Kshetra Samachara

Local News Subject: 
ಅಭಿವೃದ್ಧಿಗಾಗಿ ದಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಕು
City: 
Hubballi-Dharwad
Upload Image: 
Body: 

ಅಧಿಕಾರ ವಿಕೇಂದ್ರಿಕರಣ ಹಾಗೂ ಧಾರವಾಡದ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ಪಾಲಿಕೆಯಾಗಬೇಕು ಎಂದು ವ್ಯಾಪಾರಸ್ಥ ಲಲಿತ್‌ ಭಂಡಾರಿ ಆಗ್ರಹಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಣಿಜ್ಯ ನಗರಿ ಹುಬ್ಬಳಿಗೆ ಹೋಲಿಕೆ ಮಾಡಿದರೆ, ಮೂಲ ಸೌಲಭ್ಯಗಳಿಂದ ಧಾರವಾಡ ಜನತೆ ವಂಚಿತರಾಗಿದ್ದಾರೆ. ಪಾಲಿಕೆ ಆಯುಕ್ತರು ವಾರಕ್ಕೆ ಎರಡು ದಿನ ಧಾರವಾಡ ಕಚೇರಿಯಲ್ಲಿ ಇದ್ದು, ಉಳಿದ ದಿನ ಹುಬ್ಬಳ್ಳಿಯ ಕಚೇರಿಯಲ್ಲಿರುತ್ತಾರೆ ಹೀಗಾಗಿ ಇಲ್ಲಿನ ಜನತೆಗೆ ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ ಎಂದರು.

ಪಾಲಿಕೆ ಪ್ರಧಾನ ಕಚೇರಿ ಧಾರವಾಡದಲ್ಲಿ ಇದ್ದರೂ, ಆಡಳಿತ ಕೆಲಸಗಳು ಹುಬ್ಬಳ್ಳಿಯಲ್ಲಿ ನಡೆಯುತ್ತವೆ. ಈ ನಿಟ್ಟಿನಲ್ಲಿ ಧಾರವಾಡ ಅಭಿವೃದ್ಧಿ ಹೊಂದಲು ಪ್ರತ್ಯೇಕ ಪಾಲಿಕೆಯ ಅಗತ್ಯವಿದೆ ಎಂದ ಅವರು, ಹುಬ್ಬಳ್ಳಿಯವರು ದೊಡ್ಡಣ್ಣನಂತೆ ವರ್ತನೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಳಳ್ಳಿಯಲ್ಲಿ ಹೊಸದಾಗಿ 3 ಪೊಲೀಸ ಠಾಣೆಗಳನ್ನು ಸ್ಥಾಪಿಸಲಾಗಿದೆ. ಧಾರವಾಡದಲ್ಲಿ ಕಳೆದ 25 ವರ್ಷಗಳಿಂದ ನೂತನವಾಗಿ ಒಂದು ಠಾಣೆಯನ್ನು ನಿರ್ಮಾಣ ಮಾಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಅವರು ಹಿಂದಿನಿಂದಲು ಧಾರವಾಡದವರಿಗೆ ಅನ್ಯಾಯ ಮಾಡಲಾಗಿದೆ ಎಂದು ಕುಟುಕಿದರು.

ಚುನಾವಣೆ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಟಿಕೆಟ್‌ ಪಡೆಯಲು ಕೂಡಾ ಹುಬ್ಬಳ್ಳಿ ನಾಯಕರ ಮರ್ಜಿ ಕಾಯಬೇಕಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಪಾಲಿಕೆ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದರು.

ಪ್ರತ್ಯೇಕ ಪಾಲಿಕೆ ಬೇಡಿಕೆಯು ಪಕ್ಷಾತೀತ ಹೋರಾಟವಾಗಿದ್ದು, ಪಕ್ಷ ಭೇದ ಮರೆತು ಎಲ್ಲ ರಾಜಕೀಯ ಪಕ್ಷ ದ ಹಿರಿಯ ಹಾಗೂ ಕಿರಿಯ ನಾಯಕರು ಸೇರಿದಂತೆ ಧಾರವಾಡ ಜನತೆ ಸರಕಾರದ ಮೇಲೆ ಒತ್ತಡ ಹೇರಲು ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಸಾರ್ವಜಿಕರರೊಂದಿಗೆ ಚರ್ಚಿಸಿ ಪ್ರತ್ಯೇಕ ಪಾಲಿಕೆಗಾಗಿ ಮುಂಬರುವ ದಿನದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಉದಯ ಯಂಡಿಗೇರಿ, ವಿಜಯಲಕ್ಷ್ಮಿ ಕೋ-ಆಪರೇಟಿವ್‌ ಸೊಸೈಟಿ ನಿರ್ದೇಶಕ ಸುಂಕದ ಜೋಶಿ, ಜವಳಿ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ ಸುಲಾಖೆ, ವ್ಯಾಪಾರಸ್ಥ ರವಿ ಯಲಿಗಾರ ಸೇರಿದಂತೆ ಇತರರು ಇದ್ದರು.

Reach Count: 
1