E.g., 25/07/2021
Public News

Subject ಹುಬ್ಬಳ್ಳಿ: ನಾನು ಫ್ರಂಟ್ ರನ್ನರ್ ಅಲ್ಲ ಬ್ಯಾಕ್ ರನ್ನರ್ ಅಲ್ಲ: ಜೋಶಿ ಸ್ಪಷ್ಟನೆ...!

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಪಟ್ಟಕ್ಕಾಗಿ ನಾನು ಫ್ರಂಟ್‌ ರನ್ನರ್ ಅಲ್ಲ, ಬ್ಯಾಕ್ ರನ್ನರ್ ಕೂಡ ಅಲ್ಲ.
ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರು ನನ್ನ ಜೊತೆಗೆ ಯಾವುದೇ ಚರ್ಚೆ ಮಾಡಿಲ್ಲ. ಯಡಿಯೂರಪ್ಪ ಅವರಿಗೆ ರಾಜೀನಾಮೆ ಕೊಡಿ ಎಂದು ಹೇಳಿದ್ದಾರೊ, ಬಿಟ್ಟಿದ್ದಾರೊ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು..

ಸಿಎಂ ರೇಸ್ ನಲ್ಲಿ ಕೇಂದ್ರ ಸಚಿವ ಜೋಶಿಯವರ ಹೆಸರು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮುಖ್ಯಮಂತ್ರಿಗಳು ಈಗಾಗಲೇ ತಮ್ಮ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ...
Category: Politics
Post date: 24-07-2121

Public News
PublicNext--552801--node-nid
Subject ಉದ್ಯಮಿಯಿಂದ 5 ಲಕ್ಷ ರೂ.ಗೆ ಡಿಮ್ಯಾಂಡ್; ಕ್ರೈಂ ಇನ್‌ಸ್ಪೆಕ್ಟರ್ ಸೇರಿ ಮೂವರ ವಿರುದ್ಧ ಕೇಸ್‌

ಬೆಂಗಳೂರು: ಉದ್ಯಮಿ ಗೋಪಿನಾಥ್ ಎಂಬುವರಿಂದ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ಆರೋಪದ ಮೇಲೆ ವೈಟ್ ಫೀಲ್ಡ್ ಕ್ರೈಂ ಇನ್​ಸ್ಪೆಕ್ಟರ್ ರೇಣುಕಾ, ಎಸ್‌ಐ ಗಣೇಶ್ ಹಾಗೂ ಕಾನ್ಸ್‌ಟೇಬಲ್ ಹೇಮಂತ್ ವಿರುದ್ಧ ಎಸಿಬಿಯಲ್ಲಿ ಎಫ್‌ಐಆರ್​​ ದಾಖಲಾಗಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿಸಬಾರದು ಎಂದರೆ 10 ಲಕ್ಷ ರೂ. ಕೊಡಬೇಕು ಎಂದು ಡಿಮ್ಯಾಂಡ್ ಮಾಡಿದ್ದರು ಎಂದು ಆರೋಪ ಕೇಳಿ ಬಂದಿದೆ. ಉದ್ಯಮಿ ಗೋಪಿನಾಥ್​​ ಅವರನ್ನು ಬ್ಯಾಂಕಿಗೆ ಕರೆದೊಯ್ದು ಬಲವಂತವಾಗಿ 5 ಲಕ್ಷ ರೂಪಾಯಿಗಳನ್ನ ಡ್ರಾ ಮಾಡಿಸಿ. ಉಳಿದ 5 ಲಕ್ಷ ರೂಪಾಯಿಗೆ ಸಮಯ ನೀಡಿ ಕಿರುಕುಳ ನೀಡುತ್ತಿದ್ದರು ಎಂದು ಗೋಪಿನಾಥ್​ ಎಸಿಬಿಗೆ ದೂರು ನೀಡಿದ್ದರು. ಇದರ...
Category: Crime
Post date: 24-07-2121

