Public News

News Subject: 
ನಿಮ್ಮ ಇಂದಿನ ರಾಶಿಫಲ ನೋಡಿ: 01.08.2018
Upload Image: 
Body: 

ಮೇಷ:- ಎಲ್ಲಾ ರೀತಿ ಸವಾಲುಗಳನ್ನು ಎದುರಿಸುತ್ತಲೇ ಬಂದಿರುವ ನಿಮಗೆ ಇಂದು ಶುಭ ದಿನ. ನಿಮಗೆ ಮುದ ನೀಡುವ ಒಂದು ವಾರ್ತೆ ನಿಮ್ಮನ್ನು ಉತ್ಸಾಹಿತರನ್ನಾಗಿ ಮಾಡುವುದು. ವಿವಿಧ ಮೂಲಗಳಿಂದ ಹಣ ಬರುವುದು.

ವೃಷಭ:- ನಿಮ್ಮದೇ ಆದ ವಿಧಾನ ಗುರುತಿಸಿಕೊಳ್ಳಿ. ಈಡೇರಬೇಕಾದ ಹಲವು ವಿಚಾರಗಳು ಬಗೆಹರಿಯುವವು. ಆರೋಗ್ಯದ ಕಡೆ ತುಸು ಗಮನ ಕೊಡುವುದು ಒಳ್ಳೆಯದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಲ್ಪ ಹಿನ್ನಡೆ ಉಂಟಾಗುವುದು.

ಮಿಥುನ:- ಬದಲಾದ ಕಾಲಧರ್ಮಕ್ಕೆ ಹೊಂದಿಕೊಳ್ಳುವ ವಿಚಾರದಲ್ಲಿ ನೀವು ಅನೇಕ ರೀತಿಯ ಪ್ರಗತಿ ಸಾಧಿಸಲಿದ್ದೀರಿ. ಪೂರ್ವಪುಣ್ಯದ ಬಲದಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಿರಿಯರ ಆಶೀರ್ವಾದ ದೊರೆಯುವುದು.

ಕಟಕ:- ಮನೆ, ಆಫೀಸ್‌, ಮಿತ್ರರು, ವ್ಯಾವಹಾರಿಕ ಕ್ಷೇತ್ರ ಇತ್ಯಾದಿಗಳಲ್ಲಿ ಚುರುಕುತನ ತೋರುವುದರಿಂದ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಮುಗಿಯುವುದು. ಇದರಿಂದ ಮನಸ್ಸಿಗೆ ಪ್ರಶಾಂತತೆ ಉಂಟಾಗುವುದು.

ಸಿಂಹ:- ಆತ್ಮವಿಶ್ವಾಸ ಬಹಳ ಉತ್ತಮವಾದುದು. ನಿಮ್ಮ ಧೈರ್ಯ ಸ್ಥೈರ್ಯ ಅಸಾಧ್ಯ ಎನಿಸಿದ್ದನ್ನು ಸಾಧಿಸಿಕೊಡಲಿವೆ. ಮಕ್ಕಳ ವಿವಾಹ ವಿಚಾರದಲ್ಲಿ ಒಂದು ದೃಢ ನಿರ್ಧಾರ ತಳೆಯುವುದು ಒಳ್ಳೆಯದು.

ಕನ್ಯಾ:- ಎಲ್ಲಾ ವಿಚಾರಗಳಿಗೂ ಗೆಳೆಯರನ್ನು ಆಶ್ರಯಿಸುವುದು ಸೂಕ್ತವಲ್ಲ. ಕೆಲವು ವಿಚಾರಗಳಲ್ಲಿ ಸ್ವತಂತ್ರ ನಿರ್ಧಾರ ತಳೆಯುವುದು ಒಳ್ಳೆಯದು. ಅಂತೆಯೇ ಕುಟುಂಬ ಸದಸ್ಯರ ಸಲಹೆಗಳು ಅಷ್ಟೇ ಮಹತ್ವಪೂರ್ಣವಾಗಿರುತ್ತವೆ.

ತುಲಾ:- ಸರಳತನ ಇರಬೇಕು. ಆದರೆ ಬೇರೆಯವರು ನಮ್ಮ ಮೇಲೆ ಸವಾರಿ ಮಾಡುವಷ್ಟು ಇರಬಾರದು. ಕೆಲವು ವಿಷಯಗಳಲ್ಲಿ ನೀವು ಹುಂಬುತನದಿಂದ ವರ್ತಿಸುವುದನ್ನು ಬಿಟ್ಟಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗುವಿರಿ.

ವೃಶ್ಚಿಕ:- ವಾಸಕ್ಕೊಂದು ಮನೆ ಬಯಸುತ್ತಿರುವ ನೀವು ನಿಮ್ಮ ಯೋಜನೆಗೆ ಒಂದು ನಿಶ್ಚಿತವಾದ ರೂಪ ಕೊಡುವುದು ಒಳ್ಳೆಯದು. ಸಾಡೇಸಾತ್‌ ಶನಿ ಪ್ರಭಾವದಲ್ಲಿಯೇ ಮನೆ ಕಟ್ಟುವ ಅಥವಾ ಖರೀದಿಸುವ ಯೋಗ ಬರುವುದು.

ಧನುಸ್ಸು:- ನಿರಾಯಾಸ ಮಾತುಗಳಿಂದ ಹತ್ತು ಹಲವು ಕೆಲಸಗಳನ್ನು ಸಾಧಿಸುವಿರಿ. ಆದರೆ ಅದೇ ಅಹಂ ಆಗದಿರಲಿ. ಅತಿಯಾದ ಆತ್ಮವಿಶ್ವಾಸ ಮತ್ತು ಅಹಂಕಾರ ಮನುಷ್ಯನ ಅಧಃಪತನಕ್ಕೆ ಕಾರಣವಾಗುವುದು.

ಮಕರ:- ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದೇನೆ ಎಂಬ ಹಿಂಜರಿಕೆ ನಿಯಂತ್ರಿಸಿ. ಬುದ್ಧಿ ಚಾತುರ‍್ಯದಿಂದಲೇ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುವಿರಿ ಮತ್ತು ನಿಮ್ಮ ಹೋರಾಟದಲ್ಲಿ ಜಯ ಸಾಧಿಸುವಿರಿ.

ಕುಂಭ:- ಊರಿಗೆ ಪ್ರಯಾಣ ಬೆಳೆಸುವಂತಹ ಜರೂರತೆ ಉಂಟಾಗುವುದು. ಆದರೆ ಅದಕ್ಕೆ ಸೂಕ್ತ ತಯಾರಿ ನಡೆಸುವುದು ಮುಖ್ಯ. ಸಹೋದರ ಸಹಾಯ ಅಗತ್ಯವಿದ್ದಲ್ಲಿ ಬಳಸಿಕೊಳ್ಳಿ.

ಮೀನ:- ನಿರಂತರವಾದ ವಾದವಿವಾದಗಳು ಪ್ರಯೋಜನ ನೀಡಲಾರವು. ಮೌನದಿಂದ ಕೆಲಸ ಸಾಧಿಸಿ ನಿರಾಳತೆಯಿಂದ ಬದುಕಿ. ಅಗತ್ಯಕ್ಕೆ ತಕ್ಕಷ್ಟು ಹಣ ಖರ್ಚು ಮಾಡುವುದು ಒಳ್ಳೆಯದು. ಗುರುವಿನ ಆಶೀರ್ವಾದ ಪಡೆಯಿರಿ.

Reach Count: 
1