E.g., 25/07/2021
Public News
PublicNext--552336--node-nid
Subject ಸ್ಥಿರತೆ ಕಾಯ್ದುಕೊಂಡ ಪೆಟ್ರೋಲ್, ಡೀಸೆಲ್ ದರ!

ದೆಹಲಿ: ತೈಲ ಬೆಲೆ ಏರಿಕೆಯಿಂದ ಕಂಗಾಲಾದ ಜನತೆಗೆ ಸದ್ಯ ಬೆಲೆ ಎರಿಕೆಯ ಬಿಸಿ ಸದ್ಯಕ್ಕೆ ತಟ್ಟಿಲ್ಲ. ದಾಖಲೆಯ ದರದಲ್ಲಿಯೇ ಮುಂದುವರೆದಿದೆ.

ಸರ್ಕಾರಿ ತೈಲ ಕಂಪನಿಗಳು ಇಂದು (ಜುಲೈ 24 , ಶನಿವಾರ) ಕೂಡ ಪೆಟ್ರೋಲ್ (Petrol Price) ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಹೀಗಾಗಿ ಸತತ ಏಳನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (Diesel Price) ಸ್ಥಿರತೆಯನ್ನು ಕಾಯ್ದುಕೊಂಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿತದ ನಡುವೆ, ದೇಶೀಯ ತೈಲ ಕಂಪನಿಗಳು ಇಂಧನದ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುತ್ತಿಲ್ಲ. ಕಚ್ಚಾ ತೈಲ ಬೆಲೆಗಳ ಇಳಿಮುಖ...
Category: Business
Post date: 24-07-2121

Public News
PublicNext--552312--node-nid
Subject ನಾನು ಪೆಗಾಸಸ್ ಗೂಢಚರ್ಯೆಯ ಸಂಭಾವ್ಯ ಗುರಿ ಅಲ್ಲ: ರಾಹುಲ್ ಗಾಂಧಿ

ದೆಹಲಿ : 'ಇದು ರಾಹುಲ್ ಗಾಂಧಿಯ ಖಾಸಗಿತನದ ವಿಷಯವಲ್ಲ. ಬದಲಿಗೆ ಜನರ ಧ್ವನಿಯನ್ನು ಹತ್ತಿಕ್ಕುತ್ತಿರುವ ವಿಚಾರ. ನಾನು ಪೆಗಾಸಸ್ ಗೂಢಚರ್ಯೆಯ ಸಂಭಾವ್ಯ ಗುರಿ ಅಲ್ಲ. ನನ್ನ ಫೋನ್ ಗಳನ್ನು ಕದ್ದಾಲಿಸುತ್ತಿರುವುದು ನಿಜ' ಎಂದು ಅವರು ಆರೋಪಿಸಿದ್ದಾರೆ.

'ನನ್ನ ಎಲ್ಲಾ ಫೋನ್ ಗಳನ್ನು ಕದ್ದಾಲಿಸಲಾಗುತ್ತಿದೆ. ಗುಪ್ತಚರ ಇಲಾಖೆ ಅಧಿಕಾರಿಗಳು ನನಗೆ ಮತ್ತು ನನ್ನ ಸ್ನೇಹಿತರಿಗೆ ಕರೆ ಮಾಡುತ್ತಾರೆ. ನಿಮ್ಮ ಫೋನ್ ಗಳನ್ನು ಕದ್ದಾಲಿಸುತ್ತಿದ್ದೇವೆ, ಎಚ್ಚರಿಕೆಯಿಂದಿರಿ ಎಂದು ಮಾಹಿತಿ ನೀಡುತ್ತಾರೆ.

ನನ್ನ ಫೋನ್ ಅನ್ನು ಕದ್ದಾಲಿಸುತ್ತಿಲ್ಲ ಎಂಬ ಭ್ರಮೆಯಲ್ಲಿ ನಾನು ಇಲ್ಲ' ಎಂದು ರಾಹುಲ್ ಹೇಳಿದ್ದಾರೆ.

...

Category: Politics
Post date: 24-07-2121
Kshetra Samachara

Subject ಧಾರವಾಡ: ನಿರಂತರ ಮಳೆಗೆ ಧರೆಗುರುಳಿದ ಮರ

ಧಾರವಾಡ: ನಿರಂತರ ಮಳೆಗೆ ಬೃಹದಾಕಾರದ ಮಳೆಯೊಂದು ಧರೆಗುರುಳಿರುವ ಘಟನೆ ಧಾರವಾಡದ ಸಾರಸ್ವತಪುರದ ಬಳಿ ನಡೆದಿದೆ.

