E.g., 25/07/2021
Public News
PublicNext--552644--node-nid
Subject ತೃತೀಯಲಿಂಗಿ ರೇಡಿಯೋ ಜಾಕಿ ಸಾವಿನ ಬೆನ್ನಲ್ಲೇ ಆಕೆಯ ಫ್ರೆಂಡ್ ಶವವಾಗಿ ಪತ್ತೆ!

ತಿರುವನಂತಪುರಂ: ಕೇರಳದ ರೇಡಿಯೋ ಜಾಕಿ ಅನನ್ಯ ಕುಮಾರಿ ಅಲೆಕ್ಸ್ ಮೃತದೇಹ ಪತ್ತೆಯಾದ ಕುರಿತು ತನಿಖೆ ಆರಂಭವಾಗಿರುವ ಬೆನ್ನಲ್ಲೇ ಶುಕ್ರವಾರ ಆಕೆಯ ಫ್ರೆಂಡ್ ಜಿಜು ಶವವಾಗಿ ಪತ್ತೆಯಾಗಿದ್ದಾರೆ. ಮರಾಡು ಪೊಲೀಸ್ ಠಾಣಾಧಿಕಾರಿಗಳ ಪ್ರಕಾರ, ಜಿಜು ಮೃತದೇಹ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡ ತನಿಖೆ ಆರಂಭಿಸಿದ್ದಾರೆ.

ಅನನ್ಯ ಸಾವಿನ ಸುದ್ದಿ ಕೇಳಿ ಜಿಜು ತುಂಬಾ ಬೇಸರಗೊಂಡಿದ್ದ ಎಂದು ತಿಳಿದುಬಂದಿದೆ. ಇನ್ನು ಅನನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿದೆ. ಲಿಂಗ ಪರಿವರ್ತನೆ ಚಿಕಿತ್ಸೆಯ...
Category: Crime
Post date: 24-07-2121

Kshetra Samachara
PublicNext-497056-552626-Hubballi-Dharwad-WaterPower-Nature-Agriculture-node
Subject ನವಲಗುಂದ : 72 ಗಂಟೆಯೊಳಗೆ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಿ ಎಂದು ಶಾಸಕರ ಮನವಿ

ನವಲಗುಂದ : ಕಳೆದ ಎರಡು ಮೂರು ದಿನಗಳಿಂದ ರಾಜ್ಯದಾದ್ಯಂತ ಹೆಚ್ಚು ಮಳೆಯಾಗುತ್ತಿರುವುದರಿಂದ ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕುಗಳ ರೈತರು ಬೆಳೆ ವಿಮೆ ಮಾಡಿಸಿದ್ದಲ್ಲಿ, ಮಳೆಯಿಂದ ಬೆಳೆ ಹಾನಿಯಾಗಿದ್ದರೇ ಅಂತಹ ರೈತರು ಬೆಳೆ ವಿಮೆ ತುಂಬಿದ ರಶೀದಿಯೊಂದಿಗೆ ಅರ್ಜಿಯನ್ನು 72 ಗಂಟೆಯೊಳಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಉಪಸ್ಥಿತರಿರುವ Barati Axa ವಿಮಾ ಸಂಸ್ಥೆಯ ಪ್ರತಿನಿಧಿಗಳಿಗೆ ಸಲ್ಲಿಸಲು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಿಳಿಸಿದ್ದಾರೆ.


Category: WaterPower, Nature, Agriculture
Post date: 24-07-2121
City: Hubballi-Dharwad
Kshetra Samachara