Kshetra Samachara

Subject ಅಳ್ನಾವರ: ದಾಖಲೆಯ ಪುಷ್ಯ ಮಳೆಗೆ ಅಳ್ನಾವರ ತತ್ತರ,ಬೆನಚಿ ಹಳ್ಳ ಸಂಪೂರ್ಣ ನಾಶ

ವರದಿ: ಮಹಾಂತೇಶ ಪಠಾಣಿ

ಅಳ್ನಾವರ: ಎಲ್ಲೆಡೆ ಮಳೆಯ ಪ್ರಮಾಣ ಹೆಚ್ಚಾಗಿದ್ದು ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯು ಭಾರಿ ಅನಾಹುತವನ್ನೇ ಸೃಷ್ಟಿಸಿದೆ.ಅಳ್ನಾವರ ದಿಂದ ಬೆನಚಿ ಮಾರ್ಗವಾಗಿ ಧಾರವಾಡಕ್ಕೆ ಹೋಗುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು,ಬೆನಚಿ ಸೇತುವೆ ಹಾಳಾಗಿ ಸಂಪರ್ಕ ಕಳೆದು ಕೊಂಡಿದೆ.

ಹುಲಿಕೇರಿಯ ಇಂದಿರಮ್ಮ ಕೆರೆಯ ನೀರು,ಅಳ್ನಾವರದ ಡೌಗಿನಾಲಾ ಹಳ್ಳದ ನೀರು ಎಲ್ಲವೂ ಬೆನಚಿ ಹಳ್ಳಕ್ಕೆ ಸೇರುವುದರಿಂದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹಳ್ಳ ತುಂಬಿ ಹರಿದಿದೆ.ನೀರಿನ ಹೊಡೆತಕ್ಕೆ ಹಳ್ಳದ ಸೇತುವೆ ಹಾಳಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿದೆ.ಇಂದು ಮಳೆ ನಿಂತಿದ್ದು...
Category: Nature
Post date: 24-07-2121
City: Hubballi-Dharwad

Public News
PublicNext-497117-552821-Accident-node
Subject ಬಂದೂಕಿನ ಜೊತೆ ಸೆಲ್ಫಿ ಹಾರಿತು ಗುಂಡು, ಹೋಯಿತು ಪ್ರಾಣ!

ಲಕ್ನೋ: ಇತ್ತಿಚೆಗೆ ಅದೇನ ಕಂಡ್ರು ಸೆಲ್ಪಿ ತೆಗೆದುಕೊಳ್ಳುವ ಹುಚ್ಚು ಸಾಮಾನ್ಯವಾಗಿದೆ. 26 ವರ್ಷದ ನವವಾಹಿತೆಯೊಬ್ಬಳು ಬಂದೂಕಿನ ಜತೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸದಲ್ಲಿ ಗುಂಡು ಹಾರಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.

ತನ್ನ ಮಾವನ ಸಿಂಗಲ್ ಬ್ಯಾರೆಲ್ ಬಂದೂಕಿನೊಂದಿಗೆ ಮಹಿಳೆ ಗುರುವಾರ ಸಂಜೆ ಸೆಲ್ಫಿ ಕ್ಲಿಕ್ಕಿಸುವಾಗ ಈ ದುರಂತ ನಡೆದಿದೆ. ಸೆಲ್ಫಿಗೆ ಪೋಸ್ ನೀಡುವಾಗ ಬಂದೂಕಿನಲ್ಲಿ ಗುಂಡುಗಳು ತುಂಬಿರುವುದು ರಾಧಿಕಾ ಗುಪ್ತಾ ಅವರಿಗೆ ಗೊತ್ತಿರಲಿಲ್ಲ. ಹೀಗಾಗಿ ಅವರು ನಳಿಕೆಯನ್ನು ಎಳೆದಿದ್ದರು. ಗುಂಡು ಅವರ ಕುತ್ತಿಗೆಯನ್ನು ಹೊಕ್ಕಿತ್ತು. ಕೂಡಲೇ ಅವರನ್ನು...
Category: Accident
Post date: 24-07-2121

Kshetra Samachara

Subject ಹುಬ್ಬಳ್ಳಿ: ನ್ಯಾಯ ಬೆಲೆ ಅಂಗಡಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ..!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ನವನಗರದಲ್ಲಿರುವ ನ್ಯಾಯ ಬೆಲೆ ಅಂಗಡಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇನ್ನೂ ನ್ಯಾಯ ಬೆಲೆ ಅಂಗಡಿಯ ದಾಸ್ತಾನು ಬಗ್ಗೆ ಹಾಗೂ ಆಹಾರ ವಿತರಣೆ ಬಗ್ಗೆ ಅಧಿಕಾರಿಗಳೊಂದಿಗೆ ಹಾಗೂ ಸಿಬ್ಬಂದಿ ಜೊತೆಗೆ ಸಮಾಲೋಚನೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇನ್ನೂ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು. ಇದೇ ವೇಳೆ ನವನಗರದ ಫಲಾನುಭವಿಗಳ ಜೊತೆಗೆ ಮಾತನಾಡಿ ಸಮಸ್ಯೆಗಳನ್ನು ಆಲಿಸಿದರು.


