E.g., 25/07/2021
Kshetra Samachara

Subject ಉಡುಪಿ: ಪಬ್ಲಿಕ್ ನೆಕ್ಸ್ಟ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ: ಹಿರಿಯ ವಕೀಲ ಪ್ರಮೋದ್ ಹಂದೆ

ಉಡುಪಿ: ಪಬ್ಲಿಕ್ ನೆಕ್ಸ್ಟ್ ಕಳೆದ ಒಂದು ವರ್ಷದಿಂದ ಚೆನ್ನಾಗಿ ಮೂಡಿಬರುತ್ತಿದೆ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಬೇಕು.ಬಡವರ ಶೋಷಿತರ ದನಿಯಾಗಿ ಕೆಲಸ ಮಾಡಬೇಕು. ಜನರ ಮತ್ತು ಸರಕಾರದ ಕಣ್ಣು ತೆರೆಸುವ ಕೆಲಸವನ್ನು ಸಂಸ್ಥೆ ಮಾಡಬೇಕು. ಸರಕಾರ ತಪ್ಪು ಮಾಡಿದಾಗ ಎಚ್ಚರಿಸುತ್ತಾ ಇರಬೇಕು. ಈ ಸಂಸ್ಥೆಗೆ ಒಳ್ಳೆಯದಾಗಲಿ ಎಂದು ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಹಂದೆ ಪಬ್ಲಿಕ್ ನೆಕ್ಸ್ಟ್ ಗೆ ಶುಭಹಾರೈಸಿದ್ದಾರೆ.


Category: Greetings
Post date: 24-07-2121
City: Udupi, Mangalore
Kshetra Samachara

Subject ಉಡುಪಿ: ವಕೀಲರ ಸಂಘದ ವತಿಯಿಂದ ಹೈಕೋರ್ಟ್ ನ್ಯಾಯಮೂರ್ತಿಗೆ ಸನ್ಮಾನ, ಡೈರೆಕ್ಟರಿ ಬಿಡುಗಡೆ

ಉಡುಪಿ : ಜಿಲ್ಲಾ ವಕೀಲರ ಸಂಘದ ವತಿಯಿಂದ ಉಡುಪಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ಈ ಹಿಂದೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಗಿದ್ದ ಇದೀಗ ಹೈಕೋರ್ಟ್ ನ್ಯಾಯಮೂರ್ತಿ ಆಗಿರುವ ಶಿವಶಂಕರ್ ಬಿ. ಅಮರಣ್ಣವರ್ ಅವರನ್ನು ಸನ್ಮಾನಿಸಲಾಯಿತು.ಇದೇ ವೇಳೆ ವಕೀಲರ ಡೈರೆಕ್ಟರಿ- 2021 ಬಿಡುಗಡೆಗೊಂಡಿತು.

ಉಡುಪಿ ಜಿಲ್ಲೆಯ ನ್ಯಾಯಾಲಯಗಳಲ್ಲಿ ಒಟ್ಟು 35000 ಕೇಸುಗಳು ಇತ್ಯರ್ಥಗೊಳ್ಳಲು ಬಾಕಿ ಇವೆ. ಇವುಗಳನ್ನು ಆದಷ್ಟು ಶೀಘ್ರವೇ ಇತ್ಯರ್ಥಗೊಳಿಸಲು ಪ್ರಯತ್ನ ಮಾಡಬೇಕಾಗಿದೆ ಎಂದು ರಾಜ್ಯ ಹೈಕೋರ್ಟ್ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಹೇಳಿದರು.
ಅವರು ಡೈರೆಕ್ಟರಿ...
Category: Cultural Activity
Post date: 24-07-2121
City: Udupi, Mangalore

Kshetra Samachara

Subject ಮಂಗಳೂರು: ಇಹಲೋಕ ತ್ಯಜಿಸಿದ ಪೊಲೀಸ್ ಶ್ವಾನ ಸುಧಾ...

