E.g., 25/07/2021
Kshetra Samachara

Subject ಕುಂದಗೋಳ : ಭರ್ತಿಯಾಯ್ತು ಗುಡೇನಕಟ್ಟಿ ಗ್ರಾಮದ ಕೆರೆ ಬಾಗಿನ ಅರ್ಪಣೆ

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಸತತವಾಗಿ ಐದಾರು ದಿನಗಳ ಮಳೆರಾಯನ ಆರ್ಭಟಕ್ಕೆ ಗ್ರಾಮದ ಜನರ ದಾಹ ತಣಿಸುವ ಒಂಬತ್ತು ಎಕರೆ ವಿಸ್ತಾರದ ಕುಡಿಯುವ ನೀರಿನ ಕೆರೆ ಭರ್ತಿಯಾಗಿದೆ.

ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಮುತೈದೆಯರು ಪೂಜೆ ಮಾಡಿದರೇ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಲ್ಲಿಕಾರ್ಜುನ ಸೊರಟೂರ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ಕೆರೆ ತುಂಬಿದ್ದು ಒಂದೇಡೆ ಸಂತೋಷವಾಗಿದೆ ಒಂದು ಕಡೆ ಅತಿಯಾದ ಮಳೆಯಿಂದ ಬೆಳೆ ನಷ್ಟವಾಗಿದ್ದು ಮನಸ್ಸಿಗೆ ನೋವಾಗಿದೆ ಎಂದರು. ಕೆರೆಗೆ ನೀರು ಸಂಗ್ರಹವಾದ ಬಳಿಕ ಗ್ರಾಮದ ಯುವಕರು ಹಾಗೂ ರಜೆ ಮೇಲೆ ಊರಿಗೆ ಬಂದ ಯೋಧ ಭರತೇಶ್...
Category: Nature
Post date: 24-07-2121
City: Hubballi-Dharwad

Kshetra Samachara

Subject ನವಲಗುಂದ : ಹೊಲಗಳಿಗೆ ನುಗ್ಗಿದ ನೀರು, ಇದು ಜಮೀನೋ ಕೆರೆಯೋ

ನವಲಗುಂದ : ತಾಲ್ಲೂಕಿನ ಹನಸಿ ಗ್ರಾಮದಲ್ಲಿ ತುಪ್ಪರಿ ಹಳ್ಳ ತುಂಬಿ ಬಂದ ಪರಿಣಾಮ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆಗಳನ್ನು ಸಂಪೂರ್ಣವಾಗಿ ಹಾಳು ಮಾಡಿದೆ. ಈ ಹಿನ್ನಲೆ ರೈತ ತಲೆ ಮೇಲೆ ಕೈಹೋತ್ತು ಕೂರುವಂತಾಗಿದೆ.

ಹೌದು ಹನಸಿ ಗ್ರಾಮದ ಮಲಿಕಾರ್ಜುನ ಗುಜ್ಜಳ ಎಂಬ ರೈತನ ಜಮೀನಿಗೆ ನೀರು ನುಗ್ಗಿದ ಪರಿಣಾಮ ಕೆರೆಯಂತೆ ಕಾಣುತ್ತಿದ್ದು ಹೆಸರು, ಹತ್ತಿ, ಗೋವಿನ ಜೋಳ ಸಂಪೂರ್ಣ ನೀರು ಪಾಲಾಗಿದ್ದು, ರೈತ ಕಣ್ಣೀರಲ್ಲಿ ಕೈತೋಳೆಯುವಂತಾಗಿದೆ. ಸರ್ಕಾರ ರೈತರ ಸಂಕಷ್ಟಕ್ಕೆ ಕೈ ಜೋಡಿಸಿ, ಪರಿಹಾರ ನೀಡಲು ಮುಂದಾಗಬೇಕಿದೆ.


Category: Nature, Agriculture
Post date: 24-07-2121
City: Hubballi-Dharwad
Kshetra Samachara
PublicNext--553275--node-nid
Subject ಉಡುಪಿ: ಜಿಲ್ಲೆಯಲ್ಲಿ ಇಂದು 129 ಜನರಿಗೆ ಕೊರೊನಾ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ತೀವ್ರತೆ ಕಡಿಮೆಯಾಗುತ್ತಿಲ್ಲ. ಇಂದು 129 ಮಂದಿಗೆ ಸೋಂಕು ತಗುಲಿದ್ದು, ಕೊರೊನಾ ಸೋಂಕಿನಿಂದ 101 ಮಂದಿ ಗುಣಮುಖರಾಗಿದ್ದಾರೆ. ಈ ಸಮಯದಲ್ಲಿ ಕೊರೊನಾದಿಂದ ಯಾವುದೇ ಸಾವು ಸಂಭವಿಸಿಲ್ಲ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಇಂದು ಜಿಲ್ಲೆಯಲ್ಲಿ ಈವರೆಗೂ ಒಟ್ಟು ಸೋಂಕಿತರ ಸಂಖ್ಯೆ 68,907ಕ್ಕೆ ಏರಿಕೆಯಾದರೆ, ಚೇತರಿಸಿಕೊಂಡವರ ಸಂಖ್ಯೆ 67,391ಕ್ಕೆ ತಲುಪಿದೆ. ಈವರೆಗೆ ಒಟ್ಟು 412 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 1,104 ಸಕ್ರಿಯ ಪ್ರಕರಣಗಳಿವೆ.