Subject ಹುಬ್ಬಳ್ಳಿ: ರೈಲ್ವೆ ದರ ಹೆಚ್ಚಳ! ಕಂಗಾಲಾದ ಪ್ರಯಾಣಿಕರು, ಕಾರ್ಮಿಕರು

ಹುಬ್ಬಳ್ಳಿ: ತೈಲ ಬೆಲೆ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುವ ಜನರಿಗೆ, ಇದೀಗ ಬಡವರ ಸಾರಿಗೆ ಎಂದೇ ಕರೆಯಿಸಿಕೊಳ್ಳುವ ರೈಲ್ವೆ ಪ್ರಯಾಣದ ದರ ಕೂಡಾ ಹೆಚ್ಚಾಗಿದ್ದು, ದರ ನೋಡಿ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ಹೌದು, ಮೊದಲೇ ಲಾಕ್ ಡೌನ್, ಕೊರೋನಾದಿಂದ ಹಲವಾರು ಜನರು ಕೆಲಸವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿದೆ. ಇದೀಗ ಕೋವಿಡ್ ಎರಡನೇ ತಗ್ಗಿದ ಬೆನ್ನಲ್ಲೇ ಸಾರಿಗೆ ಸಂಪರ್ಕ ಕೂಡಾ ಆರಂಭಗೊಂಡಿದ್ದು, ಅದರ ಜೊತೆಗೆ ರೈಲು ಸಂಚಾರವು ಹಂತ ಹಂತವಾಗಿ ಹೆಚ್ಚಾಗುತ್ತಿದೆ. ಜನರು ಕೆಲಸ ಅರಿಸಿ ಪಟ್ಟಣಗಳತ್ತ ಮುಖ ಮಾಡುತ್ತಾ ಇದ್ದಾರೆ. ಆದರೆ ರೈಲುಗಳನ್ನು ಹೆಚ್ಚಾಗಿ ನಂಬಿ ಕೂಲಿ ಹಾಗೂ ಇನ್ನಿತರ...
Category: Infrastructure
Post date: 24-07-2121
City: Hubballi-Dharwad

Public News

Subject ಬೆಳಗಾವಿ: ಸಿಎಮ್ ಬದಲಾವಣೆ ಮಾಧ್ಯಮಗಳ ಸೃಷ್ಟಿ, ಬಿಎಸ್ವೈ ಸಿಎಮ್ ಆಗಿ ಮುಂದುವರಿಯುತ್ತಾರೆ: ಡಿಸಿಎಮ್ ಕಾರಜೋಳ

ಬೆಳಗಾವಿ: ಸಿಎಂ ಬದಲಾವಣೆ ಇದು ಮಾಧ್ಯಮಗಳ ಸೃಷ್ಟಿಯಿದೆ. ಅಧಿಕೃತವಾಗಿ ನಮ್ಮ ಹೈಕಮಾಂಡ್ ಎಲ್ಲಿಯೂ ಹೇಳಿಲ್ಲ ಅದಕ್ಕೆ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿ ಇರ್ತಾರೆ ಎಂದು  ಡಿಸಿಎಂ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ. ‌

ಇಂದು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರವಾಹ ತಗ್ಗಿಸಲು ಇಂದಿನಿಂದ ಆಲಮಟ್ಟಿ ಜಲಾಶಯದಿಂದ 3 ಲಕ್ಷ 50 ಸಾವಿರ ಕ್ಯೂಸೆಕ್ ನೀರು ಹೊರಗೆ ಬಿಡಲು ಸೂಚನೆ ನೀಡಲಾಗಿದೆ.‌ ನದಿ ಪಾತ್ರ ಜನತೆ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಮನವಿ ಮಾಡಿಕೊಂಡಿದ್ದಾರೆ. ‌ 

ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಕಾಂಗ್ರೆಸ್ ಶಾಸಕ ನಿಯೋಗ...
Category: Politics
Post date: 24-07-2121

Public News

Subject ಹುಬ್ಬಳ್ಳಿ: ರಾಜ್ಯ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ...!