ಬುಡ ಸಮೇತ ಈ ಮರ ಧರೆಗುರುಳಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಸ್ತೆ ಮಧ್ಯೆಯೇ ಮರ ಬಿದ್ದಿದ್ದರಿಂದ ಕೆಲ ಹೊತ್ತು ಸಂಚಾರ ಬಂದ್ ಆಗುವುದರ ಜೊತೆಗೆ ವಿದ್ಯುತ್ ಕೂಡ ಕಡಿತಗೊಂಡಿತ್ತು. ಕೂಡಲೇ ಸ್ಥಳಕ್ಕೆ ಬಂದ ಹೆಸ್ಕಾಂ ಹಾಗೂ ಪಾಲಿಕೆ ಸಿಬ್ಬಂದಿ ಮರವನ್ನು ತೆರವುಗೊಳಿಸುವ ಕೆಲಸ ಮಾಡಿದರು.


Category: Nature
Post date: 23-07-2121
City: Hubballi-Dharwad
Public News

Subject ಕ್ರಿಕೆಟ್ ಸ್ಟೈಲ್ ನಲ್ಲಿ ಅಧಿಕಾರ ಸ್ವೀಕರಿಸಿದ ಶಾಸಕ ನವಜೋತ್ ಸಿಂಗ್ ಸಿಧು

ಚಂಡೀಗಢ: ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಶಾಸಕ ನವಜೋತ್ ಸಿಂಗ್ ಸಿಧು ಅಧಿಕಾರ ಸ್ವೀಕರಿಸಿದ ಪರಿ ಎಲ್ಲರ ಗಮನ ಸೆಳೆದಿದೆ. ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಘೋಷಿಸುತ್ತಿದ್ದಂತೆಯೇ ತಮ್ಮ ಕುರ್ಚಿಯಿಂದ ಎದ್ದು, ತಾವು ಸಿಕ್ಸರ್ ಬಾರಿಸಲು ಕ್ರೀಸ್ ನಲ್ಲಿ ಬ್ಯಾಟ್ ಬೀಸುವು ದನ್ನು ನೆನಪಿಸಿಕೊಂಡು, ಎರಡೂ ಕೈಗಳನ್ನು ಸೇರಿ ಬ್ಯಾಟಿಂಗ್ ಶೈಲಿಯನ್ನು ಅನುಕರಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, 'ವಿರೋಧಿಸುವವರು ನನ್ನನ್ನು ಇನ್ನಷ್ಟು ಉತ್ತಮಗೊಳಿಸುತ್ತಾರೆ' ಎಂದಿದ್ದಾರೆ. ಈ ಮೂಲಕ ಸಿಎಂ ಅಮರಿಂದರ್ ಸಿಂಗ್ ಅವರೊಂದಿಗೆ ಹೊಂದಿಕೊಂಡು ಕೆಲಸ ಮಾಡುವ ಸೂಚನೆ ನೀಡಿದ್ದಾರೆ.


Category: Sports
Post date: 24-07-2121
Kshetra Samachara
PublicNext--552310--node-nid
Subject ಸುರತ್ಕಲ್: ಸಿನಿಮೀಯ ಮಾದರಿಯಲ್ಲಿ ದರೋಡೆ ಆರೋಪಿಗಳ ಬಂಧನ

ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ಹೊನ್ನಕಟ್ಟೆ ಗ್ರಾಮಸಂಘ ಬಳಿಯ ಮಿತ್ತೋಟ್ಟು ಕಾಲನಿ ಎಂಬಲ್ಲಿ ಕಳೆದ ದಿನಗಳ ಹಿಂದೆ ಸುಮತಿ (40) ಎಂಬ ಮಹಿಳೆಯ ಮನೆಗೆ ಸಿನಿಮೀಯ ಮಾದರಿಯಲ್ಲಿ ಹಾಡುಹಗಲೇ ನುಗ್ಗಿ 32 ಗ್ರಾಮ್ ನ ಚಿನ್ನದ ಕರಿಮಣಿ ಸರ ದರೋಡೆ ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಶಿವಮೊಗ್ಗ ಮೂಲದ ಸುರತ್ಕಲ್ ಕೃಷ್ಣಾಪುರ ಹಿಲ್ ಸೈಡ್ ನಿವಾಸಿ ವಿನಯ ಕುಮಾರ್ (35) ಹಾಗೂ ಕಾಟಿಪಳ್ಳ 2ನೇ ಬ್ಲಾಕ್ ನಿವಾಸಿ ಮಣಿ (35) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಚಿನ್ನದ ಕರಿಮಣಿ ಸರ, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ...
Category: Crime
Post date: 24-07-2121
City: Udupi, Mangalore

