Public News

News Subject: 
ಪ್ರಿಯಾಂಕ ಚೋಪ್ರಾ ಮದುವೆ ಡೇಟ್ ಫಿಕ್ಸ್!
Upload Image: 
Body: 

ಬಾಲಿವುಡ್‍ನ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಮದುವೆ ಕುರಿತ ವಿಷಯವೊಂದು ಹೊರ ಬಿದ್ದಿದ್ದು, ಇದೇ ವರ್ಷ ಸೆಪ್ಟಂಬರ್ 16ರಂದು ಸಾಂಸರಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯೊಂದು ಸಿನಿ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ.

ಕಳೆದ ಕೆಲವು ದಿನಗಳಿಂದ ಪ್ರಿಯಾಂಕ ಚೋಪ್ರಾ ಮತ್ತು ಅಮೆರಿಕಾ ಗಾಯಗ ನಿಕ್ ಜೋನ್ಸ್ ಇಬ್ಬರ ಮದುವೆ ಬಗ್ಗೆ ಬಾಲಿವುಡ್‍ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಜೋಡಿ ಈಗಾಗಲೇ ಭಾರತದ ಪ್ರವಾಸಿತಾಣಗಳಿಗೆ ಭೇಟಿ ನೀಡಿದೆ. ಸಲ್ಮಾನ್ ಖಾನ್ ನಟಿಸುತ್ತಿರುವ ‘ಭಾರತ್’ ಚಿತ್ರತಂಡದಿಂದ ಹೊರ ಬಂದ ಪ್ರಿಯಾಂಕ ಮದುವೆ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ಮೊದಲು ಪ್ರಿಯಾಂಕ ಮತ್ತು ನಿಕ್ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿತ್ತು. ಸೆಪ್ಟೆಂಬರ್ 16 ರ ನಿಕ್ ಹುಟ್ಟುಹಬ್ಬದ ದಿನವೇ ಮದುವೆ ಆಗಲು ನಿಶ್ಚಯಿಸಿದ್ದಾರಂತೆ.

ಈ ಬಗ್ಗೆ ಪ್ರಿಯಾಂಕ ಅಥವಾ ನಿಕ್ ಇನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ. ಸೆಪ್ಟೆಂಬರ್ 16ರಂದು 26ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ನಿಕ್ ತನಗಿಂತ 10 ವರ್ಷ ಹಿರಿಯ ನಟಿ ಜೊತೆ ವಿವಾಹ ಆಗಲಿದ್ದಾರೆ. ಹೆಚ್ಚಿನ ಸಮಯವನ್ನು ಜೊತೆಯಾಗಿಯೇ ಇಬ್ಬರು ಕಳೆಯುತ್ತಿದ್ರೂ, ತಮ್ಮ ಪ್ರೀತಿಯ ಬಗೆಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ.

Reach Count: 
1