ಮಂಗಳೂರು: ಮಂಗಳೂರು ನಗರದ ಪೊಲೀಸ್ ಶ್ವಾನ ದಳದ ಸ್ನಿಫರ್ ಡಾಗ್ ಸುಧಾ ಇಂದು ಉಸಿರು ನಿಲ್ಲಿಸಿದೆ. ಮಂಗಳೂರು ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ನೇತೃತ್ವದಲ್ಲಿ ಸಕಲ ಪೊಲೀಸ್ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. 2011 ರಂದು ಹುಟ್ಟಿದ ಈ ಶ್ವಾನ ಸುಧಾ 2012 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿತ್ತು. ಡಾಬರ್ ಮೇನ್ ಪಿಂಚರ್ ಜಾತಿಗೆ ಸೇರಿದ ಈ ನಾಯಿಗೆ ಹತ್ತು ವರ್ಷ ಮೂರು ತಿಂಗಳು ವಯಸ್ಸಾಗಿತ್ತು. ಕಳೆದ ಐದು ತಿಂಗಳ ಹಿಂದೆ ಸುಧಾಳಿಗೆ ಎದೆಭಾಗದಲ್ಲಿ ಕ್ಯಾನ್ಸರ್ ಟ್ಯೂಮರ್ ಆಗಿತ್ತು. ಅದಕ್ಕೆ ಚಿಕಿತ್ಸೆ ಕೂಡಾ ಮಾಡಲಾಗಿತ್ತು. ಆ ಬಳಿಕ ಆರೋಗ್ಯದಲ್ಲಿ...
Category: Human Stories
Post date: 24-07-2121
City: Udupi, Mangalore

Kshetra Samachara

Subject ಕುಂದಗೋಳ : ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ

ಕುಂದಗೋಳ : ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಕುಂದಗೋಳ ತಾಲೂಕಿನ ಪಶುಪತಿಹಾಳ ದೇವಸ್ಥಾನದ ಆವರಣದಲ್ಲಿ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಹಡಪದ ಅಪ್ಪಣ್ಣವರ ಕುರಿತು ಸರ್ಕಾರಿ ಕಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮಾಂಡ್ರೆ ಗುರುಗಳು ಮಾತನಾಡಿ ಮಕ್ಕಳಿಗೆ ಬೋಧನೆ ಮಾಡಿದರು ಹಾಗೂ ಸಮಾಜದ ಎಲ್ಲ ಮುಖಂಡರು ಗ್ರಾಮದ ಹಿರಿಯರು ಸಾರ್ವಜನಿಕರು ಉಪಸ್ಥಿತರಿದ್ದರು.


Category: Cultural Activity
Post date: 24-07-2121
City: Hubballi-Dharwad
Kshetra Samachara

Subject ನವಲಗುಂದ : ಶಿರೂರ ಗ್ರಾಮಕ್ಕೆ ಭೇಟಿ ನೀಡಿ ಬೆಳೆಹಾನಿ ವೀಕ್ಷಿಸಿದ ಶಾಸಕ ಮುನೇನಕೊಪ್ಪ

ನವಲಗುಂದ : ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದ ಶಿರೂರ ಗ್ರಾಮದ ತುಪ್ಪರಿ ಹಳ್ಳದಲ್ಲಿ ಉಂಟಾದ ಪ್ರವಾಹದಿಂದ ರೈತರ ಜಮೀನುಗಳಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದ್ದು, ಈ ಹಿನ್ನಲೆ ಶನಿವಾರ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ, ಬೆಳೆಹಾನಿಯಾಗಿರುವ ಕುರಿತು ಸಮಗ್ರ ಮಾಹಿತಿ ಪಡೆದು ತುರ್ತು ಪರಿಹಾರ ಕ್ರಮ ಜರುಗಿಸುವಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರರು, ಗ್ರಾಮದ ಗುರು-ಹಿರಿಯರು, ರೈತರು, ಮುಖಂಡರು, ವಿವಿಧ...
Category: Politics
Post date: 24-07-2121
City: Hubballi-Dharwad

Kshetra Samachara

Subject ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಕಾರಿಡಾರ್ ಮೇಲೆ ಹತ್ತಿದ ಚಿಗರಿ...!

ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಬಿ.ಆರ್.ಟಿ.ಎಸ್ ಬಸ್ ಕಾರಿಡಾರ್ ಮೇಲೆ ಹತ್ತಿದ ಘಟನೆ ಹುಬ್ಬಳ್ಳಿಯ ನವೀನ್ ಹೊಟೇಲ್ ಪಕ್ಕದಲ್ಲಿರುವ ಶೆಲ್ ಪೆಟ್ರೋಲ್ ಬಂಕ ಬಳಿ ನೆಡೆದಿದೆ.

ಅವಳಿ ನಗರದಲ್ಲಿ ಸಂಚರಿಸುವ ಬಿ.ಆರ್.ಟಿ.ಎಸ್ ಬಸ್ ಒಂದಿಲ್ಲೊಂದು ಅವಾಂತರ ಸೃಷ್ಟಿ ಮಾಡುತ್ತಲೇ ಇದೆ. ಇದೀಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಕಾರಿಡಾರ್ ಮೇಲೆ ಹತ್ತಿಸಿರುವ ಘಟನೆ ನೆಡೆದಿದೆ.

ಹುಬ್ಬಳ್ಳಿಯ ಉಣಕಲ್ ಕೆರೆಯ ಬಳಿ ಇರುವ ಶೆಲ್ ಪೆಟ್ರೋಲ್ ಬಂಕ ಹತ್ತಿರ ಈ ಘಟನೆ ನೆಡೆದಿದ್ದು, ಬಸ್ ಸರ್ವಿಸ್ ಗೆ ತೆಗೆದುಕೊಂಡು ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಾರಿಡಾರ್ ಮೇಲೆ ಏರಿದೆ. ಅದೃಷ್ಟವಶಾತ್...
Category: Accident
Post date: 24-07-2121
City: Hubballi-Dharwad

Public News
PublicNext--553188--node-nid
Subject ಕಾರವಾರ: ಕದ್ರಾ ಡ್ಯಾಂನಿಂದ ಏಕಾಏಕಿ 2 ಲಕ್ಷ ಕ್ಯೂಸೆಕ್ಸ್ ನೀರು ಹೊರಬಿಟ್ಟ ಅಧಿಕಾರಿಗಳು- 18 ಮನೆಗಳು ನೆಲಸಮ

ಕಾರವಾರ: ಕದ್ರಾ ಜಲಾಶಯದಿಂದ ಏಕಾಏಕಿ 2 ಲಕ್ಷ ಕ್ಯೂಸೆಕ್ಸ್ ನೀರು ಹೊರಬಿಟ್ಟ ಪರಿಣಾಮ 18 ಮನೆಗಳು ನೆಲಸಮವಾದ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕದ್ರಾ ಜಲಾಶಯ ಬಹತೇಕ ತುಂಬಿದೆ. ಪರಿಣಾಮ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿದೆ ಜಲಾಶಯದಿಂದ 2 ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರ ಬಿಟ್ಟಿದ್ದು, ಜಲಾಶಯ ಪಾತ್ರದ ಮನೆಗಳಿಗೆ ನೀರು ಹೊಕ್ಕಿದ್ದು, ಕ್ಷಣಾರ್ಧದಲ್ಲೆ ಮನೆಗಳು ಜಲಾವೃತಗೊಂಡು ನೆಲಕಚ್ಚಿವೆ.