Public News

Subject ಮೊಮ್ಮಗಳು ಜೀನ್ಸ್ ಪ್ಯಾಂಟ್ ಹಾಕ್ತಾಳೆಂಬ ಕಾರಣಕ್ಕೆ ಕೊಂದೇ ಬಿಟ್ಟರು

ಡಿಯೋರಿಯಾ(ಉತ್ತರ ಪ್ರದೇಶ): ಜೀನ್ಸ್ ಪ್ಯಾಂಟ್ ಹಾಕ್ತಾಳೆ ಎಂಬ ಕಾರಣಕ್ಕೆ ಬಾಲಕಿಯನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಸೇತುವೆಯ ಕೆಳಗೆ ನೇಣು ಹಾಕಿಕೊಂಡಿದ್ದ ಸ್ಥಿತಿಯಲ್ಲಿ 17 ವರ್ಷದ ಬಾಲಕಿಯ ದೇಹವು ಒಂದು ಸಂಚಲವನ್ನು ಸೃಷ್ಟಿಸಿತ್ತು. ಬಾಲಕಿಯ ಜೀವನಶೈಲಿಯನ್ನು ಇಷ್ಟಪಡದ ಬಾಲಕಿಯ ಅಜ್ಜ ಮತ್ತು ಚಿಕ್ಕಪ್ಪ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯಕ್ಕೆ ಸಂಭಂದಿಸಿದಂತೆ 17 ವರ್ಷದ ಅಪ್ರಾಪ್ತ ಬಾಲಕಿ ತನ್ನ ತಾಯಿಯೊಂದಿಗೆ ಇತ್ತೀಚೆಗೆ ಡಿಯೋರಿಯಾ ಜಿಲ್ಲೆಯ ತನ್ನ ತಾತನ ಮನೆಗೆ ಬಂದಿದ್ದಳು. ಬಾಲಕಿಯ ತಂದೆ ಪಂಜಾಬ್‌ನಲ್ಲಿ ವಲಸೆ...
Category: Crime
Post date: 23-07-2121

Public News
PublicNext--552314--node-nid
Subject ಮಹಾ ಮಳೆಗೆ 130 ಮಂದಿ ಬಲಿ: ಹಲವರ ರಕ್ಷಣೆ

ಮುಂಬೈ: ಪಶ್ಚಿಮ ಮಹಾರಾಷ್ಟ್ರ ಮತ್ತು ಕೊಂಕಣ ಭಾಗದಲ್ಲಿ ಭಾರಿ ಮಳೆ ಸುರಿದಿದ್ದು, 48 ಗಂಟೆಗಳಲ್ಲಿ 130ಕ್ಕೂ ಅಧಿಕ ಮಂದಿ ಮೃತಪಟ್ಟು ನೂರಾರು ಜನರು ನಾಪತ್ತೆಯಾಗಿದ್ದಾರೆ. ರಾಯಗಢ ಜಿಲ್ಲೆಯ ತಲಾಯಿ ಗ್ರಾಮದಲ್ಲಿ ಭೂಕುಸಿತದಿಂದ 43 ಜನ ಸಾವಿಗೀಡಾಗಿದ್ದಾರೆ. ಹಲವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.

