಅವರು ಸರಕಾರವನ್ನು ನಿಭಾಯಿಸುವ ಸಂದರ್ಭದಲ್ಲಿ ಏನೇ ಮಾತಾಡಿದರೂ ಅದು ವಿವಾದ ಆಗುವ ಸಾಧ್ಯತೆ ಇತ್ತು. ಬಾಬ್ರಿ ಮಸೀದಿ ನೆಲಸಮವಾದಾಗ ಪ್ರಧಾನಿಯಾಗಿ ಅವರು ಉತ್ತರಿಸಲೇಬೇಕಿತ್ತು. ಆದರೆ ಅವರು ದಿವ್ಯ ಮೌನ ತಳೆದರು. ಇಡೀ ದೇಶ ಅವರಿಂದ ಉತ್ತರ ಬಯಸಿದರೂ ಅವರು ಬಾಯಿ ಬಿಡಲಿಲ್ಲ. ಅದೇ ಸರಿಯಾದ ನಿರ್ಧಾರವಾಗಿತ್ತು. ನರಸಿಂಹರಾಯರು ಮೌನದಿಂದಲೇ ಆಳಿದರು. ಮೌನವೇ ಅವರ್ನು ಆಳಿತು. ಆ ಸಂದರ್ಭದಲ್ಲಿ ಅದೇ ಸರಿಯಾದ, ಜಾಣ ನಿರ್ಧಾರವಾಗಿತ್ತು.

ನಮ್ಮ ಈಗ ನಡೆಯುತ್ತಿರುವ ಬಾಯಿಹರುಕತನವನ್ನು ನೋಡಿ ಈ ಮಾತುಗಳನ್ನೇ ಹೇಳಲೇಬೇಕು ಎಂದೆನಿಸುತ್ತಿದೆ. ಯಾರಿಗಾದರೂ ವಿವೇಚನೆ ಇದೆಯಾ ? ಎಲ್ಲರೂ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಪ್ರತ್ಯೇಕ ರಾಜ್ಯ ಕೂಗು ದಿನದಿಂದ ದಿನಕ್ಕೆ ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಪ್ಪಳದ ಸಭೆಯೊಂದರಲ್ಲಿ ಹೇಳಿದ್ದಾರೆನ್ನಲಾದ ಮಾತು ಇಷ್ಟೆಲ್ಲಾ ರಾದ್ಧಾಂತಗಳಿಗೆ ಕಾರಣವಾಗಿದೆ. ಅಷ್ಟಕ್ಕೂ ಕುಮಾರಸ್ವಾಮಿ ಅವರು ಆ ಮಾತುಗಳನ್ನು ಹೇಳುವ ಅಗತ್ಯವೇ ಇರಲಿಲ್ಲ. ಅವರು 37 ಶಾಸಕರನ್ನು ಹೊಂದಿದ ಮುಖ್ಯಮಂತ್ರಿಯೇ ಆಗಿರಬಹುದು. ಆದರೆ ಮುಖ್ಯಮಂತ್ರಿ. ಅವರಿಗೆ ಬಹುಮತ ಇಲ್ಲದಿರಬಹುದು. ಅವರಿಗಿಂತ ಕಾಂಗ್ರೆಸ್ ಬಲ ಹೆಚ್ಚಿರಬಹುದು. ಆದರೆ ಈಗಿನ ಪರಿಸ್ಥಿತಿ ಭಿನ್ನ. ಮುಖ್ಯಮಂತ್ರಿ ಪಟ್ಟದ ಮೇಲೆ ಕುಳಿತ ನಂತರ ಅವರು ಅದರ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು.