Category: Health & Fitness, COVID
Post date: 24-07-2121
City: Udupi
Kshetra Samachara

Subject ನವಲಗುಂದ : ಬೆಣ್ಣೆ ಹಳ್ಳದಲ್ಲಿ ಸಿಲುಕಿದ್ದ ಇಬ್ಬರ ರಕ್ಷಣೆ

ನವಲಗುಂದ : ತಾಲೂಕಿನ ಕೊಂಗವಾಡ ಗ್ರಾಮದ ಬೆಣ್ಣೆ ಹಳ್ಳದಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ತಹಶೀಲ್ದಾರ್ ನವೀನ ಹುಲ್ಲೂರ ಅವರ ನೇತೃತ್ವದಲ್ಲಿ ರಕ್ಷಣೆ ಮಾಡಲಾಯಿತು.

30 ವರ್ಷ ವಯಸ್ಸಿನ ದೇಸಾಯಿ ಸಂಗಯ್ಯ ಜವಳಿ ಮತ್ತು 40 ವರ್ಷ ವಯಸ್ಸಿನ ಶರಣಯ್ಯ ಸಂಗಯ್ಯ ಜವಳಿ ಅವರನ್ನು ಅಗ್ನಿಶಾಮಕ ದಳ ರಕ್ಷಣಾ ಸಿಬ್ಬಂದಿ, ನವಲಗುಂದ ತಹಶೀಲ್ದಾರ್ ನವೀನ ಹುಲ್ಲೂರ ಹಾಗೂ ಸಿಪಿಐ ಚಂದ್ರಶೇಖರ ಮಠಪತಿ ಅವರ ನೇತೃತ್ವದಲ್ಲಿ ರಕ್ಷಿಸಲಾಯಿತು.


Category: Infrastructure
Post date: 24-07-2121
City: Hubballi-Dharwad
Kshetra Samachara

Subject ಉಡುಪಿ: ಮಾಧ್ಯಮದ ಬಗ್ಗೆ ಜನರಿಗೆ ತುಂಬ ನಿರೀಕ್ಷೆಗಳಿವೆ: ಹಿರಿಯ ವಕೀಲೆ ವಾಣಿ ವಿ.ರಾವ್

ಉಡುಪಿ :ಉಡುಪಿಯ ಹಿರಿಯ ವಕೀಲೆ ವಾಣಿ ವಿ ರಾವ್ ಪಬ್ಲಿಕ್ ನೆಕ್ಸ್ಟ್ ಗೆ ಶುಭಹಾರೈಸಿದ್ದಾರೆ. ಮಾಧ್ಯಮಗಳ ಬಗ್ಗೆ ಜನರಿಗೆ ಬಹಳ ನಿರೀಕ್ಷೆಗಳಿರುತ್ತವೆ.ನಿರೀಕ್ಷೆಗೆ ತಕ್ಕ ಹಾಗೆ ಕೆಲಸ ಮಾಡಬೇಕು. ಮುಖ್ಯವಾಗಿ ನ್ಯಾಯಾಲಯದ ವರದಿಗಳನ್ನು ಪ್ರಕಟಿಸುವಾಗ ನಿಖರವಾದ ಮಾಹಿತಿ ಕೊಡಬೇಕಾಗುತ್ತದೆ.ಆ ಕೆಲಸ ಈ ಸಂಸ್ಥೆಯಿಂದ ಆಗಲಿ. ಅದರ ಜೊತೆಗೆ ನಿಷ್ಪಕ್ಷಪಾತವಾದ ಸುದ್ದಿಗಳು ಪಬ್ಲಿಕ್ ನೆಕ್ಸ್ಟ್ ನಲ್ಲಿ ಬರಲಿ.ಈ ಸಂಸ್ಥೆ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದ್ದಾರೆ.


Category: Greetings
Post date: 24-07-2121
City: Udupi, Mangalore
Kshetra Samachara
PublicNext-497321-553273-Mangalore-Health-and-Fitness-COVID-node
Subject ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ 269 ಜನರಿಗೆ ಕೊರೊನಾ

ಮಂಗಳೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಏರಿಳಿತ ಮುಂದುವರಿದಿದ್ದು, ಇಂದು ಕೂಡ ಸೋಂಕಿತರ ಸಂಖ್ಯೆ 200ರ ಗಡಿ ದಾಟಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಇಂದು 269 ಜನರಿಗೆ ಸೋಂಕು ದೃಢಪಟ್ಟಿದ್ದರೆ, 239 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದೇ ಸಮಯದಲ್ಲಿ ನಾಲ್ವರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 98,208ಕ್ಕೆ ಏರಿಕೆಯಾಗಿದ್ದು, ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 94,711ಕ್ಕೆ ಏರಿಕೆಯಾಗಿದೆ. ಈವರೆಗೂ ಒಟ್ಟು 1,389 ಮಂದಿ ಕೋವಿಡ್‌ಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ...
Category: Health & Fitness, COVID
Post date: 24-07-2121
City: Mangalore