Category: Infrastructure
Post date: 24-07-2121
City: Hubballi-Dharwad
Kshetra Samachara

Subject ಕಲಘಟಗಿ: ದ್ಯಾಮಾಪುರ ಕೆರೆ ತುಂಬಿ ಹರಿದು ಅಪಾರ ಬೆಳೆ ಹಾನಿ: ರೈತ ತತ್ತರ

ಕಲಘಟಗಿ: ತಾಲೂಕಿನ ದ್ಯಾಮಾಪುರ ಗ್ರಾಮದಲ್ಲಿ ಹಿರೇಕೆರೆ ತುಂಬಿ ಹರಿದು ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಸತತ ಸುರಿದ ಮಳೆಗೆ ಕೆರೆ ತುಂಬಿ ಹರಿಯುತ್ತಿದ್ದು ಸೋಯಾ, ಭತ್ತ,ಗೋವಿನ ಜೋಳದ ಬೆಳೆ ಹಾನಿಯಾಗಿದೆ.
ಇದರಿಂದ ರೈತರರಿಗೆ ಆರ್ಥಿಕ ನಷ್ಟವಾಗಿದೆ.


Category: Nature, Agriculture
Post date: 24-07-2121
City: Hubballi-Dharwad
Kshetra Samachara
PublicNext-497116-552820-Hubballi-Dharwad-Cultural-Activity-Others-node
Subject ಅಣ್ಣಿಗೇರಿ : ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ 887 ನೇ ಜಯಂತಿ

ಅಣ್ಣಿಗೇರಿ : ತಾಲೂಕಿನ ಶಲವಡಿ ಗ್ರಾಮದಲ್ಲಿ ಶನಿವಾರ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ 887 ನೇ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು.

ಇನ್ನು ಕಾರ್ಯಕ್ರಮದಲ್ಲಿ ಮಂಜುನಾಥ್ ಹಡಪದ್ ಅವರು ಮಾತನಾಡಿ, ಕಳೆದ ಒಂಬತ್ತು ಶತಮಾನಗಳಿಂದ ಸತತ ಜನರ ಸೇವೆಯನ್ನು ಮಾಡುತ್ತಾ ಬಂದಿರುವಂತಹ ಹಡಪದ ಅಪ್ಪಣ್ಣನವರ ಸಮಾಜಕ್ಕೆ ಗ್ರಾಮದಲ್ಲಿ ಸಮುದಾಯ ಭವನ ಹಾಗೂ ದೇವಸ್ಥಾನಗಳು ಇಲ್ಲಾ, ಹೀಗಾಗಿ ಸಮುದಾಯ ಭವನ ಕಟ್ಟಿಸಿಕೊಳ್ಳುವುದಕ್ಕಾಗಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಯಾವುದಾದರೂ ಒಂದು ಜಾಗೆಯನ್ನು ಸಮಾಜಕ್ಕೆ ಕೊಡಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓಗಳಲ್ಲಿ ಮನವಿ ಮಾಡಿಕೊಂಡಿದ್ದೆವು. ಈ...
Category: Cultural Activity, Others
Post date: 24-07-2121
City: Hubballi-Dharwad

Kshetra Samachara

Subject ಹುಬ್ಬಳ್ಳಿ: ನೀರಾಗ ಏರಿಯಾನೊ.. ಏರಿಯಾದಾಗ ನೀರೋ..

