Public News

News Subject: 
ವಿಚಾರಣೆ ಎದುರಿಸಲು ಮಾರನ್‌ಗೆ ಸುಪ್ರೀಂ ಕೋರ್ಟ್‌ ಆದೇಶ
Upload Image: 
Body: 

ಅಕ್ರಮವಾಗಿ ಟೆಲಿಫೋನ್‌ ಎಕ್ಸ್‌ಚೇಂಜ್‌ಗಳನ್ನು ಅಳವಡಿಸಿದ್ದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್‌ಗೆ ಸುಪ್ರೀಂ ಕೋರ್ಟ್‌ ಸೋಮವಾರ ಆದೇಶಿಸಿದೆ.

ಯುಪಿಎ ಸರಕಾರದ ಮೊದಲ ಅವಧಿಯಲ್ಲಿ ದಯಾನಧಿ ಮಾರನ್‌ ಟೆಲಿಕಾಂ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಸೋದರ ಕಲಾನಿಧಿ ಮಾರನ್‌ ಅವರ ಸನ್‌ ನೆಟ್‌ವರ್ಕ್‌ಗೆ ಅನುಕೂಲವಾಗುವಂತೆ 700 ಹೈ ಎಂಡ್‌ ಟೆಲಿಕಾಂ ಸಂಪರ್ಕವನ್ನು ಮಾರನ್‌ ನಿವಾಸ ಮತ್ತು ಕಚೇರಿಗೆ ಕಲ್ಪಿಸಲಾಗಿತ್ತು.ಈ ನಿಟ್ಟಿನಲ್ಲಿ ಅಂದು ಆರಂಭಿಸಲಾಗಿದ್ದ ಟೆಲಿಫೋನ್‌ ಎಕ್ಸ್‌ಚೇಂಜ್‌ಗಳನ್ನು ಕಾನೂನುಬಾಹಿರ ಎಂದು ಸಿಬಿಐ ಗುರ್ತಿಸಿದೆ. ಇದರ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್‌ ಸೂಚಿಸಿದೆ.

ಈ ಪ್ರಕರಣದಿಂದ ತಮ್ಮನ್ನು ಮುಕ್ತಗೊಳಿಸಿದ್ದ ಸಿಬಿಐ ಕೋರ್ಟ್‌ನ ಆದೇಶವನ್ನು ಮದ್ರಾಸ್‌ ಕೋರ್ಟ್‌ ಜು.25ರಂದು ರದ್ದುಗೊಳಿಸಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮಾರನ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಈಗ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

Reach Count: 
1