Public News

News Subject: 
ಮೋದಿ ‘ಮನ್ ಕಿ ಬಾತ್‍’ನ 46ನೇ ಆವೃತ್ತಿಯ ಹೈಲೈಟ್ಸ್ ಇಲ್ಲಿದೆ ನೋಡಿ
Upload Image: 
Body: 

ಸರ್ಕಾರದ ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯ ಪ್ರಯೋಜನಗಳು ಪ್ರತಿ ನಾಗರಿಕರಿಗೂ ತಲುಪಿದಾಗ ನವ ಭಾರತದ ಅಡಿಪಾಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.46ನೇ ಆವೃತ್ತಿಯ ರೇಡಿಯೋ ಕಾರ್ಯಕ್ರಮವಾದ ಮನ್ ಕಿ ಬಾತ್‍ನಲ್ಲಿ ಮಾತನಾಡಿದ ಪ್ರಧಾನಿಯವರು, ಗಣೇಶ ಉತ್ಸವದ ಹಿನ್ನೆಲೆಯಲ್ಲಿ ದೇಶದ ಜನತೆಗೆ ಸಂದೇಶವನ್ನು ನೀಡಿದ ಪ್ರಧಾನಿ, ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಕರೆ ನೀಡಿದರು. ಪ್ರತಿಯೊಬ್ಬರೂ ಪರಿಸರಕ್ಕೆ ಪೂರಕವಾಗುವ ರೀತಿಯಲ್ಲಿ ಗಣೇಶ ಹಬ್ಬವನ್ನು ಆಚರಿಸಬೇಕೆಂದು ಮನವಿ ಮಾಡಿದ್ದಾರೆ.

ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರು ಸ್ವರಾಜ್ ನನ್ನ ಜನ್ಮಸಿದ್ಧ ಹಕ್ಕು ಎಂದು ಘೋಷಿಸಿ, ದೇಶದ ಜನತೆಯಲ್ಲಿ ಆತ್ಮವಿಶ್ವಾಸದ ಕಿಡಿಯನ್ನು ಹೊತ್ತಿಸಿದ್ದರು. ಇಂದು ಸೂರಜ್ ನನ್ನ ಜನ್ಮ ಸಿದ್ಧ ಹಕ್ಕು ಎಂದು ಒತ್ತಿ ಹೇಳಬೇಕಿದೆ ಎಂದು ಪ್ರತಿಪಾದಿಸಿದರು. ಇದೇ ವೇಳೆ ಬಾಲಗಂಗಾಧರ್ ತಿಲಕ್ ಅವರಿಗೆ ನಮನಗಳನ್ನು ಸಲ್ಲಿಸಿದ ಪ್ರಧಾನಿ ಮೋದಿ,

ಇದ್ದಕ್ಕಿದ್ದಂತೆ ಸುರಿದ ಮಳೆಯಿಂದಾಗಿ ಥೈಲ್ಯಾಂಡ್ ಗುಹೆ ಪ್ರಕರಣವನ್ನು ಉಲ್ಲೇಖಿಸಿ, ಆ ಕಾರ್ಯಾಚರಣೆ ತಾಳ್ಮೆ, ಧೈರ್ಯ, ಶೌರ್ಯದ ಬಗ್ಗೆ ಹೆಚ್ಚಿನ ಪಾಠ ಕಲಿಯುವಂತೆ ಮಾಡಿತ್ತು ಎಂದರು. ಪ್ರಸಕ್ತ ಸಾಲಿನ ಜುಲೈ ತಿಂಗಳು ರೈತರು ಹಾಗೂ ವಿದ್ಯಾರ್ಥಿಗಳಿಗೆ ಅತ್ಯಂತ ಕಠಿಣ ಸಮಯವಾಗಿದೆ. ಹೊಸ ಕಾಲೇಜು ಮತ್ತು ಶಾಲೆಗಳಿಗೆ ಮಕ್ಕಳು ದಾಖಲಾಗಬೇಕಾಗುತ್ತದೆ. ಈ ವೇಳೆ ವಿದ್ಯಾರ್ಥಿಗಳು ತಾಳ್ಮೆಯಿಂದ ಇರಬೇಕಿದ್ದು, ಜೀವನದ ಸಂತೋಷವನ್ನು ಆಹ್ಲಾದಿಸಬೇಕು.

ಜೀವನ ಬದಲಾಯಿಸಲು ಯುವಕರು ತಂತ್ರಜ್ಞಾನಗಳನ್ನು ಬಳಕೆ ಮಾಡುತ್ತಿದ್ದಾರೆ. ರಾಯ್ ಬರೇಲಿಯ ಇಬ್ಬರು ಯುವಕರು ಅಮೆರಿಕಾದಲ್ಲಿದ್ದು, ಡಿಜಿಟಲ್ ಕ್ರಾಂತಿಯನ್ನು ಸೃಷ್ಟಿಸಿದ್ದಾರೆ. ಅವರು ಸಿದ್ಧಪಡಿಸಿರುವ ಆಪ್ ಮೂಲಕ ಗ್ರಾಮದ ಪ್ರತೀ ವಿಚಾರವನ್ನೂ ತಿಳಿದುಕೊಳ್ಳಬಹುದಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

Reach Count: 
1