ಇನ್ನು ಬೆಳಗ್ಗೆ ನೀರು ಇಳಿದ ಮೇಲೆ ಮನೆಗಳ ಸ್ಥಿತಿ ಕಂಡು ನಿವಾಸಿಗಳು...
Category: Nature
Post date: 24-07-2121

Public News
PublicNext--553168--node-nid
Subject ರಾಜ್ಯ ಉಳಿಸಬೇಕಾದ್ರೆ ಕಾಂಗ್ರೆಸ್ಸನ್ನು ಕಿತ್ತೊಗೆಯಬೇಕು: ಸಿದ್ದರಾಮಯ್ಯ ಮತ್ತೆ ಎಡವಟ್ಟು

ತುಮಕೂರು: ರಾಜ್ಯವನ್ನು ಉಳಿಸಬೇಕಾದರೆ ಕಾಂಗ್ರೆಸ್ ಪಕ್ಷವನ್ನು ತೆಗೆಯಬೇಕು ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ.

ನಗರದಲ್ಲಿ ಇಂದು ಐದು ಜಿಲ್ಲೆಗಳ ಪಕ್ಷದ ಮುಖಂಡರ ಸಭೆ ನಡೆಸಲಾಯಿತು. ಈ ವೇಳೆ ಮಾತಿನ ಬರದಲ್ಲಿ ಸಿದ್ದರಾಮಯ್ಯ ಅವರು ಎರಡು ಬಾರಿ ‘ಕಾಂಗ್ರೆಸ್ ಪಕ್ಷವನ್ನು ತೆಗೆಯಬೇಕು’ ಎಂದರು. ಸಿದ್ದರಾಮಯ್ಯ ಅವರ ಮಾತು ಕೇಳಿ ಸಭೆಯಲ್ಲಿದ್ದವರು ಕಕ್ಕಾಬಿಕ್ಕಿಯಾದರು. ಇದು ಸಿದ್ದರಾಮಯ್ಯ ಅವರ ಗಮನಕ್ಕೆ ಬರಲಿಲ್ಲ. ಕೊನೆಗೆ ಎಸ್.ಆರ್.ಪಾಟೀಲ್ ಅವರು ಕಾಂಗ್ರೆಸ್ ಅಲ್ಲ ಬಿಜೆಪಿ ತೆಗೆಯಬೇಕು ಎಂದು ಎಚ್ಚರಿಸಿದರು. ಬಳಿಕ ಸಾವರಿಸಿಕೊಂಡ ಸಿದ್ದರಾಮಯ್ಯ, ತಮ್ಮ...
Category: Politics
Post date: 24-07-2121

Public News
PublicNext--553140--node-nid
Subject ಬಿಗ್‌ ಅನೌನ್ಸ್‌ಮೆಂಟ್: CBSE 10ನೇ ತರಗತಿ ಪರೀಕ್ಷೆ ಫಲಿತಾಂಶ ಜು.25ರ ಬಳಿಕ ಪ್ರಕಟ

ನವದೆಹಲಿ: ಬಹುನಿರೀಕ್ಷಿತ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10ನೇ ತರಗತಿ ಫಲಿತಾಂಶವನ್ನು ಜುಲೈ 25ರ ಬಳಿಕ ಪ್ರಕಟವಾಗಲಿದೆ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಇಂದು ಫಲಿತಾಂಶ ಪ್ರಕಟಿಸಲಿದೆ ಎಂದು ವರದಿಯಾಗಿತ್ತು. ಆದರೆ ಕಾರಣಾಂತರಗಳಿಂದ ಫಲಿತಾಂಶ ಪ್ರಕಟಣೆ ತಡೆಹಿಡಿಯಲಾಗಿದ್ದು, ಯಾವ ದಿನದಂದು ಫಲಿತಾಂಶ ಪ್ರಕಟವಾಗಲಿದೆ ಎಂದು ನಿರ್ದಿಷ್ಟ ದಿನಾಂಕ ತಿಳಿಸಿಲ್ಲ.


Category: Education
Post date: 24-07-2121

Pages