ಕಾರಣ ಅವರು ಯಾವುದೇ ಒಂದು ಪ್ರದೇಶಕ್ಕೆ ಮುಖ್ಯಮಂತ್ರಿ ಅಲ್ಲ. ಅವರ ಪಕ್ಷಕ್ಕೆ ಹಳೆ ಮೈಸೂರು ಪ್ರಾಂತದಲ್ಲಿ ಹೆಚ್ಚು ಸ್ಥಾನಗಳು ಬಂದಿರಬಹುದು. ಹಾಗೆಂದ ಮಾತ್ರಕ್ಕೆ ಅವರ ಗಮನವೆಲ್ಲ ಆ ಪ್ರಾಂತಕ್ಕೆ ಮಾತ್ರ ಸೀಮಿತವಾಗಬಾರದು. ಉತ್ತರ ಕರ್ನಾಟಕ ಅಥವಾ ಹೈದ್ರಾಬಾದ್ ಭಾಗದಲ್ಲಿ ಅವರ ಪಕ್ಷಕ್ಕೆ ಯಾವ ಸ್ಥಾನವೂ ಬಾರದಿರಬಹುದು. ಹಾಗೆಂದು ಅವರು ಆ ಭಾಗವನ್ನು ಕಡೆಗಣಿಸಲು ಬರುವುದಿಲ್ಲ. ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಿದಾಗಲೂ ಇದೆ ರೀತಿಯ ಗುಮಾನಿಗಳು ಬಂದಿದ್ದವು. ತಮ್ಮ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ನೀಡಿದ ಜಿಲ್ಲೆಗಳಿಗೆ ಮಾತ್ರ ಅವರು ಹೆಚ್ಚಿನ ಸವಲತ್ತು, ಅನುದಾನ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಮುಖ್ಯಮಂತ್ರಿಯಾದವರ ಈ ಧೋರಣೆ ಸಹಜವಾಗಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುವುದು ಸಹಜ.

ಕುಮಾರಸ್ವಾಮಿ ಅವರ ಜೆಡಿಎಸ್ ಹದಿನೇಳು ಜಿಲ್ಲೆಗಳನ್ನು ಖಾತೆಯನ್ನೇ ಹಾಗೆಂದು ಅವರು ನೀವು ನನ್ನ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದರೆ ನಾನು ನಿಮಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿದ್ದೆ ಎಂದು ಹೇಳಬಾರದು. ಇದು ಕೆಟ್ಟ ಸಂದೇಶವನ್ನು ನೀಡುತ್ತದೆ. ಮುಖ್ಯಮಂತ್ರಿ ಆದವರು ಎಲ್ಲರನ್ನೂ ಸಮಾನವಾಗಿ ನೋಡದೇ ತಮಗೆ ವೋಟು ನೀಡಿದವರಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ ಎಂಬ ಅಭಿಪ್ರಾಯ ಬರುವಂತಾಗುತ್ತದೆ. ಇದು ತೀರಾ ಸಂಕುಚಿತ ಮನೋಭಾವ.

ಮೊದಲಿಂದಲೂ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕದ ಜನತೆಗೆ ತಮಗೆ ಅನ್ಯಾಯ ಆಗಿದೆ ಎಂದು ಇದರಲ್ಲಿ ವಾಸ್ತವಿಕ ಸಂಗತಿಯೂ ಅಡಗಿದೆ. ನಂಜುಡಪ್ಪ ವರದಿಯಲ್ಲಿ ಪ್ರಾದೇಶಿಕ ಅಸಮತೋಲನದ ಸಮಗ್ರ ವಿವಗಳಿವೆ. ಸ್ವಾತಂತ್ರ್ಯ ಬಂದಂದಿನಿಂದ ಅಥವಾ ಕರ್ನಾಟಕ ಸರಕಾರ ಸ್ಥಾಪನೆಯಾದಂದಿನಿಂದ, ಅಧಿಕಾರಕ್ಕೆ ಬಂದ ಎಲ್ಲ ಸರಕಾರಗಳೂ ಈ ಎರಡೂ ಭಾಗಗಳನ್ನೂ ನಿರ್ಲಕ್ಷಿಸುತ್ತಲೇ ಬಂದಿವೆ. ವಿಧಾನ ಸೌಧದಲ್ಲಿರುವವರಿಗೆ ಬೆಂಗಳೂರು, ಮೈಸೂರು, ತುಮಕೂರುಗಳು ಮಾತ್ರ ಕಣ್ಣಿಗೆ ಕಾಣಿಸುತ್ತದೆ. ದೂರದ ಬೀದರ, ಕೊಪ್ಪಳ , ರಾಯಚೂರು, ಚಿಕ್ಕೋಡಿ, ಯಾದಗಿರಿ ಕಣ್ಣಿಗೆ ಕಾಣುವುದಿಲ್ಲ. ಬಹಳ ಹಿಂದೆ ಹೋಗುವುದು ಬೇಡ, ಸಿದ್ದರಾಮಯ್ಯ ಅಣವರು ಹೆಚ್ಚು ಕಡಿಮೆ ಪ್ರತಿ ವಾರ ಮೈಸೂರಿಗೆ ಹೋಗುತ್ತಿದ್ದರು ಅಥವಾ ತಿಂಗಳಲ್ಲಿ ಕನಿಷ್ಠ ಮೂರು ಸಲವಾದರೂ ಹೋಗುತ್ತಿದ್ದರು. ಆದರೆ ಅವರು ಐದು ವರ್ಷಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು ಕೇವಲ ಮೂರು ಸಲ !