Public News

Subject ಶಶಿಕಲಾ ಜೊಲ್ಲೆ ಮೊಟ್ಟೆ ಡೀಲ್​ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ- ಕಾರ್ಯಕರ್ತರು ಪೊಲೀಸ್ ವಶಕ್ಕೆ

ಬೆಂಗಳೂರು: ಸಚಿವೆ ಶಶಿಕಲಾ ಜೊಲ್ಲೆ ಮೊಟ್ಟೆ ಡೀಲ್​ ಪ್ರಕರಣದ ವಿಚಾರವಾಗಿ ಇಂದು ಕಾಂಗ್ರೆಸ್ ಮಹಿಳಾ ವಿಭಾಗ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಮೊಟ್ಟೆ ಟ್ರೇ ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತರು, "ದಿಕ್ಕಾರ, ದಿಕ್ಕಾರ. ಶಶಿಕಲಾ ಜೊಲ್ಲೆ ಅವರ ರಾಜೀನಾಮೆ ಪಡೆಯಲೇಬೇಕು. ಡೌನ್ ಡೌನ್‌ ಬಿಜೆಪಿ. ಸರ್ಕಾರವಂತೆ ಸರ್ಕಾರ ಅವರ ಅಪ್ಪನದಂತೆ ಸರ್ಕಾರ" ಎಂದು ಘೋಷಣೆ ಕೂಗಿ ಅಸಮಾಧಾನ ಹೊರ ಹಾಕಿದರು. ಇತ್ತ ಪ್ರತಿಭಟನೆ ನಡೆಸುತ್ತಿದ್ದ ಯುವ ಕಾಂಗ್ರೆಸ್​ನ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


Category: Politics
Post date: 24-07-2121
Kshetra Samachara

Subject ಧಾರವಾಡ: ಹುಲ್ಲಿಕೇರಿ ಕೆರೆ ಬಗ್ಗೆ ಸಿಎಂ ಜೊತೆ ನಾಳೆ ಮಾತನಾಡುತ್ತೇನೆ: ಜೋಶಿ

ಧಾರವಾಡ: ಅಳ್ನಾವರ ತಾಲೂಕಿನ ಹುಲ್ಲಿಕೇರಿಯ ಇಂದಿರಮ್ಮನ ಕೆರೆ ಒಡೆದ ಬಗ್ಗೆ ನಾಳೆ ಸಿಎಂ ಯಡಿಯೂರಪ್ಪನವರೊಂದಿಗೆ ಮಾತನಾಡುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಲ್ಲಿಕೇರಿ ಕೆರೆ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಈ ಕೆರೆ ಅಭಿವೃದ್ಧಿಗೆ ನಾಲ್ಕೂವರೆ ಕೋಟಿ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ, ವರ್ಕ ಆರ್ಡರ್ ಆದ ಮೇಲೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಈ ಬಗ್ಗೆ ಸಿಎಂ ಜೊತೆ ನಾಳೆ ಬೆಳಗಾವಿಯಲ್ಲಿ ಮಾತನಾಡಿ ಆದಷ್ಟು ಬೇಗ ಸರ್ಕಾರದಿಂದ ಹಣ ಬಿಡುಗಡೆ ಮಾಡಿ ಮತ್ತೆ ಕೆರೆ ಸರಿಪಡಿಸಲಾಗುವುದು ಎಂದರು.

ಕೇಂದ್ರದ ಗೃಹ ಸಚಿವರನ್ನು ಭೇಟಿ...
Category: Politics
Post date: 24-07-2121
City: Hubballi-Dharwad

Kshetra Samachara
PublicNext--553272--node-nid
Subject ಧಾರವಾಡ: ಜಿಲ್ಲೆಯಲ್ಲಿ ತಗ್ಗಿದ ಕೊರೊನಾ ಆರ್ಭಟ- 7 ಜನರಿಗೆ ಸೋಂಕು ದೃಢ

ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಆರ್ಭಟ ತಗ್ಗಿದೆ. ನಿನ್ನೆ 6 ಜನರಿಗೆ ಸೋಂಕು ದೃಢಪಟ್ಟಿದ್ದರೆ, ಇಂದು 7 ಮಂದಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಕೊರೊನಾ ಆತಂಕ ಕೊಂಚ ಕಡಿಮೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ ಜಿಲ್ಲೆಯ 7 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 60,416ಕ್ಕೆ ಏರಿಕೆಯಾಗಿದೆ. ಇಂದು ಒಬ್ಬರು ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 58,943ಕ್ಕೆ ಏರಿಕೆಯಾಗಿದೆ. ಇಂದು ಒಬ್ಬರು...
Category: Health & Fitness, COVID
Post date: 24-07-2121
City: Hubballi-Dharwad

Pages