Kshetra Samachara

Local News Subject: 
ಪ್ರತ್ಯೇಕ ರಾಜ್ಯದ ಬೇಡಿಕೆ ಪರಿಹಾರವಲ್ಲ: ಶೆಟ್ಟರ್‌
City: 
Hubballi-Dharwad
Upload Image: 
Body: 

ಉತ್ತರ ಕರ್ನಾಟಕ ಭಾಗಕ್ಕೆ ಅಭಿವೃದ್ಧಿ ವಿಷಯದಲ್ಲಿ ಅನ್ಯಾಯ, ವಂಚನೆಯಾಗಿದ್ದು ನಿಜ. ಹಾಗಂತ ಅದಕ್ಕೆ ಪ್ರತ್ಯೇಕ ರಾಜ್ಯದ ಬೇಡಿಕೆ ಪರಿಹಾರವಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ಉತ್ತರ ಕರ್ನಾಟಕ ಭಾಗ ಅನ್ಯಾಯಕ್ಕೆ ಒಳಗಾಗುತ್ತಲೇ ಇದೆ. ದಕ್ಷಿಣ ಕರ್ನಾಟಕ ಅಭಿವೃದ್ಧಿಯಾದಷ್ಟು ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ. ಪ್ರತಿ ಬಾರಿ ಬಜೆಟ್'ನಲ್ಲೂ ಮೈಸೂರ ಕರ್ನಾಟಕ ಭಾಗಕ್ಕೇ ಹೆಚ್ಚು ಪ್ರಾತಿನಿಧ್ಯ ನೀಡಲಾಗುತ್ತಿದೆ. ಇದರಿಂದಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯದಲ್ಲಿ ಹಿಂದುಳಿಯುವಂತಾಗಿದೆ ಎಂದರು.

ಪ್ರತಿ ಬಾರಿಯೂ ಅನ್ಯಾಯಕ್ಕೊಳಗಾಗುತ್ತಿದೆ, ನಿರ್ಲಕ್ಷ್ಯಕ್ಕೊಳಗಾಗುತ್ತಿದೆ ಎಂದು ಪ್ರತ್ಯೇಕ ರಾಜ್ಯದ ಬೇಡಿಕೆ ಸರಿಯಲ್ಲ. ಇದು ಬಿಜೆಪಿಯ ಸ್ಪಷ್ಟ ನಿಲುವೂ ಹೌದು. ಅನ್ಯಾಯದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಒಕ್ಕೋರಲಿನಿಂದ ಗಟ್ಟಿಯಾದ ಧ್ವನಿ ಎತ್ತಬೇಕಿದೆ. ರಾಜ್ಯ ಸರಕಾರದ ಮುಂದೆ ಹಕ್ಕನ್ನು ಮಂಡಿಸಬೇಕು. ಆದರೆ, ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಚೋದನೆ ನೀಡುವಂತ ಹೇಳಿಕೆ ನೀಡಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತ್ಯೇಕ ರಾಜ್ಯದ ಕುರಿತು ಉಕ ಭಾಗದಲ್ಲಿಯೇ ಸಭೆ ಕರೆಯುವುದಾಗಿ ಹೇಳಿರುವ ಸಿಎಂ, ಉಕ ಭಾಗಕ್ಕೆ ಇಷ್ಟು ವರ್ಷ ನೀಡಿರುವ ಅನುದಾನಗಳ ಲೆಕ್ಕಗಳನ್ನು, ದಾಖಲೆಗಳನ್ನು ತೆಗೆದುಕೊಂಡು ಬರಲಿ. ಸಾಧ್ಯವಾದರೆ, ಅದಕ್ಕೆ ಸಂಬಂಧಿಸಿದ ಶ್ವೇತಪತ್ರವನ್ನು ಹೊರಡಿಸಲಿ. ಮಾಜಿ ಪ್ರಧಾನಿ ದೇವೇಗೌಡರು ಮುಂದಿನ ಅಧಿವೇಶನದಲ್ಲಿ ಶ್ವೇತಪತ್ರ ಹೊರಡಿಸುವುದಾಗಿ ಹೇಳುತ್ತಾರೆ. ಅಧಿಕಾರ ಅವರ ಬಳಿಯೇ ಇರುವುದರಿಂದ, ಅಧಿವೇಶನದವರೆಗೆ ಕಾಯುವುದು ಯಾಕೆ. ಶೀಘ್ರವೇ ಶ್ವೇತ ಪತ್ರ ಹೊರಡಿಸಲಿ ಎಂದ ಶೆಟ್ಟರ್, ಉಕಕ್ಕೆ ಅನ್ಯಾಯವಾಗಿದೆ ಎಂದು ನಾಡೋಜ ಪಾಟೀಲ ಪುಟ್ಟಪ್ಪ ಸಹ ಧ್ವನಿ ಎತ್ತಿದ್ದಾರೆ ಎಂದರು.

Reach Count: 
1