ಅಧಿಕಾರದಲ್ಲಿರುವ ಎಲ್ಲ ಮುಖ್ಯಮಂತ್ರಿಗಳು ಈ ಜಿಲ್ಲೆಗೆ ಭೇಟಿ ನೀಡಿದ್ದೇ ಅಪರೂಪ. ಬೆಂಗಳೂರಿಗೆ ನೀಡಿದ ಹಣದಲ್ಲಿ ಶೇಕಡಾ ಐದರಷ್ಟನ್ನು ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಗಳಿಗೆ ಮಾಡಿದ್ದರೆ, ಈ ಪ್ರತ್ಯೇಕತೆ ಕೂಗು ಕೇಳಿ ಆದರೆ ಎಲ್ಲ ಸರಕಾರಗಳೂ ನಿರ್ಲಕ್ಷಿಸಿದವು. ದೌರ್ಭಾಗ್ಯದ ಸಂಗತಿಯೆಂದರೆ ಉತ್ತರ ಕರ್ನಾಟಕದ ಭಾಗದಿಂದ ಆಯ್ಕೆಯಾದವರೂ ತಮ್ಮ ಪ್ರದೇಶವನ್ನು ನಿರ್ಲಕ್ಷಿಸಿದರು. ಹೀಗಿರುವಾಗ ದಕ್ಷಿಣ ಕರ್ನಾಟಕದವರಿಗೆ ಉತ್ತರ ಕರ್ನಾಟಕದ ಮೇಲೆ ಮೋಹ ಬರಲು ಹೇಗೆ ಸಾಧ್ಯ ? ರಾಜ್ಯದ ಬಜೆಟ್ ನ ಸಿಂಹ ಪಾಲು ಈಗಲೂ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಪಾಲಾಗುತ್ತಿದೆ. ನಂಜುಡಪ್ಪ ಅವರು ಸರಕಾರಕ್ಕೆ ವರದಿ ಸಲ್ಲಿಸಿ ದಶಕಗಳೇ ಕಳೆದರೂ ಅದರ ಅನುಷ್ಠಾನಕ್ಕೆ ಯಾವ ಸರಕಾರವೂ ಪ್ರಾಮಾಣಿಕ ಇಚ್ಚಾಶಕ್ತಿ ಎಲ್ಲಾ ಸರಕಾರಗಳೂ ಚುನಾವಣಾ ಸಂದರ್ಭದಲ್ಲಿ ನಂಜುಡಪ್ಪ ವರದಿ ಜಾರಿ ಬಗ್ಗೆ ಮಾತಾಡುತ್ತವೆ, ಆದರೆ ಆರಿಸಿ ಬಂದ ನಂತರ ಆ ಬಗ್ಗೆ ಉದಾಸ್ಸ್ನ ಮಾಡುತ್ತವೆ. ಹಾಗೆ ನೋಡಿದರೆ ಪ್ರತ್ಯೇಕ ರಾಜ್ಯದ ಬೇಡಿಕೆ ಬಗ್ಗೆ ಮಾತನಾಡಲು ಯಾವ ಪಕ್ಷಗಳಿಗೂ ನೈತಿಕತೆಯೇ ಇಲ್ಲ. ಎಲ್ಲಾ ಪಕ್ಷಗಳೂ ಈ ವಿಷಯದಲ್ಲಿ ಮೋಸಗಾರರೇ.