ಹುಬ್ಬಳ್ಳಿ: ರಾಜ್ಯ ರಾಜಕಾರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮುಖ್ಯಮಂತ್ರಿಗಳು ಈಗಾಗಲೇ ತಮ್ಮ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ ಮತ್ತು ಕೇಂದ್ರ ನಾಯಕರ ಮಧ್ಯೆ ಏನು ಮಾತುಕತೆ ನಡೆದಿದೆ ಅದರ ವಿವರ ನನಗೆ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ವರಿಷ್ಠರ ಜೊತೆಗೆ ಏನೇ ಮಾತುಕತೆ ನಡೆದಿದ್ದರು, ಯಡಿಯೂರಪ್ಪ ಹಾಗೂ ಕೇಂದ್ರ ನಾಯಕರಿಗೆ ಮಾತ್ರ ಗೊತ್ತು. ನನ್ನನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂಬ ಬಗ್ಗೆ ಯಾರು ನನ್ನ ಜೊತೆ ಚರ್ಚೆ ಮಾಡಿಲ್ಲ ಎಂದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ, ನರೇಂದ್ರ ಮೋದಿ‌...
Category: Politics
Post date: 24-07-2121

Kshetra Samachara
PublicNext-497047-552592-Hubballi-Dharwad-Politics-node
Subject ಅಳ್ನಾವರ ತಾಲೂಕಿಗೆ ಸಚಿವ ಪ್ರಹ್ಲಾದ್ ಜೋಶಿ ಭೇಟಿ

ಅಳ್ನಾವರ: ತಾಲೂಕಿನಾಧ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಾಕಷ್ಟು ಅನಾಹುತ ಗಳಾಗಿದ್ದು, ಹುಲಿಕೇರಿ ಇಂದಿರಮ್ಮ ಕೆರೆ ಕಟ್ಟೆ ಒಡೆದು ಅನೇಕ ರೀತಿಯ ತೊಂದರೆಗಳಾಗಿವೆ.ಕೆರೆಯ ಕಟ್ಟೆ ಯೊಡೆದು ಸಾಕಷ್ಟು ಪ್ರಮಾಣದಲ್ಲಿ ನೀರು ಹೊರ ಹರಿಯುತ್ತಿದ್ದು ಹಲವು ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ಬೆಳೆ ಹಾನಿ ಕೂಡ ಉಂಟಾಗಿದೆ.

ಇದನ್ನೆಲ್ಲ ವೀಕ್ಷಣೆ ಮಾಡಲು ಇಂದು ಮಧ್ಯಾಹ್ನ ಸಚಿವ ಪ್ರಹ್ಲಾದ್ ಜೋಶಿ ತಾಲೂಕಿಗೆ ಭೇಟಿ ನೀಡಲಿದ್ದಾರೆ.ತಾಲೂಕಿನ ವೀಕ್ಷಣೆ ಅತ್ಯಂತ ಅವಶ್ಯಕ ವಾಗಿದ್ದು,ಏನೆಲ್ಲ ಪರಿಹಾರ ಕಂಡುಕೊಳ್ಳುತ್ತಾರೆ ಎಂಬುದು ಕಾದು ನೋಡಬೇಕಿದೆ.

ಮಹಾಂತೇಶ ಪಠಾಣಿ...
Category: Politics
Post date: 24-07-2121
City: Hubballi-Dharwad

Public News

Subject ಬೆಳಗಾವಿ: ಇವರು ದೆಹಲಿಗೆ ಹೋದ್ರು, ಅವರು ದೆಹಲಿಗೆ ಹೋದ್ರು, ಯಡಿಯೂರಪ್ಪ ಬೆನ್ನಿಗೆ ಚೂರಿ ಹಾಕಿದವರು ಯಾರು!?: ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ವಿಚಾರವಾಗಿ ಸಿಎಂ ಯಡಿಯೂರಪ್ಪಗೆ ಅವರ ಪಕ್ಷದವರೇ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ವಕ್ತಾರೆ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬಿಎಸವೈ ಪರ ಬ್ಯಾಟಿಂಗ್ ಮಾಡಿದ್ದಾರೆ.

ಬೆಳಗಾವಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನೊಬ್ಬಳು ಕಾಂಗ್ರೆಸ್ ಪಕ್ಷದ ಶಾಸಕಿ ಆಗಿ ಏನು ಮಾತನಾಡಲ್ಲ.‌ ಆದ್ರೆ ಸರ್ಕಾರ ಕುಂಟಿತ ಆಗಿದೆ ಕೊರೊನಾ ಆದಮೇಲೆ ನಾಯಕತ್ವ ಬದಲಾವಣೆ ಚರ್ಚೆ ಪ್ರಾರಂಭವಾಗಿದೆ.‌ ಇವರು ದೆಹಲಿಗೆ ಹೋದ್ರು ಅವರು ದೆಹಲಿಗೆ ಹೋದ್ರು.‌ ಆದರೆ ತಮ್ಮ ತಮ್ಮ ಜವಾಬ್ದಾರಿಯನ್ನು ಮಂತ್ರಿಗಳು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು...
Category: Politics
Post date: 24-07-2121

Public News

Subject ಯಾದಗಿರಿ...Exclusive ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಲು ತಕರಾರು..ಪ್ರತಿಭಟನೆಗೆ ಕುಳಿತ ಜನರು.!

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಹದನೂರು ಗ್ರಾಮದಲ್ಲಿ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡುವ ವಿಚಾರವಾಗಿ ಇಂದು ಪರಿಶಿಷ್ಟ ಜಾತಿ ಸಮುದಾಯದವರು ರಸ್ತೆ ಮೇಲೆ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಇವತ್ತು ಎಸ್ಸಿ ವಾರ್ಡ್ ನಲ್ಲಿ ಮುದಕಪ್ಪ ಎಂಬ ವೃದ್ಧ ಮೃತಪಟ್ಟಿದ್ದು, ಸ್ಮಶಾನದಲ್ಲಿ ಶವ ಇಡಲು ಗ್ರಾಮದ ರಾಮನಗೌಡ ಎಂಬುವವರು ತಕರಾರು ಮಾಡುತ್ತಿದ್ದಾರೆ ಅಂತಾ ಶವದ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ಇನ್ನು ಈ ರುದ್ರಭೂಮಿಯ ಅರ್ಧದಷ್ಟು ಜಾಗ ರಾಮನಗೌಡ ಅವರ ಹೆಸ್ರಲ್ಲಿದ್ದು, ಮೊದಲಿನಿಂದಲೂ ಅದೇ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡುತ್ತಾ ಬಂದಿದ್ದು, ಈಗಲೂ ನಮಗೆ ಅಲ್ಲೇ ಜಾಗ ಕೊಡಿ ಅಂತಾ...
Category: Infrastructure, Human Stories
Post date: 24-07-2121

Public News

Subject ಟೋಕಿಯೋ ಒಲಿಂಪಿಕ್ಸ್ : ವೇಟ್ಲಿಫ್ಟರ್ ಸೈಕೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ

ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಏಕೈಕ ವೇಟ್ಲಿಫ್ಟರ್ ಸೈಕೋಮ್ ಮೀರಾಬಾಯಿ ಚಾನು ದೇಶಕ್ಕೆ ಮೊದಲ ಪದಕ ಗೆದ್ದು ಯಶಸ್ವಿಯಾಗಿದ್ದಾರೆ. ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಭಾಜನರಾದ ಮೀರಾಬಾಯಿ ಚಾನು, ಕರ್ಣಂ ಮಲ್ಲೇಶ್ವರಿ ಬಳಿಕ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ವೇಟ್ ಲಿಫ್ಟರ್ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ.

ಸ್ಯಾಚ್ ಹಾಗೂ ಕ್ಲೀನ್ ಅಂಡರ್ ಜರ್ಕ್ ವಿಭಾಗದಲ್ಲಿ ಒಟ್ಟು 202 ಕೆಜಿ ಬಾರ ಎತ್ತಿ ಚಾನು ರಜತ ಪದಕಕ್ಕೆ ಕೊರಳೊಡ್ಡಿದ್ದಾರೆ.

ಮೊದಲ ಪ್ರಯತ್ನದಲ್ಲೇ ಇಂಪಾಲ್ ಮೂಲದ ಆಟಗಾರ್ತಿ ಸ್ನ್ಯಾಚ್ ವಿಭಾಗದಲ್ಲಿ 84 ಕೆ.ಜಿ ಭಾರವನ್ನು ಮೀರಾಬಾಯಿ...
Category: Sports
Post date: 24-07-2121

Pages