ಹುಬ್ಬಳ್ಯಾಗ 1989 ರಾಗ ಚೇತನಾ ಕಾಲೋನಿ ಅಸ್ಥಿತ್ವಕ್ಕೆ ಬಂದಿತಿ ಅವತ್ತ ಅಲ್ಲಿ 6 ಇಂಚಿಂದ ಒಳಚರಂಡಿ ಮಾಡಿದ್ರ ಅವಂತ್ತಿಂದ ಇವತ್ತಿನಮಟಾ ಅದರ ನಿರ್ವಹಣೆ ಮಾಡದಕ್ಕ ಅದ ಮುಚ್ಚಿ ಹೋಗೇತಿ ಇನ್ನಿ ಏರಿಯಾದಾಗ ಒಂದ್ ಗಟ್ಟಾರ ಇಲ್ಲಾ ಮಳಿ ಬಂತಂದ್ರ ಚೇತನಾ ಕಾಲೋನಿ ಸಮುದ್ರ ಆದಂ ಆಕೇತ ನೋಡ್ರಿ..

ಬರೋಬ್ಬರಿ 1600 ಮಂದಿ ಇರು ಏರಿಯಾದಾಗ ಹಿಂಗ್ ನೀರ ನಿಂತ ಬಿಡತೈತಿ ಮುಂದಕ ಹೋಗಾಕ ದಾರೆ ಇಲ್ಲ ನೋಡಿ ಇನ್ನ ಕಾರ್ಪೊರೇಷನ್ ಕಂಪ್ಲೇಂಟ್ ಮಾಡಿದ್ರೆ ಅವರ ಕಿಮ್ಮತ್ತ ಕೊಡವಲ್ರ..

ಈ ಭಾಗದ ಶಾಸಕ ಅದ ಜಗದೀಶ ಶೆಟ್ಟರ್ ಚುನಾವಣೆ ಇದ್ದಾಗ ಹ್ಯಾಡ್ ಬಿಲ್ ಹಂಚಾಕ ಬರೋದ ಬಿಟ್ರ ಈ ಕಡೆ ಹಣಿಕೆ ಹಾಕಂಗಿಲ್ಲ ಅವ್ರ.....
Category: Infrastructure, Nature, Human Stories
Post date: 24-07-2121
City: Hubballi-Dharwad

Public News

Subject ಕುಂದಗೋಳ: ಸರ್ಕಾರಿ ರಜೆ ತಿಳಿಯದೆ ಕಿಟ್'ಗಾಗಿ ಬಂದ ಕಾರ್ಮಿಕರು ಬರಿಗೈಲಿ ವಾಪಾಸ್

ಕುಂದಗೋಳ: ಕೊರೊನಾ ಸಂಕಷ್ಟದ ಕಾರ್ಮಿಕರಿಗೆ ನೀಡುತ್ತಿರುವ ದಿನಸಿ ಕಿಟ್ ಜಾತ್ರೆ ಇವತ್ತು ಮತ್ತೋಂದು ಅವಾಂತರ ಮಾಡಿದ್ದು, ಕಿಟ್ ಪಡೆಯಲು ಇಂದು ನಾಲ್ಕನೇ ಶನಿವಾರ ಸರ್ಕಾರಿ ರಜೆ ಎಂದು ತಿಳಿಯದೇ ಹಳ್ಳಿಗಳಿಂದ ಪಟ್ಟಣಕ್ಕೆ ಬಂದ್ ಕಾರ್ಮಿಕರು ಸರದಿ ಸಾಲಲ್ಲಿ ನಿಂತು ಮನೆಗೆ ವಾಪಾಸ್ಸಾದರು.

ಕಳೆದ ಎರೆಡು ದಿನಗಳಿಂದ ಮಾನಪ್ಪನ ಪ್ಲಾಟ್'ನಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಕಾರ್ಮಿಕರಿಗೆ ಕಿಟ್ ನಡೆದಿದ್ದು ಇಂದು ನಾಲ್ಕನೇ ಶನಿವಾರ ನಾಳೆ ಭಾನುವಾರ ರಜೆ ಮರಳಿ ಸೋಮವಾರ ಕಿಟ್ ನೀಡುವುದಾಗಿ ಅಧಿಕಾರಿಗಳು ತಿಳಿಸಿ ಇಂದು ಸ್ಥಳಕ್ಕೆ ಹಾಜರಾಗಿಲ್ಲ.

ಆದ್ರೇ, ಈ ಹಳ್ಳಿಗಳಲ್ಲಿ ಲೇಬರ್ ಕಾರ್ಡ್...
Category: Infrastructure, Health & Fitness, COVID
Post date: 24-07-2121

Pages