ಪ್ರತ್ಯೇಕ ರಾಜ್ಯದ ಬೇಡಿಕೆ ಯಾವಾಗ ಕೇಳಿ ಬರುತ್ತದೆ ಅಂದರೆ, ನಿರ್ಲಕ್ಷಿತ ಪ್ರದೇಶಗಳ ಜನರಿಗೆ ಆಯಾ ಸರಕಾರ ತಮ್ಮ ಪರವಾಗಿಲ್ಲ ಎಂದೆನಿಸಿದಾಗ. ಸರಕಾರದ ನೀತಿ, ಕಾರ್ಯಕ್ರಮಗಳು ತಮ್ಮ ವಿರುದ್ಧವಿದೆ ಎಂದೆನಿಸಿದಾಗ, ಈ ಸರಕಾರ ತಮ್ಮ ಹಿತ ಕಾಯುವುದಿಲ್ಲ ಎಂದು ಮನವರಿಕೆಯಾದಾಗ. ಮುಖ್ಯಮಂತ್ರಿಯಾದವರ ಧೋರಣೆ ಇಲ್ಲಿ ಬಹಳ ಮುಖ್ಯವೆನಿಸುತ್ತದೆ. ನಿರ್ಲಕ್ಷಿತ ಭಾಗಗಳ ಜನರಲ್ಲಿ ಭರವಸೆ ತುಂಬಬೇಕಾದವರು ಮುಖ್ಯಮಂತ್ರಿಗಳೇ. ಅವರ ಮಾತು, ವರ್ತನೆಯಲ್ಲಿ ಏರು-ಪೇರು ಕಂಡುಬಂದರೆ ಈ ರೀತಿಯ ಕೂಗು ಕೇಳಿ ಬರುವುದು ಸಹಜ.

ಪ್ರತ್ಯೇಕ ರಾಜ್ಯದ ಕೂಗು ಇಂದು ನಿನ್ನೆಯದಲ್ಲ. ಹಲವು ದಶಕಗಳಿಂದ ಈ ಬೇಡಿಕೆ ಜೀವ ಪಡೆದು, ಆನಂತರ ಸತ್ತು ಹೋಗುತ್ತಿದೆ. ಈಗ ಈ ಬೇಡಿಕೆ ಜೀವ ಪಡೆಯಲು ಕಾರಣವೂ ಇದೇ ಆಗಿದೆ. ಮುಖ್ಯಮಂತ್ರಿಯವರ ಮಾತಿನಲ್ಲಿ ಆ ರೀತಿಯ ಭಾವನೆ ಇರಲಿಲ್ಲ ಎಂದು ವಾದಿಸಬಹುದು. ಆದರೆ ಆ ರೀತಿ ಯೋಚಿಸಲು ಅವಕಾಶ ಕಲ್ಪಿಸಿಕೊಡಲು ಅವರ ಮಾತು ಇಂಬು ನೀಡಿತು ಎಂಬುದನ್ನು ತಳ್ಳಿ ಹಾಕುವಂತಿಲ್ಲ.

ಮುಖ್ಯಮಂತ್ರಿಗಳ ಪಕ್ಷ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಪಡೆದಿರುವುದು ಮತ್ತು ಉತ್ತರ ಕರ್ನಾಟಕದವರು ನಮ್ಮ ಕೈ ಹಿಡಿದಿದ್ದರೆ ನಾವು ನಿಮ್ಮ ಪರವಾಗಿ ನಿಲ್ಲುತ್ತಿದ್ದೆವು ಎಂದು ಹೇಳಿರುವುದು ಈ ಎಲ್ಲ ಕಾರಣವಾಯಿತು.

