Public News

News Subject: 
ಪತ್ನಿ ಎದುರು ತನ್ನ ಪುರುಷತ್ವ ಸಾಬೀತುಪಡಿಸಲು ಆತ ಮಾಡಿದ್ದು ಹೀಗೊಂದು ವಿಡಿಯೋ !
Upload Image: 
Body: 

ಗಂಡ ಪುರುಷನೇ ಅಲ್ಲ. ಹಾಗಾಗಿ ನನಗೆ ಅವನ ಜತೆ ಸಂಸಾರ ಮಾಡಲು ಸಾಧ್ಯವಿಲ್ಲ ಎಂದು ಡಿವೋರ್ಸ್​ಗೆ ಮನವಿ ಮಾಡಿದ್ದ ಮಹಿಳೆಗೆ ಆಕೆಯ ಗಂಡ ತುಂಬ ವಿಚಿತ್ರವಾಗಿ ತಿರುಗೇಟು ನೀಡಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಹೆಂಡತಿ ತನ್ನ ಪುರುಷತ್ವ ಅನುಮಾನಿಸಿ ಹೇಳಿಕೆ ನೀಡಿದ್ದಕ್ಕೆ ಸಿಟ್ಟಾದ ಗಂಡ, ಮತ್ತೊಬ್ಬ ಮಹಿಳೆಯ ಜತೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋದ ಕ್ಲಿಪಿಂಗ್ ಅ​ನ್ನು ಹೆಂಡತಿಯ ತಂದೆ-ತಾಯಿಗೆ ಕಳಿಸಿದ್ದು ಈಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ವಿಭಾವಾಸು (32) ಅನುಷಾ ಎಂಬಾಕೆಯನ್ನು 2016ರಲ್ಲಿ ವಿವಾಹವಾಗಿದ್ದ. ಈ ದಂಪತಿ ಕೇವಲ 15 ದಿನ ಮಾತ್ರ ಒಟ್ಟಿಗೆ ಇದ್ದರು. ನಂತರ ಅನುಷಾ ತಂದೆಯ ಮನೆಗೆ ವಾಪಸ್​ ಬಂದಿದ್ದಳು. ಎರಡೂ ಕುಟುಂಬಗಳೂ ಸ್ವಲ್ಪ ದಿನ ಸುಮ್ಮನೆ ಇದ್ದವು. ಅವರನ್ನು ಒಂದಾಗಿಸಲೂ ಪ್ರಯತ್ನಿಸಿದರು. ಆದರೆ, ಅನುಷಾ ಯಾವುದಕ್ಕೂ ಒಪ್ಪದೆ, ತನ್ನ ಗಂಡ ಪುರುಷನೇ ಅಲ್ಲ. ನನಗೆ ಡಿವೋರ್ಸ್​ ಬೇಕು ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಳು. ಆದರೆ, ಅನುಷಾ ಹೇಳಿಕೆಯನ್ನು ಹೇಗಾದರೂ ಸುಳ್ಳು ಮಾಡಬೇಕು ಎಂದು ವಿಭಾವಾಸು , ಬೇರೊಬ್ಬ ಮಹಿಳೆಯ ಜತೆ ಲೈಂಗಿಕ ಕ್ರಿಯೆ ನಡೆಸಿ, ವಿಡಿಯೋದ 5 ನಿಮಿಷದ ಕ್ಲಿಪಿಂಗ್​ನ್ನು ಅನುಷಾ ತಂದೆ, ತಾಯಿಗೆ ಕಳಿಸಿದ್ದ. ಇದನ್ನು ನೋಡಿದ ಅನುಷಾ ಪಾಲಕರು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ವಿಭಾವಾಸು ಅಶ್ಲೀಲ ವಿಡಿಯೋ ಕಳಿಸಿದ್ದಕ್ಕೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಹೈದರಾಬಾದ್​ ಪೊಲೀಸರು ಆತನನ್ನು ಜೈಲಿಗೆ ಕಳಿಸಿದ್ದಾರೆ.

Reach Count: 
1