Public News

News Subject: 
ರಾಜ್ಯದ 44 ಎಂಜಿನಿಯರಿಂಗ್‌ ಕಾಲೇಜುಗಳಿಗೆ ‘ಸಿ’ ಮತ್ತು ‘ಡಿ’ ಗ್ರೇಡ್‌
Upload Image: 
Body: 

ಒಂದೆಡೆ ಎಂಜಿನಿಯರಿಂಗ್‌ ಸೀಟುಗಳಿಗೆ ಬೇಡಿಕೆ ಕುಸಿಯುತ್ತಿರುವ ಬೆನ್ನಲ್ಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ತನ್ನ ಮಾನ್ಯತೆಗೊಳಪಡುವ 200 ಎಂಜಿನಿಯರಿಂಗ್‌ ಕಾಲೇಜುಗಳ ಪೈಕಿ, ಒಟ್ಟು 44 ಕಾಲೇಜುಗಳನ್ನು 'ಸಿ' ಮತ್ತು 'ಡಿ' ದರ್ಜೆಗೆ ಸೇರಿಸಿದೆ.

ಅರ್ಹ ಬೋಧಕರನ್ನು ನೇಮಿಸಿಕೊಳ್ಳದಿರುವುದು ಸೇರಿದಂತೆ ಕನಿಷ್ಠ ಮೂಲ ಸೌಲಭ್ಯಗಳನ್ನು ಹೊಂದಿರುದ ಕಾಲೇಜುಗಳ ಬಗ್ಗೆ ಸ್ಥಳೀಯ ವಿಚಾರಣಾ ಸಮಿತಿ (ಎಲ್‌ಐಸಿ) ಸೆನೆಟ್‌ ಮುಂದೆ ಸಲ್ಲಿಸಿದ ವರದಿ ಆಧರಿಸಿ ವಿಟಿಯು ಈ ಕ್ರಮ ಕೈಗೊಂಡಿದೆ. ಒಟ್ಟು 27 ಕಾಲೇಜುಗಳಿಗೆ 'ಸಿ' ಮತ್ತು ಒಟ್ಟು 17 ಕಾಲೇಜುಗಳಿಗೆ 'ಡಿ' ದರ್ಜೆ ನಿಡಲಾಗಿದೆ. ಇದರಲ್ಲಿ ಒಟ್ಟು 8 ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳು ಹಾಗೂ 36 ಖಾಸಗಿ ಕಾಲೇಜುಗಳು ಸೇರಿದ್ದು, ಈ ಬಗ್ಗೆ ಕಾಲೇಜುಗಳ ಪ್ರಾಂಶುಪಾಲರಿಗೆ ಮಾಹಿತಿ ರವಾನಿಸಲಾಗಿದೆ.

ಎಲ್‌ಐಸಿ ಭೇಟಿ ವೇಳೆ ಈ ಕಾಲೇಜುಗಳಲ್ಲಿ ಕಟ್ಟಡ, ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ ಸೇರಿದಂತೆ ಹಲವು ಮೂಲ ಸೌಕರ್ಯಗಳ ಕೊರತೆ ಕಂಡು ಬಂದಿತ್ತು. ಜತೆಗೆ ಅರ್ಹರಲ್ಲದ ಬೋಧಕರನ್ನು ನೇಮಕ ಮಾಡಿಕೊಂಡಿದ್ದ ಪರಿಣಾಮ, ಶೈಕ್ಷಣಿಕ ಗುಣಮಟ್ಟ ಸಹ ಕುಸಿತಗೊಂಡಿರುವುದು ತಿಳಿದುಬಂದಿತ್ತು.

'ಸಿ ಮತ್ತು ಡಿ ದರ್ಜೆ ಹೊಂದಿರುವ ಕಾಲೇಜುಗಳಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ (ಎಐಸಿಟಿಇ) ಹಾಗೂ ವಿಟಿಯು ನಿಯಮಗಳ ಅನ್ವಯ ಅರ್ಹ ಬೋಧಕರ ನೇಮಕ ಮತ್ತು ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿಲ್ಲ. ಸ್ಥಳೀಯ ವಿಚಾರಣಾ ಸಮಿತಿಯ ಮುಂದಿನ ಭೇಟಿ ವೇಳೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಗುಣಮಟ್ಟದ ಬೋಧಕರನ್ನು ನೇಮಕ ಮಾಡಿಕೊಳ್ಳದಿದ್ದರೆ, ಅಂತಹ ಕಾಲೇಜಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು,' ಎಂದು ವಿಟಿಯು ಮೂಲಗಳು ತಿಳಿಸಿವೆ.

Reach Count: 
1