ಇಲ್ಲಿ ಒಂದು ಸಂಗತಿಯನ್ನು ಸ್ವಲ್ಪ ಕೂಲಂಕಷವಾಗಿ ಗಮನಿಸಬೇಕು. ಅದೇನೆಂದರೆ, ಯಾವುದೇ ರಾಜ್ಯದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಯಾವಾಗ ಕೇಳಿ ಬರುತ್ತದೆ ಅಂದರೆ, ಮುಖ್ಯಮಂತ್ರಿಯಿಂದ ತಮಗೆ ನ್ಯಾಯ ದೊರಕುವುದಿಲ್ಲ ಎಂದು ಅವಜ್ಞೆಗೊಳಗಾದ ಜನರಿಗೆ ಅನಿಸಿದಾಗ. ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಯಾದವರು ತಮ್ಮ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಪ್ರವೃತ್ತಿ ಸಾಮಾನ್ಯವಾಗಿದೆ. ಅದನ್ನು ಯಾರೂ ಪ್ರಶ್ನಿಸುವುದಿಲ್ಲ. ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರವನ್ನು ಪ್ರತಿನಿಧಿಸಿದ ನಂತರ ಆ ಜಿಲ್ಲೆಗೆ ವಿಪರೀತ ಅನಿಸುವಷ್ಟು ಬಿಡುಗಡೆ ಮಾಡಿದರು. ಸರಕಾರದ ಯೋಜನೆಗಳನ್ನು ಮಂಜೂರು ಮಾಡಿದರು. ಇದರಿಂದ ಬೇರೆಯವರಿಗೆ ಬೇಸರವಾಗುವುದು ಸಹಜ.

ಇಷ್ಟೇ ಪ್ರಮಾಣದಲ್ಲಿ ಯಾದಗಿರಿಗೋ ಚಿಕ್ಕೋಡಿಗೋ ಮಾಡಿದ್ದರೆ, ಅವರು ರಾಮನಗರಕ್ಕೆ ಮಾಡಿದ್ದನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಕಾಲಕಾಲಕ್ಕೆ ಅಧಿಕಾರಕ್ಕೆ ಬಂದ ಎಲ್ಲ ಮುಖ್ಯಮಂತ್ರಿಗಳೂ ತಮ್ಮ ತಮ್ಮ ಕ್ಷೇತ್ರ ಮತ್ತು ಜಿಲ್ಲೆಗಳಿಗಷ್ಟೇ ಹೆಚ್ಚಿನ ಅನುದಾನ ಮಂಜೂರು ಮಾಡುವುದರಿಂದ ಮಿಕ್ಕವರಿಗೆ ಅಸಮಾಧಾನವಾಗುವುದು ಸಹಜ.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ಶಿವಮೊಗ್ಗ ಜಿಲ್ಲೆಗೆ ನೂರಾರು ಕೋಟಿ ರೂಪಾಯಿಗಳ ಹಲವು ಯೋಜನೆಗಳನ್ನು ಜಾರಿಗೊಳಿಸಿದರು. ಮುಂದೆ ಪ್ರಮುಖ ಯೋಜನೆಗಳು ಬಂದರೆ ಶಿವಮೊಗ್ಗಕ್ಕೆ ಇರಲಿ ಎಂದು ಅವರಿಗೆ ಅನಿಸುತ್ತಿತ್ತು. ಜಗದೀಶ ಶೆರ್ಟ್ಟ ಅವರಿಗೆ ಹುಬ್ಬಳ್ಳಿ ಅಂದರೆ ಅಚ್ಚುಮೆಚ್ಚು. ಸಿದ್ದರಾಮಯ್ಯ ಅವರಿಗೆ ಮೈಸೂರು ಅಂದರೆ ಅದೆಂಥ ಮೋಹವೋ. ಎಚ್.ಡಿ.ರೇವಣ್ಣ ಅವರು ಲೋಕೋಪಯೋಗಿ ಮಂತ್ರಿಯಾಗಿದ್ದಾಗ ಸರಕಾರದ ಎಲ್ಲ ಒಳ್ಳೆಯ ಯೋಜನೆಗಳನ್ನು ತಮ್ಮ ಹೊಳೆನರಸೀಪುರಕ್ಕೆ ಜಾರಿ ಮಾಡಿಸಿಕೊಂಡರು. ಅವರ ಕ್ಷೇತ್ರದ ಅಕ್ಕ ಪಕ್ಕದ ಕ್ಷೇತ್ರಗಳು ಆ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿಲ್ಲ. ಆದರೆ ಹೊಳೆನರಸೀಪುರ ಮಾತ್ರ ಎದ್ದು ಕಾಣುವಷ್ಟು ಬೆಳೆದಿದೆ. ಇದು ?