ರಾಯಗಢ, ರತ್ನಗಿರಿ ಜಿಲ್ಲೆಗಳಲ್ಲಿ ಹಳ್ಳಿಗಳಿಗೆ ಸಂರ್ಪಕ ಕಡಿತಗೊಂಡಿದೆ. 24 ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ಇನ್ನೊಂದು ಕಡೆ ಸಂಭವಿಸಿದ ಭೂಕುಸಿತದಲ್ಲಿ ನಾಲ್ಕು ಶವಗಳು ದೊರೆತಿವೆ. ಮತ್ತೊಂದು ಅನಾಹುತದ ಸ್ಥಳದಲ್ಲಿ 30 ಜನರು ಅವಶೇಷದಡಿ ಸಿಲುಕಿರುವ ಶಂಕೆ ಇದೆ. ಸತಾರಾ ಜಿಲ್ಲೆಯ ಮಿರಗಾಂವ್...
Category: Nature
Post date: 24-07-2121

Public News
PublicNext--552308--node-nid
Subject ದಿನ ಭವಿಷ್ಯ : 24.7.2021

ಮೇಷ: ಈ ದಿನ ಅನವಶ್ಯಕ ಖರ್ಚುವೆಚ್ಚಗಳು ಎದುರಾಗಬಹುದು. ಅಪರಿಚಿತರೊಂದಿಗೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದಿರಿ.

ವೃಷಭ: ವೃತ್ತಿಜೀವನದ ಚಿಂತೆ ಬಿಟ್ಟುಬಿಡಿ. ಶುಭಸುದ್ದಿಗಳನ್ನು ಪಡೆಯುತ್ತೀರಿ. ವಿಮಶಿಸದೆ ನಿರ್ಧಾರ ತೆಗೆದುಕೊಳ್ಳಬೇಡಿ.

ಮಿಥುನ: ಕುಟುಂಬದಲ್ಲಿ ಎಲ್ಲ ರೀತಿಯ ಬೆಂಬಲ. ಹಣಕಾಸಿನ ಸ್ಥಿತಿ ಉತ್ತಮವಾಗಲಿದ್ದು, ನಿಮ್ಮಲ್ಲಿನ ಸಂಪತ್ತು ವೃದ್ಧಿಯಾಗುತ್ತದೆ.

ಕಟಕ: ಮನೆಯ ಕಿರಿಯ ಸದಸ್ಯರ ಉದ್ಯೋಗದಲ್ಲಿ ಸ್ಥಿರತೆ. ಕಚೇರಿ ಕೆಲಸದಲ್ಲಿ ಕೆಲವು ಬದಲಾವಣೆ. ಉದ್ಯೋಗದಾತರಿಗೆ ಶುಭ ದಿನ.

ಸಿಂಹ: ಸಂಪಾದನೆ ಹೆಚ್ಚಾಗುತ್ತದೆ. ವೆಚ್ಚ ನಿಯಂತ್ರಿಸಿ. ನಿಮ್ಮ ಸಕಾರಾತ್ಮಕ...
Category: Astrology
Post date: 24-07-2121

Public News
PublicNext--552201--node-nid
Subject ಮುಂದಿನ ಸಲ ದಲಿತ ಸಿಎಂ ಅಂತ ಘೋಷಿಸಿ: ಕಾಂಗ್ರೆಸ್ ಗೆ ಬಿಜೆಪಿ ಸವಾಲು

ಬೆಂಗಳೂರು: ನಾಡಿನ ದಲಿತ ಸಮುದಾಯದ ಬಗ್ಗೆ ಕಾಂಗ್ರೆಸ್ ನಾಯಕರಿಗೆ ನೈಜ ಕಾಳಜಿ ಇದ್ದಲ್ಲಿ ಈಗಲೇ ಮುಂದಿನ ಸಿಎಂ ಅಭ್ಯರ್ಥಿ ದಲಿತ ವ್ಯಕ್ತಿ ಎಂದು ಘೋಷಿಸಲಿ ಎಂದು ಬಿಜೆಪಿ ಸವಾಲು ಎಸೆದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ದಲಿತನೊಬ್ಬ ಮುಖ್ಯಮಂತ್ರಿ ಆಗಬಾರದು ಎಂದು ಜಿ.ಪರಮೇಶ್ವರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದ ಸಿದ್ದರಾಮಯ್ಯ ಈಗ ದಲಿತರ ಬಗ್ಗೆ ಪ್ರೇಮ ತೋರಿಸುತ್ತಿದ್ದಾರೆ ಎಂದು ಕುಟುಕಿದೆ. ಬಿಜೆಪಿ ಮುಂದಿನ ಮುಖ್ಯಮಂತ್ರಿಯನ್ನು ದಲಿತ ಸಮುದಾಯಕ್ಕೆ ಸೇರಿದವರನ್ನು ಮಾಡಲಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ಈ ರೀತಿ ಪ್ರತಿಕ್ರಿಯಿಸಿದೆ.


Category: Politics
Post date: 23-07-2121

Pages