ಆಯಾ ಕಾಲಕ್ಕೆ ಅಧಿಕಾರಕ್ಕೆ ಬಂದವರೆಲ್ಲ ಪ್ರಾಂತೀಯ ನಾಯಕರಂತೆ ವರ್ತಿಸಿದ್ದಾರೆ. ಯಾರೂ ಸಹ ರಾಜ್ಯ ನಾಯಕರಂತೆ ವರ್ತಿಸಿಲ್ಲ. ಅಸಲಿಗೆ ಅವರು ಪ್ರಾದೇಶಿಕ ಅಥವಾ ಪ್ರಾಂತೀಯ ನಾಯಕರೇ. ಧರ್ಮಸಿಂಗ್ ಅವರು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಅನ್ವಯಿಸುವ ರಾಜ್ಯ ನಾಯಕರೇ ? ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ಜಿಲ್ಲೆಯಾದ ಕಲಬುರ್ಗಿ ಮಾತ್ರ ಉದ್ಧಾರವಾದರೆ ಸಾಕು. ಹೀಗಾಗಿ ಅವರು ಎಲ್ಲಾ ಯೋಜನೆಗಳನ್ನು ತಮ್ಮ ಕ್ಷೇತ್ರಕ್ಕೆ ಜಾರಿಯಾಗುವಂತೆ ನೋಡಿಕೊಳ್ಳುತ್ತಿದ್ದರು. ಈಗಲೂ ಅವರ ಧೋರಣೆ ಬದಲಾಗಿಲ್ಲ. ಕೇಂದ್ರದ ಮಂತ್ರಿಯಾಗಿದ್ದಾಗ ಒಂದೇ ಒಂದು ಯೋಜನೆಯನ್ನು ಮಂಗಳೂರಿಗೋ, ಉತ್ತರ ಕನ್ನಡಕ್ಕೋ ತರಬೇಕು ಎಂದು ಅವರಿಗೆ ಅನಿಸಲಿಲ್ಲ. ಅದೇ ರೀತಿ ಕೇಂದ್ರ ಮಂತ್ರಿಯಾಗಿರುವ ಅನಂತಕುಮಾರ ಅವರಿಗೂ. ಅವರು ಇಷ್ಟು ವರ್ಷಗಳ ಕಾಲ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಅವರಿಗೆ ಮಡಿಕೇರಿ, ಚಿಕ್ಕೋಡಿ, ಹಾವೇರಿಗೆ ಒಂದು ಯೋಜನೆ ತರಬೇಕು ಎಂದು ಅನಿಸಿಲ್ಲ. ಇಡೀ ರಾಜ್ಯವನ್ನು ಸಮಗ್ರ ದೃಎಷ್ಟಿಯಲ್ಲಿ ಇಟ್ಟುಕೊಂಡು ನೋಡುವ ನಾಯಕರೇ ನಮ್ಮಲ್ಲಿ ಇಲ್ಲವೇನೋ ಅನಿಸುತ್ತದೆ. ಎಲ್ಲರೂ ತಮ್ಮ ತಮ್ಮ ಜಿಲ್ಲೆ, ಪ್ರಾಂತಗಳಿಗೆ ಮಾತ್ರ ಇಡೀ ರಾಜ್ಯವನ್ನು ಪ್ರತಿನಿಧಿಸುವ ನಾಯಕರು ಯಾರಿದ್ದಾರೆ, ಹೇಳಿ ? ಉಹುಂ, ಯಾರೂ ಇಲ್ಲ. ಎಲ್ಲರಿಗೂ ತಮ್ಮ ತಮ್ಮ ಕ್ಷೇತ್ರ, ಪ್ರದೇಶ, ವೋಟ್ ಬ್ಯಾಂಕ್ ಅಷ್ಟೇ ಪ್ರಮುಖ. ವಾರದ ಕೊನೆಯಲ್ಲಿ ತಮ್ಮ ಕ್ಷೇತ್ರಗಳಿಗೆ, ಜಿಲ್ಲೆಗಳಿಗೆ ಹೋಗಿ ಕುಳಿತುಕೊಳ್ಳಬೇಕು ಎಂದು ಅನಿಸುವ ಹಾಗೆ, ಬೇರೆ ಜಿಲ್ಲೆಗಳಿಗೂ ಹೋಗಬೇಕು ಎಂದು ಏಕೆ ಅನಿಸುತ್ತಿಲ್ಲ. ಈ ಜಿಲ್ಲಾ ಉಸ್ತುವಾರಿ ಸಚಿವರನ್ನು ನಿಯೋಜಿಸುವ ಸಂಪ್ರದಾಯ ಜಾರಿಗೆ ಬಂದ ನಂತರ ಬಹುತೇಕ ಸಚಿವರು ತಮ್ಮ ಸಚಿವ ಖಾತೆಯ ತಮ್ಮ ಉಸ್ತುವಾರಿ ಜಿಲ್ಲೆಳಿಗೆ ಸುರಿಯುತ್ತಿದ್ದಾರೆ. ಇದರಿಂದ ಬೇರೆ ್ಜಜ್ಝ್ಝಿಛಿಜ್ಝ್ಠ ಉದ್ಧಾರವಾಗುವುದಾದರೂ ಹೇಗೆ ?

ಅಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳ ಜನರೂ ಒಬ್ಬ ನಾಯಕನನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಯಾದಗಿರಿಯವರೋ, ರಾಯಚೂರಿನವರೋ, ಚಿಕ್ಕೋಡಿಯವರೋ ಕುಮಾರಸ್ವಾಮಿ ಅವರನ್ನು ತಮ್‌ಮ್ ನಾಯಕನೆಂದು ಒಪ್ಪಿಕೊಳ್ಳುತ್ತಾರಾ ? ಡಾ. ಪರಮೇಶ್ವರ ಅವರನ್ನು ಬೀದರದವರೋ, ಉಡುಪಿಯವರೋ ತಮ್ಮವನೆಂದು ಒಪ್ಪಿಕೊಳ್ಳುತ್ತಾರಾ ? ಸಾಧ್ಯವೇ ಇಲ್ಲ. ಇವರ್ಯಾರೂ ತಾವು ಎಲ್ಲೆಡೆಗೂ ಸಲ್ಲುವವರು ಎಂದು ತಮ್ಮನ್ನು ಬಿಂಬಿಸಿಕೊಂಡಿಲ್ಲ. ಆ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿಲ್ಲ.

ಇವೆಲ್ಲವುಗಳ ಪರಿಣಾಮವಾಗಿ ರಾಜಧಾನಿಯಿಂದ ದೂರವಿರುವ ಜಿಲ್ಲೆಗಳ ಜನರಿಗೆ ತಮಗೆ ಅನ್ಯಾಯವಾಗಿದೆ ಎಂಬ ಭಾವನೆ ದಿನದಿಂದ ದಿನಕ್ಕೆ ಗಾಢವಾಗುತ್ತಿದೆ. ಇದರ ಫಲವೇ ಪ್ರತ್ಯೇಕ ರಾಜ್ಯದ ಕೂಗು ಆಗಾಗ ಕೇಳಿಬರುವಂತಾಗಿರುವುದು.

ರಾಜ್ಯದ ಯಾವುದೇ ಮೂಲೆಯಿಂದ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂತೆಂದರೆ, ಅಧಿಕಾರದಲ್ಲಿ ಇರುವವರಷ್ಟೇ ಅಲ್ಲ, ಪ್ರತಿಪಕ್ಷಗಳಲ್ಲಿ ಇರುವವರೂ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ, ಜನರು ಇಲ್ಲಿ ತನಕ ಸಹಿಸಿಕೊಂಡಿದ್ದಾರೆ ಮತ್ತು ಇನ್ನು ಸಹಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆಂದು. ಪ್ರತ್ಯೇಕ ಕೂಗು ಕೇಳಿ ಬಂದರೆ ಅದು ಜನರ ತಪ್ಪಲ್ಲ. ರಾಜಕಾರಣಿಗಳ ತಪ್ಪು. ಹೀಗಾಗಿ ಇದು ಎಲ್ಲಾ ಪಕ್ಷಗಳ ನಾಯಕರಿಗೆ ಆತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ.

Reach Count: 
1